ಖುದ್ದಾಗಿ ಅಭ್ಯರ್ಥಿಗಳ ಸಂದರ್ಶನಕ್ಕೆ ಮುಂದಾದ ಉಪೇಂದ್ರ

10 Feb 2018 4:47 PM |
2283 Report

ವಿಧಾನ ಸಭಾ ಚುನಾವಣೆ ಹತ್ತಿರ ವಾಗುತ್ತಿದ್ದಂತೆ ಎಲ್ಲ ರಾಜಕೀಯ ಪಕ್ಷಗಳು ಜನರನ್ನು ತಮ್ಮತ್ತ ಸೆಳೆಯಲು ಕಸರತ್ತು ನಡೆಸುತ್ತವೆ. ಅಲ್ಲದೆ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗುತ್ತಾರೆ. ಅದೇ ರೀತಿ ಬಾರಿ ರಾಜಕೀಯ ಅಖಾಡಕ್ಕಿಳಿದಿರುವ ಉಪೇಂದ್ರ ರವರು ಸಹ ತಾವೇ ಅಭ್ಯರ್ಥಿಗಳ ಸಂದರ್ಶನಕ್ಕೆ ಮುಂದಾಗಿದ್ದಾರೆ. ಈಗಾಗಲೇ 50 ಜನರ ಸಂದರ್ಶನ ಮುಗಿಸಿದ್ದಾರೆ. ಈ 50 ರಲ್ಲಿ ಎಲ್ಲ ವರ್ಗದ ಜನರನ್ನು ಆಯ್ಕೆ ಮಾಡಿದ್ದಾರೆ ಎನ್ನಲಾಗಿದೆ.

50 ಮಂದಿಯ ಪೈಕಿ ಚಲನಚಿತ್ರದ ಕಲಾವಿದರು ಸೇರಿದಂತೆ ಸಾಮಾನ್ಯ ಜನರನ್ನು ಸಹ ಸಂದರ್ಶಿಸಲಾಗಿದೆ. ಮೊದಲ ಸುತ್ತಿನಲ್ಲಿ ಸುಮಾರು 120ಮಂದಿಯನ್ನು ಸಂದರ್ಶಿಸಿ ಆಯ್ಕೆಯ ಪ್ರಕ್ರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಎರಡನೇ ಸುತ್ತಿನಲ್ಲಿ ಸಂದರ್ಶಿಸಿರುವ 50ಮಂದಿಯ ಫೋಟೋಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಫೇಜ್ ನಲ್ಲಿ ಪ್ರಕಟಿಸಿದ್ದಾರೆ. ಆಟೋ ಚಾಲಕರು, ಶಿಕ್ಷಕರು, ಗೃಹಿಣಿಯರು, ಸಿನಿಮಾ ರಂಗದವರು ಸೇರಿದಂತೆ ಎಲ್ಲಾ ವರ್ಗದ ಸಾಮಾನ್ಯ ಜನರಿಗೆ ಪಕ್ಷದ ವತಿಯಿಂದ ಟಿಕೆಟ್ ನೀಡಲು ನಿರ್ಧರಿಸಲಾಗಿದೆ.

 

 

Edited By

Uppendra fans

Reported By

upendra fans

Comments