ಹಿಂದೂ ಜಾತಿಯನ್ನು ಅವಮಾನಿಸಿದ ಮೊಹಮದ್ ನಲ್ಪಾಡ್ ನ ಮತ್ತೊಂದು ಕರ್ಮಕಾಂಡ ಬಯಲು

20 Feb 2018 3:58 PM |
1885 Report

ಮೂರು ವರ್ಷದ ಹಿಂದೆ ಪೂರ್ಣಿಮಾ ದಾಸ್ ಎಂಬುವರ ಮೇಲೆ ನಲ್ಪಾಡ್ ಗುಂಡಾಗಿರಿ ಮಾಡಿದ್ದು, ಈಗ ಆ ಮಹಿಳೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಪೂರ್ಣಿಮಾ ದಾಸ್, ನಾನು ಬೆಂಗಳೂರಿನಲ್ಲಿ ಎನ್‍ಜಿಓ ಆಗಿದ್ದರಿಂದ ದಕ್ಷಿಣ ಭಾರತದ ಎನ್‍ಜಿಓ ಕಾನ್ಫರೆನ್ಸ್ ಗೆ ಹೋಗಿದ್ದೆ. ಅಲ್ಲಿ ನಡೆಯುತ್ತಿದ್ದ ಚಟುವಟಿಗೆಗಳು ತುಂಬಾ ಅನುಮಾನಸ್ಪದವಾಗಿ ನಡೆಯುತ್ತಿತ್ತು. ಅಲ್ಲಿ ನಾವು ಹಿಂದೂಗಳು ಎಂದು ಹೇಳಿಕೊಳ್ಳಲು ಮಾತ್ರವಲ್ಲ. ಹಿಂದೂಗಳೆಲ್ಲ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದ್ದರಿಂದ ನಾನು ಈ ಬಗ್ಗೆ ನಾನು ಧ್ವನಿ ಎತ್ತಿದ್ದಕ್ಕೆ ಅಲ್ಲಿದ್ದ ಮುಸ್ಲಿಮರೆಲ್ಲ ಒಂದಾಗಿ ನನ್ನ ಜೊತೆ ಕೆಟ್ಟದ್ದಾಗಿ ವರ್ತಿಸಿದರು ಎಂದು ಹೇಳಿದ್ದಾರೆ.

ಎನ್‍ಜಿಓ ಕಾನ್ಫರೆನ್ಸ್ ಅಂತಾ ಕರೆದು ಇಸ್ಲಾಂ ಧರ್ಮದ ಪ್ರಚಾರ ಕಾರ್ಯ ಮಾಡಲು ಮುಂದಾಗಿದ್ದರು. ಈ ಬಗ್ಗೆ ನಾನು ಪ್ರಶ್ನೆ ಮಾಡಿದ್ದೆ. ನಂತರ ನಾನು ಈ ಬಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹೋಗಿ ಕಂಪ್ಲೇಂಟ್ ಮಾಡಲು ಹೋಗಿದ್ದೆ. ಆದರೆ ಪೊಲೀಸರಿಗೆ ಹ್ಯಾರಿಸ್ ಮತ್ತೆ ಮಗ ಕರೆ ಮಾಡಿ ದೂರು ತೆಗೆದುಕೊಳ್ಳದಂತೆ ಸೂಚಿಸಿದ್ದರು. ಅದೇ ರೀತಿ ದೂರಿನ ಕಾಪಿಯನ್ನು ಕೂಡ ಹರಿದು ಚೂರು ಚೂರು ಮಾಡಿದ್ದರು.

Edited By

Yuva Morcha

Reported By

Yuva Morcha

Comments