ಸಿಟಿ ಬಿಟ್ಟು ರೆಸಾರ್ಟ್ ಗೆ ಶಿಫ್ಟ್ ಆದ ಉಪ್ಪಿ ಫ್ಯಾಮಿಲಿ

20 Feb 2018 2:11 PM |
1510 Report

ಉಪ್ಪಿ ಪ್ರಜಾಕಿಯಾದ ಮೂಲಕ ಬಲಾವಣೆಯತ್ತ ಹೆಜ್ಜೆ ಹಾಕಲು ಮುಂದಾದ ಉಪ್ಪಿ. ಸಿನಿಮಾ, ರಾಜಕೀಯ ಇವುಗಳ ಮಧ್ಯೆ ಉಪ್ಪಿ ಸಿಟಿ ಬಿಟ್ಟು ರೆಸಾರ್ಟ್ ಸೇರಿಕೊಂಡಿದ್ದಾರೆ ಎನ್ನುವುದು ಬಾರಿ ಸದ್ದು ಮಾಡುತ್ತಿದೆ. ರೆಸಾರ್ಟ್ ನಿಂದಲೇ ರಾಜಕೀಯ ಪ್ರಾರಂಭ ಮಾಡಿದ ಉಪ್ಪಿ ಮತ್ತೆ ರೆಸಾರ್ಟ್ ನಲ್ಲೇ ಉಳಿದುಕೊಂಡಿದ್ದಾರಂತೆ.

ಬನಶಂಕರಿಯಿಂದ ದೊಡ್ಡ ಆಲದಮರ ಬಳಿ ಇರುವ ರುಪ್ಪಿಸ್ ರೆಸಾರ್ಟ್ ಗೆ ಶಿಫ್ಟ್ ಆಗಿದ್ದಾರೆ. ಬನಶಂಕರಿಯಿಂದ ರುಪ್ಪಿಸ್ ರೆಸಾರ್ಟ್ ಗೆ ಶಿಫ್ಟ್ ಆಗಲು ಉಪ್ಪಿ ಫ್ಯಾಮಿಲಿ ನಿರ್ಧಾರ ಮಾಡಿದೆ. ಸಾಂಪ್ರದಾಯಿಕವಾಗಿ ಗೃಹ ಪ್ರವೇಶ ಸಮಾರಂಭ ಮಾಡಿ ಮುಗಿಸಿದ್ದು ಇನ್ನು ಕೆಲವೇ ದಿನಗಳಲ್ಲಿ ಉಪ್ಪಿ ಫ್ಯಾಮಿಲಿ ಹೊಸ ಮನೆಯಲ್ಲಿ ಜೀವನ ಕಳೆಯಲಿದೆ. ರುಪ್ಪಿಸ್ ರೆಸಾರ್ಟ್ ನ ಹಿಂಭಾಗದಲ್ಲಿ ಹೊಸ ಮನೆಯನ್ನ ಕಟ್ಟಲಾಗಿದೆ. ಈ ಹಿಂದೆ ಪ್ರಿಯಾಂಕ ಉಪೇಂದ್ರ ಅಭಿನಯದ ಮಮ್ಮಿ ಸೇವ್ ಮಿ ಸಿನಿಮಾದ ಚಿತ್ರೀಕರಣಕ್ಕಾಗಿ ಅದೇ ಸ್ಥಳದಲ್ಲಿ ಬಂಗಲೆಯ ಸೆಟ್ ಹಾಕಲಾಗಿತ್ತು. ಆ ಜಾಗದಲ್ಲಿ ದೊಡ್ಡ ಮನೆ ನಿರ್ಮಾಣ ಆಗಿದೆ.ಇಷ್ಟು ವರ್ಷಗಳ ಕಾಲ ಬನಶಂಕರಿಯಲ್ಲಿ ವಾಸವಾಗಿದ್ದ ಉಪ್ಪಿ ಇನ್ನು ಮುಂದೆ ರುಪ್ಪಿಸ್ ರೆಸಾರ್ಟ್ ನಲ್ಲಿ ಇರಲಿದೆ. ಹಾಗಂತ ಬನಶಂಕರಿಯ ಮನೆಯನ್ನೂ ಖಾಲಿ ಮಾಡುತ್ತಿಲ್ಲ. ರಾಜಕೀಯ ಪಕ್ಷದ ಕೆಲಸ ಹಾಗೂ ಸಿನಿಮಾ ಕೆಲಸಗಳೆಲ್ಲವೂ ಈ ಮನೆಯಲ್ಲೇ ನಡೆಯಲಿದೆ.

Edited By

Uppendra fans

Reported By

upendra fans

Comments