‘‘ದೇವಾಂಗದವರ ಮನೆಯಲ್ಲಿ ದೆವ್ವಗಳಿಗೂ ಕೆಲಸ ಉಂಟು’’

01 Mar 2018 4:18 PM |
755 Report

ನೇಕಾರಿಕೆಯ ವೃತ್ತಿ ದೈಹಿಕ ಶ್ರಮದ ಜೊತೆಗೆ ತಾಳ್ಮೆಯನ್ನು ನೀರಕ್ಷಿಸುವಂತಹ ವೃತ್ತಿ. 8 ವರ್ಷದ ಮಕ್ಕಳಿಂದ ಹಿಡಿದು 8೦ ವರ್ಷದ ವೃದ್ಧರ ವರೆಗೆ ನೇಕಾರಿಕೆ ವೃತ್ತಿಗೆ ಸಹಾಯ ಬೇಕಾಗುತ್ತದೆ, ಮಾನವನ ಇತಿಹಾಸದೊಂದಿಗೆ ಜೀವನಕ್ಕೆ ಅತ್ಯವಶ್ಯಕವಾದ ಬೇಡಿಕೆಗಳೆಂದರೆ ಆಹಾರ, ಅಚ್ಚಾದನ (ಬಟ್ಟೆ, ಅರಿವೆ, ವಸ್ತ್ರ, ವಸನ) ಆಶ್ರಯ. ತೀರಾ ಪ್ರಾಚೀನ ಕಾಲದಲ್ಲಿ ದಿಂಗಬರನಾಗಿ ತಿರುಗುತ್ತಿದ್ದ ಮಾನವನಿಗೆ ಅರಿವು ಬಂದಾಗ ಅರಿವೇ ಬೇಕಾಯಿತು, ಆಗ ಪ್ರಾಣಿಯ ಚರ್ಮ, ಗಿಡದ ತೊಗಟೆ ಇತ್ಯಾದಿಗಳಿಂದ ತನ್ನ ಮಾನವನ್ನು, ದೇಹವನ್ನು ರಕ್ಷಿಸಿಕೊಳ್ಳಲು ಪ್ರಾರಂಭಿಸಿದ ಕ್ರಿ.ಪೂ.2005 ರಿಂದ 3೦೦೦ ವರೆಗಿನ ಸಿಂಧೂ ಸಂಸ್ಕೃತಿಯ ಜನರು ನೂಲುವ, ನೇಯುವ, ಹೊಲೆಯುವ ಕಲೆಯನ್ನು ಬಲ್ಲವರಾಗಿದ್ದರು. ‘‘ಇಲಿಗಳು ನೇಕಾರರ ಎಳೆಗಳನ್ನು ತಿನ್ನುವಂತೆ, ಚಿಂತಾತೂರತೆಗಳು ನನ್ನನ್ನು ತಿಂದು ಸಣ್ಣಗೆ ಮಾಡುತ್ತವೆ’’ ಎಂದು ಋಗ್ವೇದದಲ್ಲಿ ಹೇಳಲಾಗಿದೆ. ‘‘ನೇಕಾರರು ಮಗ್ಗದ ಲಾಳಿ ಎಸೆಯುವಂತೆ, ರಾತ್ರಿ ಮತ್ತು ಹಗಲು ಭೂಮಿಯ ಮೇಲೆ ಬೆಳಕು ಮತ್ತು ಕತ್ತಲನ್ನು ಚೆಲ್ಲುತ್ತವೆ’’ ಎಂಬ ಉಪಮೇಯ ಅರ್ಥವರ್ಣದಲ್ಲಿದೆ.

1೦ನೇ ಶತಮಾನದ ಶರಣ ಅಧ್ಯವಚನಕಾರ ದೇವರ ದಾಸಿಮ್ಯನವರು ಈ ವೃತ್ತಿಯಿಂದಲೇ ದೇವರನ್ನು ಕಂಡವರು. ಉಂಕೆಯನಿಗೂಚಿ, ಸರಿಗೆಯ ಸಮಗೊಳಿಸಿ| ಸಮಗಾಲನಿಕ್ಕಿ ಅಣಿಕೊಳೆರಡು ಮೆಟ್ಟಿದೆ||ಹಿಡಿದ ತಾಳಿಯ ಮುಳ್ಳು ಕಂಡಿಕೆಯ ನುಂಗ್ಗಿತ್ತು|ಈ ಸಿರೆಯ ನೈಯದವ ನಾನೂ, ನೀನೂ ಕಾಣಾ ರಾಮನಾಥ|| ದಾಸಿಮ್ಯನವರಿಗೆ ನೇಯ್ಗೆ ವೃತ್ತಿಯೇ ಪ್ರವೃತ್ತಿ ಆಯಿತು. ಆ ಪ್ರವತ್ತೆಯೇ ಪರಮಾತ್ಮನ ಸಾಧನೆಗೆ ಸೋಪಾನವಾಯಿತು. ವೃತ್ತಿ ಆಧ್ಯಾತ್ಮಿಕರಣವಾಯಿತು. ಜೇಡವೃತ್ತಿ, ದೇವವೃತ್ತಿ ಆಯಿತು. ಜೇಡರ್ ದಾಸಿಮ್ಯ-ದೇವರ ದಾಸಿಮಯ್ಯನಾದನು.  ಹಿಡಿದ ಲಾಳಿಯ ಮುಳ್ಳು ಕಂಡಿಕೆಯ ನುಂಗಿತ್ತು ಎಂಬುದನ್ನು ಬೆಡಗಿನ ಮಾತು.  ಮುಳ್ಳು ಕಂಡಿಕೆಯ ನುಂಗಿತ್ತು ಎಂದರೆ ಅಶಾಶ್ವತವಾದ ದೇಹ, ಶಾಶ್ವತವಾದ ದೇವರನ್ನು (ತನ್ನಲ್ಲಿಯೇ ಪಿಂಡ ರೂಪದಲ್ಲಿದ್ದ) ಕಂಡಿತು ಎಂದರ್ಥ. ಶಿವ, ಕಾಯ ಮತ್ತು ಕಾಯಕದಿಂದಲೇ ಸಾಧ್ಯ. 

ಪಾರಂಪರಿಕವಾಗಿ ನೇಕಾರಿಕೆಯನ್ನು ಉಳಿಸಿಕೊಂಡು, ಬೆಳೆಸಿಕೊಂಡು ಬಂದವರಲ್ಲಿ ಪ್ರಮುಖವಾದ ಸಮುದಾಯಗಳು ದೇವಾಂಗ, ಪದ್ಮಶಾಲಿ, ಸ್ವಕುಳಸಾಲಿ, ಕುರಿಹೀನಶೆಟ್ಟಿ, ತೋಗಟವೀರರು ಇತ್ಯಾದಿ.  ಇದರ ಜೊತೆಗೆ ಜೀವನೋಪಯಕ್ಕಾಗಿ ಹಾಗೂ ಲಾಭ ಗಳಿಕೆಗಾಗಿ ಇತ್ತೀಚಿಗೆ ಲಿಂಗಾಯತರು, ಕ್ರಿಶ್ಚಿಯನರು, ಇತರೆ ಸ್ಥಳೀಯ ಸಮುದಾಯ ಕೂಡಾ ನೇಕಾರಿಕೆಯನ್ನು ಅವಲಂಬಿಸಿರುವುದನ್ನು ಕಾಣುತ್ತೇವೆ.

Edited By

Ramesh

Reported By

Ramesh

Comments