ಉಪೇಂದ್ರರವರು ಸಿಎಂ ಆದ್ರೆ ಮೊದಲು ಏನ್ಮಾಡ್ತಾರಂತೆ ಗೊತ್ತಾ..!

20 Feb 2018 4:03 PM |
1615 Report

ಇತ್ತೀಚೆಗಷ್ಟೇ ಪ್ರಜಾಕೀಯವೆಂಬ ಪಕ್ಷವನ್ನು ಸ್ಥಾಪಿಸಿ ತಮ್ಮದೇ ಆದ ವಿಭಿನ್ನ ರೀತಿಯಲ್ಲಿ ಆಡಳಿತ ನಡೆಸಲು ಸಿದ್ಧರಾಗಿದ್ದು ಅಭ್ಯರ್ಥಿಯ ಆಯ್ಕೆಗೂ ಮುಂದಾಗಿರುವ ಕೆಪಿಜೆಪಿ ಪಕ್ಷದ ಸಂಸ್ಥಾಪಕ ಉಪೇಂದ್ರರವರು ಇದೀಗ ಎಲ್ಲರು ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದಾರೆ. ಏನಪ್ಪಾ ಅದು ಅಂದ್ರೆ ಉಪ್ಪಿ ಸಿಎಂ ಆದ್ರೆ ಮೊದಲು ಏನ್ಮಾಡ್ತಾರಂತೆ ಗೊತ್ತಾ?.

ಒಂದು ವೇಳೆ ಉಪೇಂದ್ರರವರು ಗೆದ್ದು ಮುಖ್ಯಮಂತ್ರಿಯಾದ್ರೆ......? ಎಂಬ ಪ್ರಶ್ನೆಗಳು ಅಭಿಮಾನಿಗಳನ್ನ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಯಾಗ್ತಿದೆ. ಈ ಪ್ರಶ್ನೆ ಸ್ವತಃ ಉಪೇಂದ್ರ ಅವರೇ ಉತ್ತರಿಸಿದ್ದಾರೆ. ಉಪೇಂದ್ರ ಏನಾದರೂ ಮುಖ್ಯಮಂತ್ರಿಯಾದರೇ, ಮೊದಲು ಮಾಡುವ ಕೆಲಸ ಏನು ಎಂದು ಬಹಿರಂಗಪಡಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉಪ್ಪಿ ಪಕ್ಷ ಬಹುಮತದಿಂದ ಗೆದ್ದು ಮುಖ್ಯಮಂತ್ರಿ ಆದರೇ, ಮೊದಲ ವಿಧಾನಸೌದಕ್ಕೆ ಬಾಗಿಲು ಹಾಕ್ತಾರಂತೆ. ಹೌದು, ಅಚ್ಚರಿಯಾದ್ರು ಈ ತ್ಯವನ್ನ ನಂಬಲೇಬೇಕು. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ ಹೊಚ್ಚ ಹೊಸ ಟಾಕ್ ಶೋ ಯಾರೀ ನಂ.1 ಕಾರ್ಯಕ್ರಮದಲ್ಲಿ ಉಪೇಂದ್ರ ಅತಿಥಿಯಾಗಿದ್ದರು. ಈ ವೇಳೆ ಶಿವಣ್ಣ ನೀವು ಮುಖ್ಯಮಂತ್ರಿಯಾದ್ರೆ ಮಾಡುವ ಮೊದಲ ಕೆಲಸವೇನು ಎಂದು ಪ್ರಶ್ನಿಸಿದ್ದರು. ಅದಕ್ಕೆ ಉಪ್ಪಿ ''ವಿಧಾನಸೌದಕ್ಕೆ ಬಾಗಿಲು ಹಾಕ್ತೀನಿ'' ಎಂದಿದ್ದಾರೆ.

 

Edited By

upendra fans

Reported By

upendra fans

Comments