ವಿಧಾನಸಭಾ ಚುನಾವಣೆ : ‘ಕೈ- ಕಮಲ’ಕ್ಕೆ ಸೆಡ್ಡು ಹೊಡೆಯಲು ಎಚ್ ಡಿಕೆ ಮಾಸ್ಟರ್ ಪ್ಲಾನ್

17 Mar 2018 9:41 AM |
6067 Report

ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಸಮೀಪಿಸುತ್ತಿದಂತೆ ಗೆಲುವಿಗಾಗಿ ರಾಜಕೀಯ ಪಕ್ಷಗಳು ಭಿನ್ನ ವಿಭಿನ್ನ ತಂತ್ರಗಳಿಗೆ ಮೊರೆಹೋಗಿವೆ. ಈಗಾಗಲೇ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಗೆ ಸೆಡ್ಡು ಹೊಡೆದಿರುವ ಜೆಡಿಎಸ್ ಕೂಡಾ ಚುನಾವಣಾ ತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಏಕಕಾಲದಲ್ಲಿ ಒಂದು ಕೋಟಿ ಮತದಾರರನ್ನ ಜೆಡಿಎಸ್ ಪಕ್ಷದತ್ತ ಆಕರ್ಷಿಸಲು ಹೊಸ ಪ್ಲಾನ್ ಮಾಡಿಕೊಂಡಿದೆ.

ಹೌದು..,ಯುಗಾದಿ ಹಬ್ಬದ ಪ್ರಯುಕ್ತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ರಾಜ್ಯದ ಜನತೆಗೆ ಶುಭಕೋರಲಿದ್ದಾರೆ. ಎಚ್ ಡಿಕೆ ವಿಷ್ ಮಾಡಿದ 25 ಸೆಕೆಂಡುಗಳ ಆಡಿಯೋ ಕ್ಲಿಪ್‌ನ ಯುಗಾದಿ ಹಬ್ಬದ ದಿನ ಒಂದು ಕೋಟಿ ಮತದಾರರಿಗೆ ತಲುಪಿಸಲು ಜೆಡಿಎಸ್ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರಿ ನೌಕರರು, ವಿದ್ಯಾರ್ಥಿ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು, ಆಟೋ ಚಾಲಕರು, ಬ್ಯಾಂಕ್ ನೌಕರರು, ರೈತ ಸಂಘಟನೆ ಮುಖಂಡರು, ಮಹಿಳಾ ಸಂಘಟನೆ ಕಾರ್ಯಕರ್ತರಿಗೆ ಏಕಕಾಲದಲ್ಲಿ ಎಚ್ ಡಿಕೆ ವಾಯ್ಸ್ ಕ್ಲಿಪ್ ಕಳಿಸಲಾಗುತ್ತದೆ. ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಎಲ್ಲ ವರ್ಗದವರನ್ನೂ ಕುಮಾರಸ್ವಾಮಿಯವರ ಕಡೆ ಆಕರ್ಷಿಸಲು ಈ ಉಪಾಯ ಮಾಡಲಾಗಿದೆ. ಇದಕ್ಕಾಗಿ ಈಗಾಗಲೇ ಜೆಡಿಎಸ್ ಐಟಿ ಘಟಕ ಕಾರ್ಯಪ್ರವೃತ್ತವಾಗಿದೆ. ಲಕ್ಷಾಂತರ ವಾಟ್ಸಾಪ್ ನಂಬರ್‌ಗಳನ್ನು ಈಗಾಗಲೇ ಜೆಡಿಎಸ್ ಐಟಿ ಸೆಲ್ ಸಂಗ್ರಹಿಸಿದ್ದು, ಎಲ್ಲರಿಗೂ ಫೇಸ್ ಬುಕ್ , ವಾಟ್ಸಾಪ್, ಟ್ವಿಟರ್‌ಗಳ ಮೂಲಕ ಹೆಚ್‌ಡಿಕೆ ಆಡಿಯೋ ಸಂದೇಶ ತಲುಪಿಸುವ ಮೊದಲ ಪ್ರಯತ್ನ ಇದಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಇತ್ತೀಚೆಗೆ ನಿಮ್ಮ ನೆಚ್ಚಿನ ಮುಖ್ಯಮಂತ್ರಿ ಯಾರು ಎಂದು ಎಂಬ ಚರ್ಚೆ ನಡೆದಾಗ ಬಹುಪಾಲು ಜನ ಎಚ್.ಡಿ.ಕುಮಾರಸ್ವಾಮಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದು ಜೆಡಿಎಸ್ ವರಿಷ್ಟರ ಗಮನಕ್ಕೆ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಆ್ಯಕ್ಟೀವ್ ಇರಬೇಕೆಂದು ಜೆಡಿಎಸ್ ಐಟಿ ಸೆಲ್ ಕಾರ್ಯಕರ್ತರಿಗೆ ಸೂಚಿಸಲಾಗಿದೆ.

Edited By

Shruthi G

Reported By

hdk fans

Comments