A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

ಕಮಲ ಬಿಟ್ಟು "ಕೈ" ಹಿಡಿದ ವಾಲೆ ಚಂದ್ರಯ್ಯ... ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಸೇರಿದ ವಾಲೆಚಂದ್ರಯ್ಯ | Civic News

ಕಮಲ ಬಿಟ್ಟು "ಕೈ" ಹಿಡಿದ ವಾಲೆ ಚಂದ್ರಯ್ಯ... ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷ ಸೇರಿದ ವಾಲೆಚಂದ್ರಯ್ಯ

27 Mar 2018 7:45 PM |
360 Report

ಕೊರಟಗೆರೆ ಮಾ. :- ಕಾಂಗ್ರೇಸ್ ಪಕ್ಷ ಎಂದೂ ಸಹ ಹಿಂದುಳಿತ, ಅಲ್ಪಂಖ್ಯಾತ ಮತ್ತು ದಲಿತರ ಪರವಾಗಿಯೇ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು. ಕೊರಟಗೆರೆ ಪಟ್ಟಣ ಣದಲ್ಲಿ ತುಮಕೂರು ಮಾಜಿ ನಗರಸಭಾ ಉಪಾಧ್ಯಕ್ಷ ವಾಲಿಚಂದ್ರಯ್ಯರನ್ನು ಕಾಂಗ್ರೇಸ್ ಪಕ್ಷಕ್ಕೆ ಅಧಿಕೃತ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.


      ಸರ್ವರಿಗೂ ಸಮಪಾಲು... ಸರ್ವರಿಗೂ ಸಮಬಾಳು ಎನ್ನುವ ಸಿದ್ದಾಂತದಡಿ ಪಕ್ಷ ಇದ್ದು ಇದರಿಂದಲೇ ಎಲ್ಲಾ ಸಮುದಾಯ, ಎಲ್ಲಾ ಧರ್ಮದವರೂ ಕಾಂಗ್ರೇಸ್ ಪಕ್ಷವನ್ನು ಒಪ್ಪುತ್ತಾರೆ ಎಂದರು.

ವಾಲೆ ಚಂದ್ರಯ್ಯ ಮನದಾಳದ ಮಾತು  


      ದಲಿತ ಸಮುದಾಯಗಳ ಹಕ್ಕು ಮತ್ತು ನ್ಯಾಯಯುತ ಸ್ಥಾನಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಸ್ವಇಚ್ಛೆಯಿಂದ ಸೇರಿಕೊಂಡಿದ್ದೇನೆ... ದಲಿತ ನಾಯಕ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಗೆಲುವಿಗೆ  ಟೊಂಕ  ಕಟ್ಟಿ ಶ್ರಮಿಸುತ್ತೇನೆ...  ಮಾದಿಗ ಸಮುದಾಯದ ಸಾಮಾಜಿಕ ಸ್ಥಾನಮಾನದ ಹೋರಾಟಕ್ಕಾಗಿ ಮತ್ತು ಸದಾಶಿವ ಆಯೋಗದ ಜಾರಿಗಾಗಿ ಕಾಂಗ್ರೇಸ್ ಪಕ್ಷಕ್ಕೆ  ಸೇರಿದ್ದೇನೆ ... ಪರಮೇಶ್ವರ್ ನಮ್ಮಲ್ಲ  ಆಶಯಗಳನ್ನು ಈಡೇರಿಸುತ್ತಾರೆ ಎಂದು ನಂಬಿದ್ದೇನೆ.
     ಇಂದು ಸಮಾಜದದಲ್ಲಿ ಎಡಗೈ (ಮಾದಿಗ)  ಜನಾಂಗದ ಏಳಿಗಾಗಿ ಮತ್ತು ಸಾಮಾಜಿಕ,  ಆರ್ಥಿಕವಾಗಿ  ಸದಾಶಿವ ಆಯೋಗವನ್ನು ಜಾರಿಗೊಳ್ಳಬೇಕಾದ ಅನಿವಾರ್ಯತೆ ಇದೆ ಎಲ್ಲಾ ಸಮುದಾಯಗಳು ಇದಕ್ಕೆ ಕೈ ಜೋಡಿಸಬೇಕು  ಸದಾಶಿವ  ಆಯೋಗ ಜಾರಿಯಾಗಬೇಕು.. ಇದರಿಂದ ಯಾರಿಗೂ ತೊಂದರೆಯಾಗುವುದಿಲ್ಲ  ಇದರ ಬಗ್ಗೆ ತಪ್ಪು ಕಲ್ಪನೆಯನ್ನು ಹಬ್ಬಿಸುತ್ತಿದ್ದಾರೆ ಅದೇ ರೀತಿ ಪರಮೇಶ್ವರ್ ಇದಕ್ಕೆ ವಿರುದ್ದವಾಗಿದ್ದಾರೆ ಎನ್ನುವ ಮಾತುಗಳನ್ನಾಡುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಮಾತು, ಪರಮೇಶ್ವರ್ ಸದಾಶಿವ  ಆಯೋಗ  ಅನುಷ್ಠಾನದ ಪರವಾಗಿದ್ದಾರೆ ಆದ್ದರಿಂದಲೇ ನಾನು ಅವರ ಮತ್ತು ಕಾಂಗ್ರೇಸ್ ಪಕ್ಷದ ತತ್ವ ಸಿದ್ದಾಂತಗಳಿಗೆ ಬದ್ಧವಾಗಿ   ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ.
     ಈ ಸಂಧರ್ಭದಲ್ಲಿ ರಾಜ್ಯ ತೆಂಗು ಮತ್ತು ನಾರು ನಿಗಮದ ಅಧ್ಯಕ್ಷ ವೆಂಕಟಾಚಲಯ್ಯ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಚಂದ್ರಯ್ಯ, ತಾಲೂಕು ಮಹಿಳಾ ಅಧ್ಯಕ್ಷ ಜಯಮ್ಮ, ಯುವ ಕಾಂಗ್ರೇಸ್ ಅಧ್ಯಕ್ಷ ವಿನಯ್ ಕುಮಾರ್, ಕೆಪಿಸಿಸಿ ಕಾರ್ಯದಶರ್ಿ ದಿನೇಶ್, ನಾಟಕ ಅಕಡೆಮಿ ಸದಸ್ಯ ಮೈಲಾರಪ್ಪ, ಎಪಿಎಂಸಿ ಸದಸ್ಯ ಜಯರಾಮ್, ಮಾಜಿ ಜಿ.ಪಂ ಅಧ್ಯಕ್ಷ ಜಾಲಗಿರಿ ಕೃಷ್ಣಮೂರ್ತಿ, ಮಾಜಿ ತಾ.ಪಂ ಅಧ್ಯಕ್ಷೆ ಸೀಬಿರಂಗಮ್ಮ, ಮುಖಂಡರಾದ ಹೆಚ್.ಎಂ ರುದ್ರಪ್ರಸಾದ್, ಚಿಕ್ಕರಂಗಯ್ಯ, ಸೀಬಿರಂಗಮ್ಮ, ಇತರರು ಇದ್ದರು. 

Edited By

Raghavendra D.M

Reported By

Raghavendra D.M

Comments