ಕನಸು ಕಾಣದವನೇ ಬಡವ: ಉದ್ಯಮಿ ತಿರುಮಲೇಶ್

26 Mar 2018 7:46 PM |
463 Report

ಕೊರಟಗೆರೆ ಮಾ. :-ಕೇವಲ ಹಣವಿದ್ದವನನ್ನನೇ ಶ್ರಿಮಂತ ಎನ್ನಲಾಗುವುದಿಲ್ಲ ಉತ್ತಮ ಜ್ಞಾನ ಮತ್ತು ಚಾರಿತ್ರ್ಯವನ್ನು ಉಳಿಳ್ಳವನು ನಿಜವಾತ ಶ್ರೀಮಂತ ಎಂದು ಉದ್ಯಮಿ ತಿರುಮಲೇಶ್ ಹೇಳಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿಯ ಅಕ್ಕಿರಾಂಪುರ ಗ್ರಾಮದಲ್ಲಿ ನಡೆದ ಸಕರ್ಾರಿ ಪ್ರಾಥಮಿಕ ಪಾಠ ಶಾಲೆ ಮತ್ತು ಸರಕಾರಿ ಪ್ರೌಢಶಾಲೆಯ ಮಕ್ಕಳಿಗೆ ಉಚಿತವಾಗಿ ವಿದ್ಯುತ್ ಟ್ಯೂಬ್ ಲೈಟ್ ವಿತರಿಸಿ ಮಾತನಾಡಿದರು.

ಮುಂದಿನ ಬದುಕಿನ ಬಗ್ಗೆ ಕನಸ್ಸು ಕಟ್ಟದವನು ಶ್ರೀಮಂತ ಯಾರು ಕನಸ್ಸನ್ನು ಕಾಣುವುದಿಲ್ಲವೋ ಅವನೇ ಬಡವ ಎಂದರು. ದೇಶದಲ್ಲಿ ಶೇ.80 ರಷ್ಟು ಜನರು ಬಡತನದಲ್ಲಿ ದ್ದು ಎಷ್ಟೋ ಜನ ಬೀದಿ ದೀಪದಲ್ಲಿ ಓದಿ ಉನ್ನತ ಮಟ್ಟಕ್ಕೆ ಹೋಗಿದ್ದಾರೆ ಅದರೆ ಇಂದು ಸಕರ್ಾರ ಅನೇಕ ಯೋಜನೆಗನ್ನು ನೀಡುತ್ತಿದ್ದು ಉಜ್ವಲ ಭವಿಷ್ಯವನ್ನು ನಿಮರ್ಿಸಿಕೊಳ್ಳು ಉತ್ತಮ ಅವಕಾಶವಿದ್ದು ಉತ್ತಮ ಬದುಕನ್ನು ಕಟ್ಟಿಕೊಳ್ಳಿ ಎಂದು ಕರೆ ನೀಡಿದರು.
ನಿವೃತ್ತ ಶಿಕ್ಷಕರಾದ ಗುರುದೇವಯ್ಯ ಮಾತನಾಡಿ ಉದ್ಯಮಿ ತಿರುಮಲೇಶ್ ಉತ್ತಮ ಚಿಂತನೆಯಡಿಯಲ್ಲಿ ಹೊಳವನಹಳ್ಳಿ, ಹುಲೀಕುಂಟೆ, ಕತ್ತೀನಾಗೇನಹಳ್ಳಿ, ಗೌರಗಾನಹಳ್ಳಿ ಸೇರಿದಂತೆ ಅನೇಕ ಸಕರ್ಾರಿ ಶಾಲೆಗಳ ವಿಧ್ಯಾಥರ್ಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ವಿದ್ಯುತ್ ಟ್ಯೂಬ್ ಲೈಟ್ ನೀಡುತ್ತಿದ್ದು ಇದರ ಬಳಕಲೆ ಮಾಡಿಕೊಂಡು ಉನ್ನತ ಮಟ್ಟಕ್ಕೆ ಹೋದವರು ಇದೇ ರೀತಿಯ ಸಮಾಜಿಕ ಕಾರ್ಯ ಮಾಡಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಡಾ.ಕರೀಂಪಾಷ, ಹೊಳವನಹಳ್ಳಿ ಅಜಾಂಪಾಷ ಮುಖ್ಯ ಶಿಕ್ಷಕ ಸಿದ್ದಲಿಂಗರಾಧ್ಯ, ಸಹ ಶಿಕ್ಷಕ ಗಿರೀಶ್, ಶಿಕ್ಷಕರಾದ ನರಸಿಂಹಯ್ಯ, ಕೋಟೆಕಲ್ಲಪ್ಪ, ಅನುಪಮ, ಸ್ಮಿತಾ, ಮಂಜುನಾಥ್, ಪಾತಿಮಾ ಸುಲ್ತಾನ್, ನಾರಾಯಣ್, ಮಂಜುನಾಥ್, ಅಪ್ಪಾಜಿ ಗೌಡ, ಸುಷ್ಮಾ ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)
 

Edited By

Raghavendra D.M

Reported By

Raghavendra D.M

Comments