ಜೆಡಿಎಸ್ ಭದ್ರಕೋಟೆಯಾಗಿರು ಚಿಕ್ಕನಾಯಕನಹಳ್ಳಿಯಲ್ಲಿ ಭರ್ಜರಿ ಗೆಲುವಿನತ್ತ ಕುಮಾರಣ್ಣ ನ ಪರಮಾಪ್ತ

16 Mar 2018 10:01 AM |
7459 Report

ಕರ್ನಾಟಕ ವಿಧಾನ ಸಭಾ ಚುನಾವಣೆ ಎದುರಾಗುತ್ತಿರುವ ಹಿನ್ನಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ವಿಧಾನ ಸಭಾ ಚುನಾವಣೆ ಭರ್ಜರಿ ತಯಾರಿಯಲ್ಲಿರುವ ಜೆಡಿಎಸ್ ಈಗಾಗಲೇ ಅನೇಕ ಸಮಾವೇಶಗಳ ಮೂಲಕ ರಾಷ್ಟ್ರೀಯ ಪಕ್ಷಗಳಿಗೆ ನಡುಕ ಹುಟ್ಟಿಸಿದೆ. ಜೆಡಿಎಸ್ ನ ದಳಪತಿ ಎಚ್.ಡಿ. ದೇವೇಗೌಡರ ಚುನಾವಣಾ ತಂತ್ರಕ್ಕೆ ವಿಪಕ್ಷಗಳು ಸೋಲು ಕಾಣುವುದರಲ್ಲಿವೆ.

ತುಮಕೂರು ಜಿಲ್ಲೆಯ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾದ ಚಿಕ್ಕನಾಯಕನಹಳ್ಳಿಯಲ್ಲಿ ಜೆಡಿಎಸ್ ಹೊರತುಪಡಿಸಿ ಬಿಜೆಪಿ ಮತ್ತು ಕಾಂಗ್ರೆಸ್‍ನಲ್ಲಿ ಟಿಕೆಟ್‍ಗಾಗಿ ಪೈಪೋಟಿ ಏರ್ಪಟ್ಟಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ಚಿಕ್ಕನಾಯಕನಹಳ್ಳಿಯಲ್ಲಿ ಮತದಾರರು ಹಾಲಿ ಶಾಸಕ ಸುರೇಶ್‍ಬಾಬು ಅವರು ನಾಲ್ಕನೆ ಬಾರಿ ಗೆಲುವು ಸಾಧಿಸಲು ಬಹಳ ಆಸಕ್ತಿ ಯಿಂದ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೇಳಿ ಕೇಳಿ ಚಿಕ್ಕನಾಯಕನಹಳ್ಳಿ ಶಾಂತಿ-ಸೌಹಾರ್ದತೆ ಬೀಡು. ಮೂರನೆ ಬಾರಿ ಶಾಸಕರಾಗಿರುವ ಸುರೇಶ್‍ಬಾಬು ಈಗ ನಾಲ್ಕನೆ ಬಾರಿ ಶಾಸಕರಾಗಲು ತಯಾರಿ ಮಾಡಿಕೊಂಡಿದ್ದಾರೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಪರಮಾಪ್ತರಾಗಿರುವ ಬಾಬು ಅವರಿಗೆ ಎದುರಾಗಿ ಜೆಡಿಎಸ್‍ನಿಂದ ಟಿಕೆಟ್ ಕೇಳುವ ಧೈರ್ಯ ಯಾರಿಗೂ ಇಲ್ಲ. ಹೀಗಾಗಿ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವತ್ತ ಸುರೇಶ್‍ಬಾಬು ಗಮನ ಹರಿಸಿದ್ದಾರೆ. ಈ ಕ್ಷೇತ್ರವು ಜೆಡಿಎಸ್ ನ ಭದ್ರಕೋಟೆಯಾಗಿರುವುದರಿಂದ ರಾಷ್ಟ್ರೀಯ ಪಕ್ಷಗಳಿಗೆ ಮಣ್ಣು ಮುಕಿಸಿ ಸರಳ ಬಹುಮತದಿಂದ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಲಿದೆ. ಹೀಗಾಗಿ ಚಿಕ್ಕನಾಯಕನಹಳ್ಳಿ ಕ್ಷೇತ್ರವನ್ನು ಜೆಡಿಎಸ್ ವಶಕ್ಕೆ ಪಡೆಯುವುದರಲ್ಲಿ ಎರಡು ಮಾತಿಲ್ಲ ಎಂದು ಮೂಲಗಳು ತಿಳಿಸಿವೆ.

Edited By

Shruthi G

Reported By

hdk fans

Comments