ಮಹಿಳಾ ಮೀಸಲಾತಿಗೆ ಜೆಡಿಎಸ್ ಬೆಂಬಲಿಸಿ: ಜಿ.ಪಂ ಸದಸ್ಯೆ ಪ್ರೇಮಾ ಮಹಿಳೆಯರೆಲ್ಲಾ ಒಂದಾಗಿ ಬರಲು ಕರೆ

27 Mar 2018 8:09 PM |
699 Report

ಕೊರಟಗೆರೆ ಮಾ. :-  ಮಹಿಳೆಯರಿಗೆ ಎಲ್ಲಾ ಹಂತದಲ್ಲಿಯೂ ಸಮಾನತೆಯನ್ನು ಜೆಡಿಎಸ್ ಪಕ್ಷ ನೀಡಿದೆ ಎಂದು ಜಿ.ಪಂ ಮಾಜಿ ಅಧ್ಯಕ್ಷಯೂ ಆದ ಹಾಲಿ ಜಿ.ಪಂ ಸದಸ್ಯ ಪ್ರೇಮಾ ತಿಳಿಸಿದರು. ಪಟ್ಟಣ ದ ಲಕ್ಷ್ಮಿನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಮಹಿಳಾ ಘಟಕದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

    ಇಡೀ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳೂ ಸೇರಿದಂತೆ ಎಲ್ಲಾ ಹಂತದಲ್ಲೂ ಮಹಿಳೆಯರಿಗೆ ಜೆಡಿಎಸ್ ಪಕ್ಷದಲ್ಲಿ ಹೆಚ್ಚಿನ ಆಧ್ಯತೆಯಿದೆ ಬಹುತೇಕ ಮಹಿಳೆಯರು ಮುಖ್ಯವಾಹಿನಿಗೆ ಬರಲು ಅನುವು ಮಾಡಿಕೊಟ್ಟಿದೆ.. ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿಯವರ    ವಿಕಾಸ ಪರ್ವಕ್ಕೆ ಅತೀ ಹೆಚ್ಚಿನ ಮಹಿಳೆಯರು ಪಾಲ್ಗೊಂಡು ಕೊರಟಗೆರೆ ಜೆಡಿಎಸ್ ಭದ್ರಕೋಟೆ... ಮತ್ತು ಕ್ಷೇತ್ರದಲ್ಲಿ ಮಹಿಳೆಯರ ಸಾಮಥ್ಯವನ್ನು ಸೂಚಿಸಬೇಕಿದ್ದು ನಾವು ಬರುವುದರೊಂದಿಗೆ ಹೆಚ್ಚು ಜನರನ್ನು ಕರೆತರಲು ಕರೆ ನೀಡಿದರು. 
    ಜೆಡಿಎಸ್ ತಾಲೂಕು ಮಹಿಳಾ ಅಧ್ಯಕ್ಷೆ ಸಿದ್ದಗಂಗಮ್ಮ ಮಾತನಾಡಿ ಕುಮಾರ ಪರ್ವ ಕಾರ್ಯಕ್ರಮ ಏ.1 ಕ್ಕೆ ಪಟ್ಟಣ ದಲ್ಲಿ ಆಯೋಜಿಸಿದ್ದ ಪ್ರತೀ ಗ್ರಾ.ಪಂ ವ್ಯಾಪ್ತಿಯಲ್ಲಯೂ ಮಹಿಳೆಯರು ಸಂಘಟಿತರಾಗಿ ಸಮಾವೇಶಕ್ಕೆ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
     ತಾಲೂಕು ಮಹಿಳಾ ಘಟಕದ ಕಾರ್ಯಾಧ್ಯಕ್ಷ ಶಶಿಕಲಾ ಮಾತನಾಡಿ ರಾಜ್ಯದಲ್ಲಿ ರೈತರು, ಮಹಿಳೆಯರು ಸ್ವಾವಲಂಭಿ ಜೀವನ ನಡೆಸಲಾಗದಂತಹ ಸ್ಥಿತಿ   ನಿರ್ಮಾಣವಾಗಿದ್ದು ರಾಜ್ಯದಲ್ಲಿ  ಅಧಿಕಾರ  ನಡೆಸುತ್ತಿರುವಂತಹ ಕಾಂಗ್ರೇಸ್  ಪ್ರತಿಯೊಂದು ಹಂತದಲ್ಲಿಯೂ ಭ್ರಷ್ಟತೆ ಇದ್ದು ಇದನ್ನು ಹೋಗಲಾಡಿಸಲು ನಮ್ಮ ಪ್ರಾದೇಶಿಕ ಪಕ್ಷ ಜೆಡಿಎಸ್ ಗೆ ಆದ್ಯತೆ ನೀಡಬೇಕು ಎಂದು ಹೇಳಿದರು.
      ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಅಧ್ಯಕ್ಷ ಕೆ.ಎನ್ ಕುಸುಮಾ ಜಗನ್ನಾಥ್, ಮಾಜಿ ತಾ.ಪಂ ಸದಸ್ಯಯರಾದ ಯಲ್ಲಮ್ಮ, ರಾಧಮ್ಮ, ರಾಜಮ್ಮ, ಗ್ರಾ.ಪಂ ಸದಸ್ಯಯಾದ ಭಾಗ್ಯಮ್ಮ, ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಹೆಚ್.ಕೆ ಮಹಾಲಿಂಗಪ್ಪ, ಹುಲೀಕುಂಟೆ ಗ್ರಾ.ಪಂ ಮಾಜಿ ಉಪಾಧ್ಯಕ್ಷ ಹೆಚ್.ಆರ್ ಶ್ರೀಧರ್ ಸೇರದಂತೆ ನೂರಾರು ಮಹಿಳಾ ಕಾರ್ಯಕರ್ತೆಯರು ಇದ್ದರು.  ( ಚಿತ್ರ ಇದೆ) 

Edited By

Raghavendra D.M

Reported By

Raghavendra D.M

Comments