ದೇವೇಗೌಡ್ರು ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಬಂಡಾಯ ಶಾಸಕರು

21 Mar 2018 4:20 PM |
582 Report

ರಾಜ್ಯಸಭೆ ಚುನಾವಣೆ ವೇಳೆ ಪಕ್ಷದ ವಿರುದ್ಧ ಮತ ಹಾಕಿ ಜೆಡಿಎಸ್ ನಿಂದ ಅಅನರ್ಹಗೊಂಡ 7 ಬಂಡಾಯ ಶಾಸಕರಿಗೆ ಈಗ ಬಿಸಿ ಮುಟ್ಟಿರುವಂತೆ ಕಾಣುತ್ತಿದೆ.ಒಂದೆಡೆ ಈ ಶಾಸಕರ ಅನರ್ಹ ವಿಚಾರವಾಗಿ ತೀರ್ಪು ನೀಡುವ ವಿಚಾರವಾಗಿ ಹೈ ಕೋರ್ಟ್ ವಿಧಾನಸಭೆ ಸ್ಪೀಕರ್ ಕೆ.ಬಿ ಕೋಳಿವಾಡ ಅವರಿಗೆ ಪ್ರಶ್ನೆ ಹಾಕಿದ್ದು, ಅಡ್ವೋಕೇಟ್ ಜೆನರಲ್ ಹಾಗೂ ಅಡಿಷನಲ್ ಅಡ್ವೋಕೇಟ್ ಜೆನರಲ್ ಈ ವಿಚಾರವಾಗಿ ಕೋಳಿವಾಡ ಅವರೊಂದಿಗೆ ಚರ್ಚೆ ಆರಂಭಿಸಿದ್ದು, ನಾಳೆ ಈ ಅನರ್ಹ ಶಾಸಕರ ವಿಚಾರವಾಗಿತೀರ್ಪು ಪ್ರಕಟಿಸಲಿದ್ದಾರೆ.

ಇತ್ತ ತಮ್ಮ ವಿರುದ್ಧ ಕ್ರಮ ಕೈಗೊಳ್ಳುವ ಸಾಧ್ಯತೆ ಹೆಚ್ಚಾಗಿರುವ ಸೂಚನೆ ಸಿಕ್ಕಿರುವ ನಂತರ ಬಂಡಾಯ ಶಾಸಕರ ರಾಗ ಬದದಲಾಗಿದೆ. ದೇವೇಗೌಡರು ಕರೆದರೆ ಅವರೊಂದಿಗೆ ಮಾತುಕತೆಗೆ ಸಿದ್ಧ ಎಂದು ಬಂಡಾಯ ಶಾಸಕರಲ್ಲಿ ಒಬ್ಬರಾದ ಮಾಗಡಿಯ ಬಾಲಕೃಷ್ಣ ಹೇಳಿಕೆ ನೀಡಿದ್ದಾರೆ. 'ಈ ಹಿಂದೆ ವಿಪ್ ಬಗ್ಗೆ ಹೆಚ್ಚಿನ ತಿಳಿುವಳಿಕೆ ಇರಲಿಲ್ಲ. ದೇವೇಗೌಡರು ಮಾತುಕತೆಗೆ ಕರೆದರೆ ಚರ್ಚಿಸಲು ಸಿದ್ಧ' ಎಂದು ಅಚ್ಚರಿಕೆಯ ಹೇಳಿಕೆ ನೀಡಿದ್ದಾರೆ.  ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಈ ಶಿಸ್ತುಕ್ರಮ ಈ ಬಂಡಾಯ ಶಾಸಕರ ಪಾಲಿಗೆ ದೊಡ್ಡ ಹಿನ್ನಡೆಯಾಗಲಿದೆ. ಈಗಾಗಲೇ ಮುಂದಿನ ಚನಾವಣೆಯಲ್ಲಿ ಈ ಬಂಡಾಯ ಶಾಸಕರ ಬಾಲ ಕತ್ತರಿಸಲು ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ತಂತ್ರಗಾರಿಕೆ ರೂಪಿಸಿದ್ದಾರೆ. ಈ ಶಾಸಕರ ಕ್ಷೇತ್ರದಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಎಲ್ಲದರ ಮಧ್ಯೆ ಶಿಸ್ತು ಕ್ರಮ ಈ ಶಾಸಕಕರಿಗೆ ದೊಡ್ಡ ಪೆಟ್ಟು ನೀಡುವುದರಲ್ಲಿ ಅನುಮಾನವೇ ಇಲ್ಲ.

Edited By

hdk fans

Reported By

hdk fans

Comments