ವಿಧಾನಸಭಾ ಚುನಾವಣೆಯ ಬಗ್ಗೆ ಭವಿಷ್ಯ ನುಡಿದ ಎಚ್ ಡಿಕೆ

05 Mar 2018 9:47 AM |
5728 Report

ಮುಳಬಾಗಲು ಪಟ್ಟಣದಲ್ಲಿ ಆಯೋಜಿಸಿದ್ದ ವಿಕಾಸಪರ್ವ ಸಮಾವೇಶದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕೆ ಚಾಲನೆ ನೀಡಿದ ಕುಮಾರಸ್ವಾಮಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಏನೆಲ್ಲಾ ಬದಲಾವಣೆಗಳನ್ನು ಮಾಡುತ್ತೆ, ಎಂದು ಹೇಳುತ್ತಾ ಭರವಸೆಗಳ ಸುರಿಮಳೆಯನ್ನೇ ಗೈದರು.ಈ ಚುನಾವಣೆಯಲ್ಲಿ ಕುಮಾರಸ್ವಾಮಿ ಮಾತ್ರ ಪರಿಹಾರ ಎನ್ನುವ ಭಾವನೆ ಜನರಲ್ಲಿ ಬಂದಿದೆ. ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಸಹಕಾರ ಸಂಸ್ಥೆಗಳು ಹಾಗೂ ಸ್ತ್ರೀ ಸಂಘಗಳು ಪಡೆದಿರುವ ಸಾಲ ಮನ್ನ ಮಾಡುವ ಘೋಷಣೆ ಮಾಡಿದರು. ರಾಜ್ಯದ ಬಡವರನ್ನು ಒಂದು ಸಲ ಸಾಲದಿಂದ ಋಣಮುಕ್ತ ಮಾಡುವ ಅವಕಾಶ ಜೆಡಿಎಸ್ ಗೆ ಕೊಡಲು ಮನವಿ ಮಾಡಿದ್ದಾರೆ.

ಹೃದಯ ಖಾಯಿಲೆ ಒಳಗಾಗಿದ್ದೇನೆ. ವಿಶ್ರಾಂತಿ ಇಲ್ಲದೆ ಹೋರಾಟ ಮಾಡುತ್ತಿದ್ದೇನೆ. 3700 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಬಿಜೆಪಿ ಬೇಡ ಕುಮಾರಸ್ವಾಮಿ ಬೇಕು ಅಂತಾ ರಾಜ್ಯದಲ್ಲಿ ಚರ್ಚೆ ಆಗುತ್ತಿದೆ. ಇಸ್ರೇಲ್ ನಲ್ಲಿ ಪ್ರವಾಸ ಮಾಡಿದೆ. ಅಲ್ಲಿ ಹೃದಯಘಾತ ವಾಯಿತು. ಅಲ್ಲಿ ಜೀವ ಉಳಿಸಿಕೊಂಡು ರೈತರ ಪರಿಸ್ಥಿತಿ ನೋಡಿ ವಾಪಸ್ಸು ರಾಜ್ಯದ ಭೂಮಿಗೆ ಬಂದಿದ್ದೇನೆ. ಸಹಕಾರಿ ಬ್ಯಾಂಕಿನ, ರಾಷ್ಟೀಯ ಬ್ಯಾಂಕ್ ಗಳ ಸಂಪೂರ್ಣ ಮಾಡುತ್ತೇವೆ. ಮೇ ನಲ್ಲಿ ಚುನಾವಣೆ. ನರೇಂದ್ರ ಮೋದಿ ಶಾಸ್ತ್ರ ಕೇಳಿ ದಿನಾಂಕ ಹೇಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಎಂದು ಬರೋದಿಲ್ಲ ಭವಿಷ್ಯ ನುಡಿದರು.ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿರುವವರು, ಅಧಿಕಾರದ ರಕ್ಷಣೆಯಲ್ಲಿದ್ದಾರೆ. ಪರ್ಸೆಂಟ್ ವ್ಯವಹಾರದವರು ಬೇಕೋ, ಬದುಕಿಗೆ ಬೆಳಕು ಕೊಡುವರು ಬೇಕೋ ತೀರ್ಮಾನಿಸಿ. ಲಂಚ ತೆಗೆದುಕೊಳ್ಳುವುದನ್ನು ಯಾರಿಗೂ ಗೊತ್ತಾಗದಂತೆ ಮಾಡಬೇಕು ಎನ್ನುವುದು ಆರೋಗ್ಯ ಸಚಿವರ ಸಲಹೆ. ದೂರದ ಎತ್ತಿನಹೊಳೆ ನೀರು ತರುವುದಾದ್ರೆ ಇಲ್ಲಿರುವ ಯರಗೋಳು ಯೋಜನೆ ಜಾರಿ ಮಾಡೋದಿಕ್ಕೆ ಆಗಲ್ವ? ಎತ್ತಿನಹೊಳೆ ಹರಿಸುವ ಆತ್ಮವಿಶ್ವಾಸವಿದ್ರೆ ಕೋಲಾರ ಜಿಲ್ಲೆಗೆ ಕೊಳಚೆ ನೀರು ಹರಿಸುವ ಕೆಸಿ ವ್ಯಾಲಿ ಯೋಜನೆ ಜಾರಿ ಮಾಡ್ತಿರೋದು ಏಕೆ? ನಾಟಕ ಆಡೋರನ್ನ ದೂರವಿರಿಸಿ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಿ ಎಂದು ಕರೆ ನೀಡಿದರು.ಕಾಂಗ್ರೆಸ್ ಮುಕ್ತ ಮಾಡಲು ಬರ್ತಿರುವವರ ಬಗ್ಗೆ ಎಚ್ಚರವಿರಲಿ. ಜನರ ತೆರಿಗೆ ಹಣ ಕಮೀಷನ್ ರೂಪದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಗೆ ಹೋಗುತ್ತಿದೆ. ಜೆಡಿಎಸ್ ಗೆ ಒಂದು ಸಲ ಅವಕಾಶ ಕೊಟ್ಟರೆ ಹೊಸ ಸರ್ಕಾರ ಕೊಡುತ್ತೇನೆ. ಪಾರ್ಟಿಯ ವರಿಷ್ಟರೂ ಇಲ್ಲ, ಸಚಿವರು ಇಲ್ಲ ಜನರ ದುಡ್ಡಲ್ಲಿ ಪುಟಗಟ್ಟಲೆ ಸಿಎಂ ಜಾಹೀರಾತು. ಸೋಲಾರ ಎನರ್ಜಿ ಹೆಸರಲ್ಲಿ ರಾಜ್ಯದ ಜನರ ಗಂಟು ಲೂಟಿಯಾಗಿದೆ. ಎಂಟು ಗಂಟೆ ವಿದ್ಯುತ್ ಕೊಡಲು ಸಾಧ್ಯವಿಲ್ಲದ ಸಿಎಂ ಬಡಾಯಿಗೆ ಕಡಿಮೆಯಿಲ್ಲ. ಹತ್ತು ವರ್ಷಗಳಲ್ಲಿನ ಸರ್ಕಾರಗಳಂತೆ ನಾನಂತೂ ಸಾಲದ ಹೊರೆಯನ್ನು ಜನರ ಮೇಲೆ ಹೊರಿಸಲ್ಲ ಎಂದು ಹೇಳುವ ಮೂಲಕ ಡಿಕೆ ಶಿವಮೂಮಾರ್ ಗೆ ಟಾಂಗ್ ನೀಡಿದರು.

ಕರಾವಳಿ ಸಮಸ್ಯೆಗಳನ್ನು ಬಗೆಹರಿಸಲು ಜೆಡಿಎಸ್ ಅಧಿಕಾರಕ್ಕೆ ಬರಬೇಕು. ನರೇಂದ್ರ ಮೋದಿ ಓಟ ನಿಲ್ಲಬೇಕಾದ್ರೆ ಕರ್ನಾಟಕದಲ್ಲಿ ಜೆಡಿಎಸ್ ಬರಬೇಕಾಗಿದೆ. ಮಾಯಾವತಿ ಅವರು ಜೆಡಿಎಸ್ ಬೆಂಬಲಿಸಿದ್ದಾರೆ. ಅಲ್ಲಸಂಖ್ಯಾತ ಬಂಧುಗಳು ಕಾಂಗ್ರೆಸ್ ಬೆಂಬಲಿಸಬೇಡಿ ಎಂದರು.  ಡಿ.ಕೆ.ರವಿ ಕುಟುಂಬಕ್ಕೆ ರಾಜ್ಯ ಸರ್ಕಾರ ಏನು ಕೊಟ್ಟಿಲ್ಲ, ಮೋದಿ ದೂಳಿಪಟ ಮಾಡುವುದು ಜೆಡಿಎಸ್ ನಿಂದ ಮಾತ್ರ ಸಾಧ್ಯ . ಮೋದಿ ಬಣ್ಣದ ಮಾತುಗಳಿಗೆ ಮರಳಾಗಬೇಡಿ ಎಂದರು. ಗ್ರಾಮವಾಸ್ತವ್ಯ ಎಲ್ಲಾ ಸಮುದಾಯಗಳ ಮನೆಯಲ್ಲಿ ವಾಸ್ತವ್ಯ ಮಾಡುತ್ತಿದ್ದೆ. ರೈತರ ಸಾಲಮನ್ನಾ ಮಾಡಿದ್ದೆ. ಸಹಕಾರಿ ಬ್ಯಾಂಕುಗಳಲ್ಲಿ ಮಾಡಿಸಿದ್ದೇ. ರೈತರ ಆತ್ಮಹತ್ಯೆ ನಿಲ್ಲಿಸಲು 24 ಗಂಟೆಯಲ್ಲಿ ಎಲ್ಲಾ ಬ್ಯಾಂಕುಗಳ ಸಾಲ ಕನ್ನಡ ಮಾಡುತ್ತೇನೆ. ರಾಜ್ಯದ ಜನರು ನನಗೆ ಅಧಿಕಾರಕ್ಕೆ ತರಬೇಕು. ಮುಂದೆ ಸಮ್ಮಿಶ್ರ ಸರ್ಕಾರ ಬರೋದಿಲ್ಲ, ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ. 51 ಸಾವಿರ ಕೋಟಿ ಸಾಲ ಮನ್ನಾಗೆ ಎದೆಗಾರಿಕೆಗೆ ಬೇಕು, ಅದು ಮಾಡಿ ತೋರಿಸುತ್ತೇನೆ. 25 ಸಾವಿರ ಕೋಟಿ ರೈತರಿಗೆ ಮೀಸಲಿಡುತ್ತೇನೆ. ಗರ್ಭಿಣಿ ಸ್ರೀಯರಿಗೆ ಆರು ತಿಂಗಳು ಪ್ರತಿ ತಿಂಗಳು ಆರು ಸಾವಿರ ಕೊಡುತ್ತೇನೆ. 70 ಮೇಲ್ಪಟ್ಟ ವಯೋವೃದ್ದರಿಗೆ ಪ್ರತಿ ತಿಂಗಳು 5 ಸಾವಿರ ಕೊಡುತ್ತೇನೆ. ಅಂಗವಿಕಲರಿಗೆ ಅಮಾಶಾನ ಕೊಡುತ್ತೇನೆ. 10 ಯುವಕ- ಯುವತಿಯರಿಗೆ ಉದ್ಯೋಗಕ್ಕಾಗಿ ಸಸಿ ನಡುವ ಕಾರ್ಯಕ್ರಮ ಮಾಡುತ್ತೇನೆ ಎಂದರು.

 

Edited By

Shruthi G

Reported By

hdk fans

Comments