ಜೆಡಿಎಸ್ ನ ಏಳು ಬಂಡಾಯ ಶಾಸಕರಿಗೆ ಆರು ವರ್ಷಗಳ ಕಾಲ ಮುಂದುವರಿಯಲಿದೆ ಗಂಡಾಂತರ !!

22 Mar 2018 6:11 PM |
19176 Report

ಜೆಡಿಎಸ್ ಪಕ್ಷದ ಏಳು ಬಂಡಾಯ ಶಾಸಕರ ಸ್ಥಿತಿ ಶೋಚನೀಯವಾಗಿದೆ. ಜೆಡಿಎಸ್ ನ ಬಂಡಾಯ ಶಾಸಕರು 23ರಂದು ನಡೆಯುವ ರಾಜ್ಯಸಭಾ ಚುನಾವಣೆಯಲ್ಲಿ ಯಾರಿಗೆ ಮತ ಚಲಾಯಿಸುತ್ತಾರೆ ಎಂಬುವುದು ಕುತೂಹಲಕಾರಿಯಾಗಿದೆ.

ಇದೇ ತಿಂಗಳ 23ರಂದು ನಡೆಯುವ ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿರುವ ಬಿ.ಎಂ. ಫಾರೂಕ್ ಅವರಿಗೆ ಮತ ಚಲಾಯಿಸುವಂತೆ ಪಕ್ಷವು ಎಲ್ಲಾ ಶಾಸಕರಿಗೂ ವಿಪ್ ನೀಡಿದ್ದು, ಇದೀಗ ಏಳು ಬಂಡಾಯ ಶಾಸಕರೂ ಸಹ ತಾವು ಜೆಡಿಎಸ್ ಪಕ್ಷದ ಸದಸ್ಯರು ಎಂದು ಒಪ್ಪಿಕೊಂಡಿರುವ ಕಾರಣಕ್ಕಾಗಿ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿರುವ ಬಿ.ಎಂ. ಫಾರೂಕ್ ಅವರಿಗೆ ಅನಿವಾರ್ಯವಾಗಿ ಮತ ಚಲಾಯಿಸಲೇಬೇಕಾಗಿದೆ. ಒಂದು ವೇಳೆ ಈ ವಿಪ್ ಅನ್ನು ಉಲ್ಲಂಘಿಸಿದರೆ, ಈ ಏಳು ಬಂಡಾಯ ಶಾಸಕರು 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಲು ಉಚ್ಚ ನ್ಯಾಯಾಲಯ ಆದೇಶ ನೀಡುವ ಸಾಧ್ಯತೆ ಇದ್ದು, ಇದೀಗ ಏಳೂ ಬಂಡಾಯ ಶಾಸಕರು ಅಡಕತ್ತರಿಯಲ್ಲಿ ಸಿಲುಕಿಕೊಂಡಿದ್ದಾರೆ.

ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ಬಿ.ಎಂ. ಫಾರೂಕ್ ಅವರಿಗೆ ಮತ ಚಲಾಯಿಸಿದರೆ, ಬಂಡಾಯ ಶಾಸಕರು ಮುಂದೆ ಯಾವ ಪಕ್ಷವನ್ನಾದರೂ ಸೇರಿ ಮುಂದಿನ ಚುನಾವಣೆಗಳನ್ನು ಎದುರಿಸಬಹುದಾಗಿದೆ. ಒಂದು ವೇಳೆ ಇದಕ್ಕೆ ವಿರುದ್ಧವಾಗಿ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷದ ರಾಜ್ಯಸಭಾ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಿದರೆ, ಅವರ ರಾಜಕೀಯ ಭವಿಷ್ಯಕ್ಕೆ ಸಂಚಕಾರ ಬಂದೊದಗುವುದು ನಿಶ್ಚಿತ. ಬಂಡಾಯ ಶಾಸಕರಿಗೆ ಇರುವುದು ಒಂದೇ ದಾರಿ, ರಾಜ್ಯಸಭಾ ಚುನಾವಣೆಯಲ್ಲಿ ಬಿ.ಎಂ. ಫಾರೂಕ್ ಅವರಿಗೆ ಮತ ಚಲಾಯಿಸುವುದು, ಇಲ್ಲದಿದ್ದರೆ ಪಕ್ಷದ ವಿಪ್ ಅನ್ನು ಎರಡನೇ ಬಾರಿ ಉಲ್ಲಘಿಸಿದಂತಾಗುತ್ತದೆ. ತದನಂತರ ಏಪ್ರಿಲ್ 30ರ ತನಕ ಸಭಾಧ್ಯಕ್ಷರು ಯಾವ ನಿರ್ಧಾವೂ  ತೆಗೆದುಕೊಳ್ಳದಿದ್ದರೆ, ಉಚ್ಚ ನ್ಯಾಯಾಲಯವೇ ಈ ಸಪ್ತ ಶಾಸಕರನ್ನು ಅನರ್ಹಗೊಳಿಸಿ, ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧ ಹೇರಬಹುದು ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.

Edited By

Shruthi G

Reported By

hdk fans

Comments