ಜೆಡಿಎಸ್ ಪರ ಪ್ರಚಾರಕ್ಕಿಳಿಯಲಿರುವ ಮಾಜಿ ಸಿಎಂ

19 Mar 2018 9:44 AM |
20531 Report

ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ದಿನ ದಿಂದ ದಿನಕ್ಕೆ ಜೆಡಿಎಸ್ ಬಲ ಪ್ರಭಲಗೋಲುತ್ತಿದೆ. ಶತಾಯಗತಾಯ ಈ ಬಾರಿ ರಾಷ್ಟ್ರೀಯ ಪಕ್ಷಗಳಿಗೆ ಮಣ್ಣು ಮುಕಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಜೆಡಿಎಸ್ ರಣತಂತ್ರ ರೂಪಿಸಿವೆ. ಉತ್ತರಪ್ರದೇಶ ಮಾಜಿ ಸಿಎಂ ಮುಲಾಯಂಸಿಂಗ್ ಯಾದವ್, ಪುತ್ರ ಅಖಿಲೇಶ್ ಯಾದವ್ ಹಾಗೂ ಮಹಾರಾಷ್ಟ್ರದ ಎನ್​ಸಿಪಿ ನಾಯಕ ಶರದ್ ಪವಾರ್ ಕರ್ನಾಟಕದಲ್ಲಿ ಜೆಡಿಎಸ್ ಪರ ಪ್ರಚಾರಕ್ಕೆ ಬರಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಉತ್ತರಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿ ಹಾಗೂ ಬಹುಜನ ಸಮಾಜವಾದಿ ಪಾರ್ಟಿ ಜಂಟಿ ಹೋರಾಟದ ಫಲಿತಾಂಶ ತಂದ ಸಂಚಲನ, ಈಗ ರಾಜ್ಯ ರಾಜಕಾರಣದ ಮೇಲೂ ಪರಿಣಾಮ ಬೀರುವ ಲಕ್ಷಣಗಳಿವೆ. ಅದಕ್ಕೆ ಪುಷ್ಟಿ ನೀಡುವಂತೆ ಈಗಾಗಲೇ 2019ರ ಲೋಕಸಭಾ ಚುನಾವಣೆಗೆ ತೃತೀಯ ರಂಗದ ಮೈತ್ರಿ ಕಸನು ಮೊಳಕೆಯೊಡೆದಿದ್ದು, ಅದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಬಿಎಸ್​ಪಿ ಮೈತ್ರಿ ಮಾಡಿಕೊಂಡಿವೆ. ಬಿಎಸ್​ಪಿ ಅಧ್ಯಕ್ಷೆ ಮಾಯಾವತಿ ಒಂದು ಸುತ್ತಿನ ರಾಜ್ಯ ಭೇಟಿ ಮುಗಿಸಿದ್ದು, ಇನ್ನು ಶರದ್ ಪವಾರ್, ಮುಲಾಯಂಸಿಂಗ್ ಯಾದವ್ ಮತ್ತು ಅಖಿಲೇಶ್ ಕೂಡ ರಾಜ್ಯಕ್ಕೆ ಬರಲಿದ್ದಾರೆ. ಈಗಾಗಲೇ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶರದ್ ಪವಾರ್ ಮತ್ತು ಮುಲಾಯಂ ಸಿಂಗ್ ಅವರನ್ನು ರಾಜ್ಯಕ್ಕೆ ಆಹ್ವಾನಿಸಿದ್ದು, ದಿನಾಂಕವಷ್ಟೇ ಅಂತಿಮಗೊಳ್ಳಬೇಕಿದೆ ಎಂದು ಪಕ್ಷದ ಉನ್ನತ ಮೂಲಗಳು ‘ವಿಜಯವಾಣಿ’ಗೆ ತಿಳಿಸಿವೆ.ಈಗಾಗಲೇ ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಅವರೊಂದಿಗೆ ಮೈತ್ರಿ ಸಾಧಿಸಿ ರಾಜ್ಯದಲ್ಲಿರುವ ಶೇ.28 ದಲಿತ ಮತಗಳನ್ನು ಸೆಳೆಯಲು ಮುಂದಾಗಿರುವ ಜೆಡಿಎಸ್, ರಾಜ್ಯದಲ್ಲಿ 20 ದಿನಗಳ ಕಾಲ ಪ್ರಚಾರ ನಡೆಸುವಂತೆ ಮಾಯಾವತಿ ಅವರನ್ನು ಕೋರಿದೆ.ಮೈಸೂರಿನಲ್ಲಿ ಉನ್ನತ ಶಿಕ್ಷಣ ಪಡೆದ ಉತ್ತರಪ್ರದೇಶದ ಮಾಜಿ ಮುಖ್ಯಮಮತ್ರಿ ಅಖಿಲೇಶ್ ಯಾದವ್, ಅವರ ತಂದೆ ಮುಲಾಯಂ ಸಿಂಗ್ ಯಾದವ್ ರಾಜ್ಯದಲ್ಲಿ ಒಂದು ವಾರ ಕಾಲ ಪ್ರಚಾರ ನಡೆಸುವರು. ಬೆಳಗಾವಿ, ವಿಜಯಪುರ ಮತ್ತು ಬೀದರ್ ಜಿಲ್ಲೆಗಳಿಗೆ ಶರದ್ ಪವಾರ್ ಭೇಟಿ ನೀಡಿ, ಮತ ಯಾಚಿಸುವರು. ಕರ್ನಾಟಕದಲ್ಲಿರುವ ಯಾದವ ಮತ್ತು ಮರಾಠ ಮತಗಳನ್ನು ತನ್ನತ್ತ ಸೆಳೆಯಲು ಜೆಡಿಎಸ್ ಕೆಲ ಒಳತಂತ್ರ ರೂಪಿಸುತ್ತಿದೆ. ಬೆಳಗಾವಿ, ಧಾರವಾಡ, ವಿಜಯಪುರ ಹಾಗೂ ಬೀದರ್ ಜಿಲ್ಲೆಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್, ಎನ್​ಸಿಪಿಗೆ ಐದು ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಮುಂದಾಗಿದೆ. ಇದೇ ವೇಳೆ ಬೆಳಗಾವಿ ಜಿಲ್ಲೆ ಮತ್ತು ಗಡಿ ಭಾಗದಲ್ಲಿ ಎನ್​ಸಿಪಿ ಜತೆಗೆ ಎಂಇಎಸ್ ಮತಗಳು ಕೂಡ ತಮಗೇ ಬರಲಿವೆ ಎಂಬುದು ಜೆಡಿಎಸ್ ಲೆಕ್ಕಾಚಾರ. ಇನ್ನು ರಾಜ್ಯದ 18 ಜಿಲ್ಲೆಗಳಲ್ಲಿ ಯಾದವ ಸಮುದಾಯದವರಿದ್ದು, ಆ ಮತಗಳನ್ನು ಸೆಳೆಯುವುದು, ಭವಿಷ್ಯದಲ್ಲಿ ತೃತಿಯರಂಗ ರಚನೆಗೆ ಪೂರಕವಾಗಿ ಮುಲಾಯಂ ಮತ್ತು ಅವರ ಪುತ್ರನನ್ನು ಕರೆಸಿ ಪ್ರಚಾರ ನಡೆಸುವುದು ಜೆಡಿಎಸ್​ನ ರಣತಂತ್ರದ ಭಾಗವಾಗಿದೆ.

Edited By

Shruthi G

Reported By

hdk fans

Comments