ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದು ಗೆಲುವಿಗೆ ಕೊಡಲಿ ಹಾಕಿರುವ ಜೆಡಿಎಸ್

28 Feb 2018 9:30 AM |
13307 Report

ಕರ್ನಾಟಕ ವಿಧಾನ ಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚುನಾವಣಾ ಕ್ಷೇತ್ರಗಳ ವರ್ಚಸ್ಸು ಹೆಚ್ಚುತ್ತಿದೆ. ನಾವು ಯಾವ ಕ್ಷೇತ್ರದ ಬಗ್ಗೆ ಹೇಳುತ್ತಿದ್ದೇವೆ ಎಂದರೆ ಮತ್ತ್ಯಾವುದು ಅಲ್ಲ. ರಾಜ್ಯ ಮಾತ್ರವಲ್ಲದೆ ರಾಷ್ಟ್ರವೇ ಎದುರು ನೋಡುತ್ತಿರುವ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಸಿಎಂ ಸಿದ್ದರಾಮಯ್ಯ ಹಾಗು ಜಿ ಟಿ ದೇವೇಗೌಡರ ಚುನಾವಣಾ ರಣರಂಗದಲ್ಲಿ ಯಾವ ಪಕ್ಷ ಎಷ್ಟು ಬಲಶಾಲಿ ಎಂದು ತಿಳಿಯಲು ಕಾತುರವಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರ ಗೆಲುವು ಅಷ್ಟು ಸುಲಭವೇ ಎಂಬ ಪ್ರಶ್ನೆ ಏಳುತ್ತದೆ. ಈ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವರ್ಸಸ್​ ಜಿ.ಟಿ.ದೇವೇಗೌಡರ ಅಂತ ಇದೆ. ದೇವೇಗೌಡರು ಜೆಡಿಎಸ್ ನ ಹುರಿಯಾಳು. ಚಾಮುಂಡೇಶ್ವರಿ ಬೇರೆ ಕ್ಷೇತ್ರಗಳಂತಲ್ಲ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಆದಾಗ ಇಲ್ಲಿ ಒಕ್ಕಲಿಗ ಸಮುದಾಯದ ಪ್ರಾಬಲ್ಯ ಹೆಚ್ಚಾಯಿತು. ಇಲ್ಲಿ ಒಕ್ಕಲಿಗ ಸಮುದಾಯದವರು 70 ಸಾವಿರದಷ್ಟು ಮತಗಳಿದ್ದು, ಕುರುಬ, ನಾಯಕ ಮತ್ತು ದಲಿತ ಸಮುದಾಯದವರದೂ ಸೇರಿ ಒಟ್ಟು 1,20,000 ಮತಗಳಿವೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನ ಜಿ.ಟಿ.ದೇವೇಗೌಡರ ಪ್ರಭಾವ ಹೆಚ್ಚಿದೆ. ಆದ್ದರಿಂದ ಸಿದ್ದರಾಮಯ್ಯ ಅವರಿಗೆ ಇಲ್ಲಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಇದು ಜೆಡಿಎಸ್​ನ ಭದ್ರಕೋಟೆ. ಶಾಸಕ ಜಿ.ಟಿ. ದೇವೇಗೌಡ 2 ದಶಕಗಳ ಕಾಲ ಸಿದ್ದರಾಮಯ್ಯ ಅವರ ಒಡನಾಡಿಯಾಗಿಯೇ ಇದ್ದವರು. 2006ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಸಿದ್ದು ಕಾಂಗ್ರೆಸ್ ಗೆ ಸೇರಿದ್ದರೂ ಜಿ.ಟಿ.ದೇವೇಗೌಡರು ಮಾತ್ರ ಜೆಡಿಎಸ್​ನಲ್ಲೇ ಉಳಿದರು. ಅಲ್ಲದೆ ಇಲ್ಲಿವರೆಗೆ ಅಲ್ಲಿಂದ ನಿಂತು ಗೆದ್ದಿದ್ದಾರೆ ಕೂಡಾ. ಸಿದ್ದರಾಮಯ್ಯ ಈ ಕ್ಷೇತ್ರಕ್ಕೆ ಎಷ್ಟೇ ಅನುದಾನ ಕೊಟ್ಟರೂ, ಎಷ್ಟೇ ಪ್ರಚಾರ ನಡೆಸಿದರೂ ಪ್ರಬಲ ಪೈಪೋಟಿ ಕೊಡುವ ಶಕ್ತಿ ಜೆಡಿಎಸ್ ನ ಜಿ.ಟಿ.ದೇವೇಗೌಡರಿಗೆ ಇದೆ.

Edited By

Shruthi G

Reported By

hdk fans

Comments