ಕೊರಟಗೆರೆ ಬಾಜಪಕ್ಕೆ ಗಂಗಹನುಮಯ್ಯ ಸೂಕ್ತ ಅಭ್ಯರ್ಥಿ: ಸ್ಥಳೀಯರ ಒತ್ತಾಯ

25 Mar 2018 7:29 PM |
1140 Report

ಕೊರಟಗೆರೆ ಮಾ.  :-  ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಅಭ್ಯಥರ್ಿಯ ವಿಚಾರವಾಗಿ ಪಕ್ಷದಿಂದ ಎರಡು ಸಮೀಕ್ಷೆಗಳನ್ನು ನಡೆಸಿದ್ದು ಮೂರನೇ ಸಮೀಕ್ಷೆ ನಡೆಸಿ ಅಭ್ಯರ್ಥಿಯನ್ನು  ಆಯ್ಕೆ ಘೋಷಣೆ ಮಾಡಲಾಗುವುದು ಎಂದು ಎಸ್.ಸಿ ಮೋರ್ಚಾ ರಾಜ್ಯ ಕಾರ್ಯರ್ಶಿ ಪಿ.ಎಲ್ ನರಸಿಂಹಮೂರ್ತಿ ಹೇಳಿದರು. ಪಟ್ಟ ಣದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಎಲ್ಲಾ ಸ್ಥಳೀಯ ಮುಖಂಡರ ಸಭೆ ನಡೆಸಿ ಒಮ್ಮತದಿಂದ ಗಂಗಹನುಮಯ್ಯ ಪಕ್ಷದ ಸೂಕ್ತ  ಅಭ್ಯರ್ಥಿಯಾಗಲಿದ್ದಾರೆ ಭರವಸೆ ನೀಡಿದರು.

       ಪ್ರತೀ ಗ್ರಾ.ಪಂ ಹಂತದಲ್ಲಿ ಪಕ್ಷ ಸಂಘಟನೆ ನಡೆಸಲು ಅಭ್ಯರ್ಥಿ ಆಂಕಾಕ್ಷಿಗಳಿಗೆ ಸೂಚಿಸಿರುವುದಾಗಿ ಮಾಹಿತಿ ನೀಡಿದರು.
ಕಾರ್ಯಕರ್ತರೆಲ್ಲರ ಒಮ್ಮತದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಗಂಗಹನುಮಯ್ಯ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಘಟಕದ ಪ್ರಧಾನ ಕಾರ್ಯದರ್ಶಿ ಎಸ್. ಪವನ್ ಕುಮಾರ್ ತಿಳಿಸಿದರು.
2008 ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ 33 ಸಾವಿರ ಮತವನ್ನು ಗಂಗಹನುಮಯ್ಯ ಪಡೆದಿದ್ದರು ಕ್ಷೇತ್ರದ ಬಗ್ಗೆ ಸಂಪೂರ್ಣ ಮಾಹಿತಿಯಿರುವ ಇವರೇ ಸೂಕ್ತ ಎಂದು ವರಿಷ್ಠರಿಗೆ ತಿಳಿಸುವುದಾಗಿ ಹೇಳಿದರು.
      ಮಾಜಿ ಶಾಸಕ ಗಂಗಹನುಮಯ್ಯ ಮಾತನಾಡಿ ಸಕ್ರಿಯ ರಾಜಕಾರಣದಿಂದ ದೂರ ಉಳಿಯಬೇಕು ಎಂದು ಬಯಸಿದ್ದೆ ಆದರೆ ಕಾರ್ಯಕರ್ತರ ಒತ್ತಾಸೆಗೆ ಮಣಿದು ಈ ಬಾರಿ ಪಕ್ಷ ರಾಜ್ಯಾಧ್ಯಕ್ಷ ಬಿ.ಎಸ್ ಯಡ್ಯೂರಪ್ಪನವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದು ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆ ಎಂದು ಹೇಳಿದರು.
ಎಲ್ಲರ ಒತ್ತಾಸೆಯಂತೆ ನಾನು ಅಭ್ಯಥರ್ಿಯಾಗಲು ಬಯಸಿದ್ದು ಪಕ್ಷದ ವರಿಷ್ಠರು ನನ್ನ ಸ್ಪಧರ್ೆಗೆ ಒಪ್ಪಿದರೆ ನಾನು ಸ್ಪರ್ಧಿಸುತ್ತೇನೆ ಇಲ್ಲವಾದರೆ ನಾನು ಪಕ್ಷ ಸಂಘಟನೆಗೆ ಬದ್ಧವಾಗಿರುತ್ತೇನೆ ಇದರಲ್ಲಿ ಯಾವುದೇ ಸಂಶಯವಿಲ್ಲ, ಯಾವುದೇ ಕಾರಣಕ್ಕೂ ಬಿಜೆಪಿಯನ್ನು ತೊರೆಯುವುದಿಲ್ಲ ಎಂದರು ಸ್ಪಷ್ಟಪಡಿಸಿದರು.
       ಸಭೆಯಲ್ಲಿ ರಾಜ್ಯ ಒಬಿಸಿ ಪ್ರಧಾನ ಕಾರ್ಯದರ್ಶಿ ತಿಮ್ಮಜ್ಜ, ತಾಲೂಕು ಪ್ರಧಾನ ಕಾರ್ಯದರ್ಶಿ.ಎಸ್ ಉಲ್ಲಾಸ್, ಆರ್.ಪಿ ರವಿಶಂಕರ್,ನಾಗರಾಜು, ಜಿಲ್ಲಾ ರೈತ ಮೋರ್ಚಾದಾ ಉಪಾಧ್ಯಕ್ಷ  ಪ್ರಸನ್ನಕುಮಾರ್,ಜಿಲ್ಲಾ ಎಸ್.ಸಿ ಮೋರ್ಚಾ ಉಪಾಧ್ಯಕ್ಷ ಸಿ.ಎಸ್ ಹನುಮಂತರಾಜು, ಜಿಲ್ಲಾ ಎಸ್.ಟಿ ಮೋಚರ್ಾ ಪ್ರಧಾನ ಕಾರ್ಯದರ್ಶಿ ಕೆ.ಎನ್ ವಿಜಯ್ ಕುಮಾರ್,ತಾಲೂಕು ಯುವ ಮೋಚರ್ಾ ಅಧ್ಯಕ್ಷ ಗುರುಧತ್, ಖಜಾಂಚಿ ಪುಟ್ಟವೀರಯ್ಯ, ಯುವ ಮುಖಂಡರಾದ ಆಟೋ ಕೆ. ಗೋಪಾಲಕೃಷ್ಣ, ಸಂದೀಪ್, ನಂಜುಂಡಯ್ಯ, ಆಟೋ ಪುಟ್ಟಣ್ಣ, ರವಿಕುಮಾರ್, ಪ್ರಕಾಶ್ ರೆಡ್ಡಿ ಸೇರಿದಂತೆ ಇತರರು ಇದ್ದರು. ( ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments