ಪರಂ ಕ್ಷೇತ್ರಕ್ಕೆ ಸಿದ್ದು ಭೇಟಿ... ಕಾರ್ಯರ್ತರನ್ನು ಉದ್ದೇಶಿಸಿ ಭಾಷಣ, ಇಂದಿನಾ ಕ್ಯಾಂಟೀನ್ ಉದ್ಘಾನೆ...

10 Mar 2018 6:43 PM |
489 Report

ಕೊರಟಗೆರೆ ಮಾ. :- ಮುಖ್ಯಮಂತ್ರಿಯಾದ ನಂತರ ಇದೇ ಮೊದಲ ಬಾರಿಗೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರಕ್ಕೆ ಸಿದ್ದರಾಮಯ್ಯ ಬರುತ್ತಿದ್ದು ಎಲ್ಲೆಡೆ ಅದ್ದೂರಿ ಸ್ವಾಗತಕ್ಕೆ ತಯಾರಿಗಳನ್ನು ಪರಮೇಶ್ವರ್ ಕುದ್ದು ನಿಂತು ವ್ಯವಸ್ಥೆ ಮಾಡಿಸುತ್ತಿದ್ದಾರೆ. ಕಳೆದ ಬಾರಿ ಚುನಾವಣೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದ ಉಸ್ತವಾರಿ ನೋಡಿಕೊಳ್ಳುವ ಭರದಲ್ಲಿ ಕ್ಷೇತ್ರದಲ್ಲಿ ಹೆಚ್ಚು ವೈಯಕ್ತಿಕ ಪ್ರಚಾರ ಮಾಡದ ಪರಂ ಗೆ ಕಳೆದ ಚುನಾವಣೆ ಸೋಲನ್ನು ನೀಡಿದ್ದು ಇದನ್ನು ಮನಗಂಡು ಈ ಬಾರಿ ಕ್ಷೇತ್ರದಲ್ಲೇ ಮೊಕಂ ಹೂಡಿ ಪ್ರತಿಯೊಂದು ಸಮುದಾಯದ ಓಲೈಕೆಯನ್ನು, ಪ್ರತಿ ಮುಂಡರ, ಸಾಮಾನ್ಯ ಜನರ ಪ್ರತಿನಿಧಿಯಾಗಿ ಕ್ಷೇತ್ರದೆಲ್ಲೆಡೆ ಓಡಾಡುತ್ತಿದ್ದು ಕಳೆದ ಬಾರಿಗಿಂತ ಪರಂ ಅಲೆ ಕ್ಷೇತ್ರದಲ್ಲಿ ಈ ಬಾರಿ ಹರಿದಾಡುತ್ತಿದೆ.


ಯಾರೊಬ್ಬರೂ ಕೈಗೆ ಕೈ ಕೊಡಬಾರದು

ಕಳೆದ ಬಾರಿ ಕೆಲವು ಸಮುದಾಯಗಳು ಕಾಂಗ್ರೇಸ್ ಪಕ್ಷಕ್ಕೆ ಅದರಲ್ಲೂ ಪರಂ ಗೆ ಮತ ಚಲಾಯಿಸಿಲ್ಲ, ಅದೇ ರೀತಿ ಕಾಣದ ಕೈಗಳು ಕ್ಷೇತ್ರದಲ್ಲಿ ಕೆಲಸ ಮಾಡಿವೆ ಎನ್ನುವ ಮಾಹಿತಿಯನ್ನು ಪಡೆದಿರುವ ಪರಂ ಎಲ್ಲರನ್ನೂ ಓಲೈಸುತ್ತಾ, ಎಲ್ಲರನ್ನೂ ಸಂಬಾಳಿಸುತ್ತಾ ಈ ಬಾರಿ ಚುನಾವಣೆಗೆ ತಯಾರಿಯನ್ನು ಮಾಡಿದ್ದಾರೆ.


ಮುಂದಿನ ಮುಖ್ಯಮಂತ್ರಿಯಾರಾಗಬೇಕು

ಹಿಂದಿನ ವಿಧಾನ ಸಭಾ ಚುನಾವಣೆ ಸನಿಯದಲ್ಲಿರುವುವಾಗ ಹಿಂದಿನ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಮೈಲಾರಪ್ಪನವರ ಮಗನ ಮದುವೆಗೆ ಸಿದ್ದರಾಮಯ್ಯ ಬಂದಿದ್ದರು ಆಗ ಒಂದು ಸಮುದಾಯ ಮುಖಂಡರು ಮುಂದಿನ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜಯವಾಗಲಿ ಎಂದು ಘೋಷಣೆ ಕೂಗಿದ್ದರೂ ಈ ಬಾರಿಯೂ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಸಿದ್ದರಾಮಯ್ಯವರಿಗೆ ಅದೇ ಘೋಷಣೆಗಳು ಎದುರಾಗುವ ಸಂಬವವಿದೆ.


ಕುರುಬರ ಮತ ಕಾಂಗ್ರೇಸ್ ಗೆ ಎನ್ನುವ ಘೋಷಗೆ ತಂತ್ರ

ಪರಂ ಕ್ಷೇತ್ರದಿಂದ ಗೆದ್ದರೆ ಸಿದ್ದರಾಮಯ್ಯ ಮುಖ್ಯಂತ್ರಿಯಾವುದಿಲ್ಲ ಎಂದು ಕುರುಬ ಸಮುದಾಯ ಮತಗಳು ಹರಿದು ಹಂಚಿದ್ದವು ಆದರೆ ಈ ಬಾರಿ ಎಲ್ಲವನ್ನೂ ಪರಂ ಪರವಾಗಿ ಮಾಡಬೇಕು ಎನ್ನುವ ಘೋಷಣೆಯನ್ನು ಸಿದ್ದರಾಮಯ್ಯ ವೇಧಿಕೆಯಲ್ಲಿ ಮಾಡಬೇಕು ಎನ್ನುವುದು ಪರಂ ಪ್ಲಾನ್ ಇದ್ದು ಸಿದ್ದರಾಮಯ್ಯ ಯಾವ ರೀತಿ ಸಮುದಾಯವನ್ನು ಓಲೈಕೆ ಮಾಡುತ್ತಾರೆ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
ಒಟ್ಟಾರೆ ನಾವು ಜೋಡೆತ್ತು... ನಾವಿಬ್ಬರೂ ಪಕ್ಷ ಸಂಘಟನೆ ಮಾಡುತ್ತೇವೆ... ನಮ್ಮಿಬ್ಬರಲ್ಲಿ ಯಾರು ಮುಖ್ಯಮಂತ್ರಿಯಾಗಬೇಕು ಎಂದು ಪಕ್ಷದ ವರಿಷ್ಠರು ತೀರ್ಮಾನಿಸುತ್ತಾರೆ... ಅವರ ತೀರ್ಮಾನಕ್ಕೆ...  ಬದ್ದರಾಗಿಬೇಕು ಎಂದು ಪರಂ ಹೇಳುತ್ತಿದ್ದಾರೆ ಮತ್ತೊಂದೆಡೆ ಸಿದ್ದು ರಾಜ್ಯದ ಮುಂದಿನ ಅವಧಿಯ ಮುಖ್ಯಂತ್ರಿಯೂ ನಾನೇ... ನನ್ನ ಅವಧಿಯಲ್ಲಿ ಎಷ್ಟೊಂದು ಭಾಗ್ಯವನ್ನು ಸರ್ಕಾರ ಜನಸಾಮಾನ್ಯರಿಗೆ ನೀಡಿದೆ ನಾಯಕತ್ವ ಬದಲಾವಣೆಯ ಯಾವುದೇ ಪ್ರಶ್ನೆಯೇ ಇಲ್ಲಾ ಎಂದು ಮತ್ತೊಂದೆಡೆ ಹೇಳುತ್ತಿದ್ದು ಒಟ್ಟಾರೆ ಸಿದ್ದರಾಮಯ್ಯ ಕ್ಷೇತ್ರದ ಭೇಟಿ ಒಳ್ಳೇ ಹವಾ ಸೃಷ್ಟಿಮಾಡಿದ್ದು ಯಾವ ರೀತಿಯಲ್ಲಿ ಇಬ್ಬರೂ ನಾಯಕರೂ ಒಟ್ಟಾಗಿ ಒಗಟ್ಟು ಪ್ರಶ್ನಿಸುತ್ತಾರೆ ಮತ್ತು ಸಿದ್ದು ಭೇಟಿ ಕ್ಷೇತ್ರದಲ್ಲಿ ಪರಂಗೆ ಯಾವ ರೀತಿಯ ಅನುಕೂಲವಾಗಲಿದೆ ಎಂದು ಕಾದು ನೋಡಬೇಕಿದೆ.

Edited By

Raghavendra D.M

Reported By

Raghavendra D.M

Comments