ಭಾರತ ಪೊಲೀಯೋದಿಂದ ಮುಕ್ತವಾಗಿದೆ: ಪ.ಪಂ ಸದಸ್ಯ ನಯಾಜ್ ಅಹಮದ್

11 Mar 2018 7:17 PM |
432 Report

ಕೊರಟಗೆರೆ ಮಾ. :-  ಪೊಲೀಯೋ ಈಗಾಗಲೇ ಭಾರತದಲ್ಲಿ ಮುಕ್ತವಾಗಿದೆ ಇದನ್ನು ಅದೇ ರೀತಿ ಮುಂದುವರಿಸಲು ಪ್ರತಿಯೊಬ್ಬರೂ ಪೊಲೀಯೋ ಜೀವ ಹನಿಯನ್ನು ಮಕ್ಕಳಿಗೆ ಹಾಕಿಸಬೇಕು ಎಂದು ಪ.ಪಂ ಸದಸ್ಯ ನಯಾಜ್ ಅಹಮದ್ ತಿಳಿಸಿದರು.

 

       ಪಟ್ಟಣದ ಗೊಂದಿಹಳ್ಳಿ ರಸ್ತೆಯಲ್ಲಿರುವ  ಅಂಗನವಾಡಿಯಲ್ಲಿ ಪಲ್ಸ್ ಪೊಲೀಯೋ ಎರಡನೇ ಅಂತದ ಕಾರ್ಯಕ್ರಮವನ್ನು ಪೊಲೀಯೋ ಹನಿ ಹಾಕುವ ಮೂಲಕ ಉದ್ಘಾಟಿಸಿ ಮಾತನಾಡಿದರು.

       ಪೊಲೀಯೋ ಇನ್ನೂ ಹಲವು ದೇಶಗಳಲ್ಲಿ  ಮುಕ್ತವಾಗಿಲ್ಲ ಆದರೆ ನಾವು ಇದರಿಂದ ಮುಕ್ತಗೊಂಡಿದ್ದೇವೆ ಇದು ಹೆಮ್ಮೆಯ ವಿಚಾರ. ಕೆಲವರು ಪೊಲೀಯೋ ಹನಿ ಹಾಕಿಸುವುದರಿಂದ ಜ್ವರ ಸೇರಿದಂತೆ ಇತರೆ  ಅಡ್ಡ  ಪರಿಣಾಮಗಳು ಎದುರಾಗುತ್ತವೆ ಎಂದು ಹೇಳುತ್ತಾರೆ ಆದರೆ ಇದರಿಂದ ಯಾವುದೇ ತೊಂದರೆಯಿಲ್ಲ ತಪ್ಪದೇ ಪ್ರತೀ ಹಂತದಲ್ಲೂ 5 ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೊಲೀಯೋ ಹನಿ  ತಪ್ಪದೇ ಹಾಕಿಸಬೇಕು ಎಂದು ಮನವಿ ಮಾಡಿದರು.

       ಕಾರ್ಯಕ್ರಮದಲ್ಲಿ ಕಿರಿಯ ಮಹಿಳಾ ಆರೋಗ್ಯ ಸಹಾಯಕ ಮಲ್ಲಮ್ಮ, ಮುಖಂಡರಾದ ರಂಗನಾಥ್, ಮಹಮದ್ ಫಾರೂಕ್, ಸಾಧಿಕ್ ಸೇರಿಂದಂತೆ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

Edited By

Raghavendra D.M

Reported By

Raghavendra D.M

Comments