ಮಹಿಳೆಯ ಸಂಕಷ್ಟಕ್ಕೆ ನೆರವಾದ ಕುಮಾರಣ್ಣ

17 Mar 2018 10:20 AM |
1440 Report

ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕುಮಟಾದ ಜೆಡಿಎಸ್ ಸಮಾವೇಶಕ್ಕೆ ವಿಕಾಸ ಪರ್ವ ಬಸ್ ನಲ್ಲಿ ತೆರಳುತ್ತಿದ್ದರು. ಈ ವೇಳೆ ಮಗುವನ್ನು ಕಂಕುಳಿಗೆ ಕಟ್ಟಿಕೊಂಡು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರು ಕುಮಾರಸ್ವಾಮಿ ಕಣ್ಣಿಗೆ ಬಿದ್ದಿದ್ದಾರೆ.

ತಕ್ಷಣ ಬಸ್ ನಿಲ್ಲಿಸಿದ ಮಾಜಿ ಮುಖ್ಯಮಂತ್ರಿ ಮಹಿಳೆಯನ್ನು ಕರೆದು ಸಂಕಷ್ಟ ಆಲಿಸಿದ್ದಾರೆ. ಯಾಕಮ್ಮ ಬೀದಿ ಬದಿಯಲ್ಲಿ, ಬಿಸಿಲಿನಲ್ಲಿ ವ್ಯಾಪಾರ ಮಾಡ್ತೀಯಾ, ಊರಲ್ಲಿ ಅಂಗಡಿ ಹಾಕಿಕೊಟ್ರೆ ವ್ಯಾಪಾರ ಮಾಡ್ತೀಯ ಎಂದು ಪ್ರಶ್ನಿಸಿದ್ದಾರೆ. ಕುಮಾರಸ್ವಾಮಿ ಮಾತಿನಿಂದ ತಬ್ಬಿಬ್ಬುಗೊಂಡ ಮಹಿಳೆ ಬಳಿಕ ಅಂಗಡಿ ಹಾಕಿದ್ರೆ ವ್ಯಾಪಾರ ಮಾಡಲು ಒಪ್ಪಿಕೊಂಡಿದ್ದಾರೆ. ಇದೇ ವೇಳೆ ಕುಮಾರಸ್ವಾಮಿ ಜೊತೆಗಿದ್ದ ಶಾಸಕ ಮಧು ಬಂಗಾರಪ್ಪ ಮಹಿಳೆಯ ಪೂರ್ವಾಪರ ವಿಚಾರಿಸಿದ್ದಾರೆ. ಶಿವಮೊಗ್ಗ ಮೂಲದ ಸಾಗರದವಳು ಎಂದು ಗೊತ್ತಾದ ತಕ್ಷಣ ಆಕೆ ಎಲ್ಲಿ ವಾಸವಿದ್ದಾಳೆ ಅನ್ನುವುದನ್ನು ತಮ್ಮ ಕಾರ್ಯಕರ್ತರಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಮಹಿಳೆಯ ಮಾತಿನಲ್ಲಿ ಸತ್ಯಾಂಶವಿದೆ ಎಂದು ತಿಳಿದುಕೊಂಡ ಕುಮಾರಸ್ವಾಮಿಯವರು ತಕ್ಷಣ 10 ಸಾವಿರ ರೂಪಾಯಿ ಹಣ ಕೊಟ್ಟು ಹೀಗೆಲ್ಲಾ ಬೀದಿ ಬೀದಿ ಸುತ್ತಬೇಡಿ. ಅಂಗಡಿ ಮಾಡಿಕೊಂಡು ಜೀವನ ನಡೆಸಿ ಎಂದು ಸಲಹೆ ಕೊಟ್ಟು ಮುಂದೆಸಾಗಿದ್ದಾರೆ. ಇದೇ ವೇಳೆ ಕೊಟ್ಟ ಹಣ ಸರಿಯಾಗಿ ಬಳಸಿಕೊಂಡು ಮಹಿಳೆಗೊಂದು ನೆಲೆ ಕೊಡಿಸಿ ಎಂದು ಸೊರಬ ಶಾಸಕ ಮಧು ಬಂಗಾರಪ್ಪನವರಿಗೆ ಸೂಚಿಸಿದ್ದಾರೆ. ಜೆಡಿಎಸ್ ನಾಯಕನ ಆದೇಶಕ್ಕೆ ಆಯ್ತಾಣ್ಣ ಎಂದು ಮಧು ಒಪ್ಪಿಕೊಂಡಿದ್ದಾರೆ.

Edited By

Shruthi G

Reported By

hdk fans

Comments