A PHP Error was encountered

Severity: Warning

Message: session_start(): Failed to decode session object. Session has been destroyed

Filename: Session/Session.php

Line Number: 143

Backtrace:

File: /var/www/html/civicnews.in/public_html/application/third_party/MX/Loader.php
Line: 173
Function: _ci_load_library

File: /var/www/html/civicnews.in/public_html/application/third_party/MX/Loader.php
Line: 192
Function: library

File: /var/www/html/civicnews.in/public_html/application/third_party/MX/Loader.php
Line: 153
Function: libraries

File: /var/www/html/civicnews.in/public_html/application/third_party/MX/Loader.php
Line: 65
Function: initialize

File: /var/www/html/civicnews.in/public_html/application/modules/home/controllers/Home.php
Line: 7
Function: __construct

File: /var/www/html/civicnews.in/public_html/index.php
Line: 315
Function: require_once

9 ಪ್ರಕಟಣಗಳಲ್ಲಿನ 5 ಜನ ಆರೋಪಿಗಳನ್ನು ಬಂಧಿಸಿದ ಕೊರಟಗೆರೆ ಪೊಲೀಸರು. | Civic News

9 ಪ್ರಕಟಣಗಳಲ್ಲಿನ 5 ಜನ ಆರೋಪಿಗಳನ್ನು ಬಂಧಿಸಿದ ಕೊರಟಗೆರೆ ಪೊಲೀಸರು.

17 Mar 2018 5:13 PM |
549 Report

ಕೊರಟಗೆರೆ ಮಾ. :- ಫೆ.22 ಮತ್ತು ಫೆ.26 ರಂದು ಪ್ರತ್ಯೇಕ ಪ್ರಕರಣಗಳಲ್ಲಿ ಬೈಕ್ ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಮೊಬೈಲ್ ಮತ್ತು ಹಣ ದೋಚಿಕೊಂಡು ಹೋಗಿದ್ದ ಆರೋಪಿಗಳನ್ನು  ಕೊರಟಗೆರೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ 5 ಜನ ಆರೋಪಿಗಳನ್ನು ಬಂಧಿಸಿ 9 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

      ತುರುವೇಕೆರೆ ತಾಲೂಕಿನ ಮಾಹಸಂದ್ರ ಹೋಬಳಿಯ ಚಿಕ್ಕಶೆಟ್ಟಿಕೆರೆ ಕಿರಣ್ ಅಲಿಯಾಸ್ ಜಡೇ  (22)   5 ದರೋಡೆ,4 ದ್ವಿಚಕ್ರವಾಹನ ಕಳವು ಸೇರಿದಂತೆ ತಲಾ ಒಂದೊಂದು ಕೊಲೆಯತ್ನ, ಮನೆಕಳವು ಸೇರಿ ಒಟ್ಟು 11 ಪ್ರಕರಣಗಳಲ್ಲಿ ಭಾಗಿಯಾಗಿರುವ ಈತ ಕೋರಾ ಠಾಣೆಯಲ್ಲಿ ರೌಡೀ ಶೀಟರ್, ತುಮಕೂರು ಟೌನ್ ಶಿರಾಗೇಟ್ ವಾಸಿ ಮಾರುತಿ  5 ದರೋಡೆ,3 ದ್ವಿಚಕ್ರವಾಹನ ಕಳವು ಒಂದು ಮನೆಕಳವು ಸೇರಿ ಒಟ್ಟು 10 ಪ್ರಕರಣ,ತುಮಕೂರು ಯಲ್ಲಾಪುರದ ಆಂಜನೇಯಸ್ವಾಮಿ ದೇವಾಲಯ ರಸ್ತೆಯ ಶಿವರಾಜು ಅಲಿಯಾಸ್ ಶಿವ(23) 3 ದರೋಡೆ,4 ದ್ವಿಚಕ್ರವಾಹನ ಕಳವು ಒಂದು ಮನೆಕಳವು ಸೇರಿ ಒಟ್ಟು 08 ಪ್ರಕರಣ, ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಸೋಂಪುರ ಗ್ರಾಮವಾಸಿ ಎಸ್.ಎ ಮಲ್ಲೇಶ್(30) ಒಂದು ಕೊಲೆ, ಒಂದು ಕೊಲಯತ್ನ,ಒಂದು ದರೋಡೆ, ಒಟ್ಟು 04 ಪ್ರಕರಣ, ಕದ್ದ ಮಾಲುಗಳನ್ನು ಸ್ವೀಕರಿಸುತ್ತಿದ್ದ ಮಡಗಶಿರಾ ತಾಲೂಕಿನ ರೊಳ್ಳ ಮಂಡಲ್ ನ ಪಿಲಿಗೊಂಡ್ಲು ಗ್ರಾಮವಾಸಿಯಾದ ಕೆ.ಆರ್ ಮಂಜುನಾಥ್ (29) ಬಂಧಿತ ಆರೋಪಿಗಳು.

      ಆರೋಪಿಗಳಿಂದ 5 ದ್ವಿಚಕ್ರ ವಾಹನ, 30 ಗ್ರಾಂ. ಚಿನ್ನಡ ಒಡವೆ,10 ಗ್ರಾಂ ಬೆಳ್ಳಿ,2 ಮೋಬೈಲ್,ಒಂದು ಟ್ರಾಗನ್,ಚಾಕು, ಪರ್ಸ್, ಕಬ್ಬಿಣದ ರಾಡ್, ಸೇರಿದಂತೆ ಒಟ್ಟು3,25,000 ಬೆಲೆಬಾಳುವ ವಡವೆಗಳನ್ನು ಮತ್ತು ದ್ವಿಚಕ್ರವಾಹನಗಳನ್ನು  ವಶಪಡಿಸಿಕೊಂಡು ಒಟ್ಟು 9  ಪ್ರಕಟಣಗಳು ಬೆಳಕಿಗೆ ಬಂದಿವೆ.

      ಡಿವೈಎಎಸ್ ಪಿ  ಓ.ಬಿಕಲ್ಲೇಶಪ್ಪ  ಮಾರ್ಗದರ್ಶನದಲ್ಲಿ ಸಿಪಿಐ  ಮಹೇಶ್, ಪಿಎಸ್ಐ  ಬಿ.ಸಿ ಮಂಜುನಾಥ್ ಸೇರಿದಂತೆ ಸಿಬ್ಬಂದಿಗಳಾದ ನಾರಾಯಣ್,ಗಂಗಾಧರ, ಸೋಮನಾಥ, ಪ್ರಶಾಂತ, ಮಂಜುನಾಥ್, ರಂಗನಾಥ್,  ಚಂದ್ರಶೇಖರ್, ಲೋಹಿತ್, ರಮೇಶ್, ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

      ಎಸ್.ಪಿ ಡಾ. ದಿವ್ಯ ಗೋಪಿನಾಥ್ ಸುದ್ಧಿಘೋಷ್ಠಿಯನ್ನು ನಡೆಸಿ ಮಾತನಾಡಿ  ಬಂಧಿದ ಆರೋಪಿಗಳು ಮಧ್ಯವ್ಯಸನಿಗಳಾಗಿ, ದುಶ್ಚಟಕ್ಕೆ ದಾಸರಾಗಿದ್ದು ಇವರಿಗೆ ಹಣದ ಅವಶ್ಯಕತೆ ಬಂದಾಗಲೆಲ್ಲಾ ಒಂಟಿ ಮನೆಗಳು, ಒಬ್ಬೊಬ್ಬರಾಗಿ ಓಡಾಡುವ ಜನರನ್ನು ಗುರಿಯಾಸಿಕೊಂಡು ಕೃತ್ಯಗಳನ್ನು ಎಸಗುತ್ತಿದ್ದರು ಎಂದರು.

      ಬಂಧಿತ ಆರೋಪಿಗಳ ವಿರುದ್ದ ತುರುವೇಕೆರೆ, ತುಮಕೂರು ನಗರ, ಕೋರಾ, ಮಧುಗಿರಿ ಸೇರಿದಂತೆ ಜಿಲ್ಲೆಯಾಧ್ಯಂತ 9 ಕ್ಕೂ ಹೆಚ್ಚು ಪ್ರಕರಣಗಳು ಇದ್ದು ಇವರುಗಳ ವಿರುದ್ದ ರೌಡೀ ಶೀಟರ್ ಮತ್ತು ಇವರಿಗೆ ಹಿಂದಿನ ಪ್ರಕರಣಗಳಲ್ಲಿ ನೀಡಿರುವಂತಹ ಜಾಮೀನುಗಳನ್ನು ರದ್ದುಗೊಳಿಸಿ ತಪ್ಪಿಗೆ ಹೆಚ್ಚಿನ ಶಿಕ್ಷೆಯನ್ನು ನೀಡುವಂತೆ ಶಿಫಾರಸ್ಸು ಮಾಡುವುದಾಗಿ ಹೇಳಿದರು.(ಚಿತ್ರಇದೆ)

17ಕೆಆರ್ ಟಿ_ಚಿತ್ರ1:- ಬಂಧಿತ ಆರೋಪಿಗಳೊಂದಿಗೆ ಎಸ್ ಪಿ ಡಾ. ದಿವ್ಯಗೋಪಿನಾಥ್, ಡಿವೈಎಎಸ್ ಓ.ಬಿ ಕಲ್ಲೇಶಪ್ಪ, ಪಿಎಸ್ ಐ ಬಿ.ಸಿ ಮಂಜುನಾಥ್ ಸೇರಿದಂತೆ ಸಿಬ್ಬಂಧಿಗಳು.

Edited By

Raghavendra D.M

Reported By

Raghavendra D.M

Comments