‘ಕೈ’ ರಾಜಕೀಯದ ಬಗ್ಗೆ ಭವಿಷ್ಯ ವಾಣಿ ನುಡಿದ ದೇವೇಗೌಡ್ರು

26 Mar 2018 6:01 PM |
6907 Report

ಕೆಂಪೇಗೌಡ ಕೋಟೆ ಮೈದಾನದಲ್ಲಿ ನಡೆದ ವಿಕಾಸ ಪರ್ವ ಸಮಾವೇಶ ಉದ್ಘಾಟಿಸಿ ಮಾತ ನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು.  ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುವ ಹಗಲು ಕನಸು ಕಾಣುತ್ತಿದ್ದಾರೆನ್ನುವ ಸಿಎಂ ಸಿದ್ದರಾಮಯ್ಯಗೆ ಜನರೇ ಏನೆಂದು ತೋರಿಸುತ್ತಾರೆ. ಕುಮಾರಸ್ವಾಮಿಗೆ ದೈವಿಶಕ್ತಿ ಆಶೀರ್ವಾದವಾಗಿದೆ.

ಜೆಡಿಎಸ್ ಬಿಜೆಪಿಯ’ಬಿ' ಟೀಮ್ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ತನ್ನ ರಾಜಕೀಯದ ಕೊನೆ ಹೋರಾಟದಲ್ಲಿ ‘ಎ' ಟೀಮ್ ಯಾವುದು, ‘ಬಿ' ಟೀಂ ಯಾವುದೆಂಬುದನ್ನು ತೋರಿಸುತ್ತೇನೆ  ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಈಗ ಸಿಎಂ ಸಿದ್ದರಾಮಯ್ಯ ಪಾದದಡಿಯಲ್ಲಿದೆ. ಪ್ರಧಾನಿ ಮೋದಿ ಕಾಂಗ್ರೆಸ್ 10 ಪರ್ಸೆಂಟ್ ಸರ್ಕಾರ ಎಂದಿದ್ದಾರೆ. ಜನಾದೇಶದಿಂದ ಅವರು ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ'' ಎಂದರು. ""ಕಾಂಗ್ರೆಸ್ ಸರ್ಕಾರ ಎಷ್ಟು ದಿನ ಜನರನ್ನು ಬ್ಲಾಕ್ವೆುಲ್ ಮಾಡಲು ಸಾಧ್ಯ? ಜನತಾ ಪಕ್ಷವಿದ್ದಾಗ ರಾಮಕೃಷ್ಣ ಹೆಗಡೆ ಅವರು, ಸಿದ್ದರಾಮಯ್ಯ ಅವರನ್ನು ಕಾವಲು ಸಮಿತಿ ಅಧ್ಯಕ್ಷರನ್ನಾಗಿ ಮಾಡಿದರು. ಆಗ ಯಾವುದೋ ಹೋಟೆಲ್ ನಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರನ್ನು ಕರೆತಂದಿದ್ದು ಕುಮಾರಸ್ವಾಮಿ. ಅವರ ಮೇಲೆಯೇ ಹೊಟ್ಟೆ ಕಿಚ್ಚು ಪಡುತ್ತಿದ್ದೀರಿ? ಕುಮಾರಸ್ವಾಮಿ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು'' ಎಂದರು.

ಕಾಂಗ್ರೆಸ್ ಗೆ ದೇಶದಲ್ಲಿ ಸ್ಥಾನಮಾನವಿಲ್ಲ. ಬಿಎಸ್ಪಿ ನಂತರ ಶರದ್ ಪವಾರ್ ತಮ್ಮೊಂದಿಗೆ ಕೈಜೋಡಿಸಲು ಸಿದ್ದವಾಗಿದ್ದಾರೆ. ಈಗ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ನ ಶಾಸಕರನ್ನೇ ಸೇರ್ಪಡೆ ಮಾಡಿಕೊಂಡಿದ್ದಾರೆ. ಅವರಿಂದಲೇ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಕಾದು ನೋಡಿ'' ಎಂದು ಭವಿಷ್ಯ ನುಡಿದರು. ಇದೇ ವೇಳೆ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ಎಂ.ಕೃಷ್ಣಮೂರ್ತಿ,ಜೆಡಿಎಸ್ ಗೆ  ಸೇರ್ಪಡೆಗೊಂಡರು. ನಾನು ಪುತ್ರ ವ್ಯಾಮೋಹದಿಂದ ಮಾತನಾಡುತ್ತಿಲ್ಲ. 85ನೇ ವಯಸ್ಸಿನಲ್ಲೂ ಸೋತು ಗೆಲ್ಲುವ ಸ್ವಾಭಿಮಾನವಿದೆ. 1972ರಲ್ಲಿ
ಮಾಗಡಿ ರಂಗನಾಥಸ್ವಾಮಿ ಕ್ಷೇತ್ರಕ್ಕೆ ಬಂದಿದ್ದೆ. ರಾಜಕಾರಣದಲ್ಲಿ ಬಿದ್ದಂಥ ಸಂದರ್ಭದಲ್ಲಿ ಮಾಗಡಿ, ರಾಮನಗರ, ಕನಕಪುರದ ಜನ ಎತ್ತಿ ನಿಲ್ಲಿಸಿದ್ದಾರೆ. ಯಾರಿಗೆ ದೈವದ ಬಗ್ಗೆ ನಂಬಿಕೆಯಿಲ್ಲವೋ ಅವರು ನಾಶವಾಗುವುದು ಶತಸಿದ್ಧ. ಸಿಎಂ ಸಿದ್ದರಾಮಯ್ಯ ಅವರದ್ದು ದುರಹಂಕಾರದ ಪರಮಾವಧಿ. ಯಾವ ಪಕ್ಷ ತಮ್ಮನ್ನು ಬೆಳೆಸಿತೋ, ಆ ಪಕ್ಷದಿಂದಲೇ ನೀವು ಪತನವಾಗುತ್ತೀರಿ ಎಂದು ಪ್ರತಿಜ್ಞೆ ಮಾಡುತ್ತೇನೆ. ಈ ಬಾರಿ ಕಾಂಗ್ರೆಸ್ ಕೊನೆ ಕಾಣಿಸುತ್ತೇನೆ'' ಎಂದು ದೇವೇಗೌಡರು ಅವೇಶಭರಿತರಾಗಿ ಹೇಳಿದರು.

 

Edited By

Shruthi G

Reported By

hdk fans

Comments