ಮನೆ ಮಂಜೂರಾತಿಗೆ ಯಾರಿಗೂ ಹಣ ನೀಡಬೇಡಿ: ಡಾ. ಜಿ ಪರಮೇಶ್ವರ್

09 Feb 2018 7:04 PM |
1279 Report

ಕೊರಟಗೆರೆ ಫೆ.:- ವಸತಿ ಯೋಜನೆಯಡಿಯಲ್ಲಿ ನೀಡುವ ಮನೆ ಮತ್ತು ಶೌಚಾಲಯ ನಿರ್ಮಾಣಕ್ಕೆ ಮರಳು ಪಡೆಯಲು ತಾಲೂಕು ಆಡಳಿತ ಮತ್ತು ಪೋಲೀಸ್ ಅನುವುಮಾಡಿಕೊಡುವಂತೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಎಂದು ಸೂಚಿಸಿದರು. ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ಇತ್ತೀಚೆಗೆ ನಡೆದ ವಿಶೇಷ ಗ್ರಾಮಸಭೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

ಮನೆ ಮಂಜೂರು ಮಾಡಿಸಿಕೊಡುವ ನೆಪದಲ್ಲಿ ಬಡಜನರಿಂದ ಹಣ ಪೀಕುವ ಯಾರೇ ಆಗಲಿ ಅವರ ವಿರುದ್ದ ಸೂಕ್ತ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಿ ಸಾಮಾನ್ಯ ವರ್ಗದ ಬಡಜನರನ್ನು ಗುರುತಿಸಿ ಮನೆಗಳನ್ನು ನಿರ್ಮಿಸಿಕೊಳ್ಳಲು ರಾಜ್ಯ ಸರ್ಕಾರದ ಕ್ಷೇತ್ರಕ್ಕೆ ವಿಶೇಷವಾಗಿ 4ಸಾವಿರ ಮನೆಗಳನ್ನು ಮಂಜೂರು ಮಾಡಿದೆ. ಅದರಂತೆ ಪ್ರತಿ ಗ್ರಾಪಂಗೆ 100ಮನೆಗಳನ್ನು ಮೀಸಲಿಡಲಾಗಿದ್ದು ಇದನ್ನು ಬಳಸಿಕೊಂಡು ಎಲ್ಲರೂ ಮನೆಗಳನ್ನು ನಿರ್ಮಾಮಾಣ ಮಾಡಿಕೊಳ್ಳುವಂತೆ ಹೇಳಿದರು.
ಶಾಸಕ ಪಿ.ಆರ್.ಸುಧಾಕರಲಾಲ್ ಮಾತನಾಡಿ ಗ್ರಾಮಗಳ ಸಮಗ್ರ ಅಭಿವೃದ್ದಿಗಾಗಿ ರಾಜ್ಯ ಮತ್ತು ಕೇಂದ್ರ ಸಕರ್ಾರ ಗ್ರಾಪಂಗಳಿಗೆ ಹೆಚ್ಚಿನ ಜವಾಬ್ದಾರಿಯನ್ನು ನೀಡಿದ್ದು ಗ್ರಾಪಂ ಪಿಡಿಓ ಮತ್ತು ಅಧಿಕಾರಿಗಳು ಅಧ್ಯಕ್ಷರು ಹಾಗೂ ಸದಸ್ಯರೊಂದಿಗೆ ಗ್ರಾಪಂ ವ್ಯಾಪ್ತಿಯ ಪ್ರತಿ ಗ್ರಾಮಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಅರ್ಹ ಫಲಾನುಭವಿಗಳಿಗೆ ಪಕ್ಷಾತೀತವಾಗಿ ಮಂಜೂರಾಗಿರುವ 100ಮನೆಯನ್ನು ತಲುಪಿಸಬೇಕು ಎಂದರು.
ಗ್ರಾಪಂ ವ್ಯಾಪ್ತಿಯಲ್ಲಿನ ವಿಶೇಷ ಚೇತನರು, ಆರ್ಥಿಕ ಸಂಕಷ್ಟದಲ್ಲಿರುವ ವಿಧವೆಯರು ಮತ್ತು ಅವಿಭಕ್ತ ಕುಟುಂಬದಲ್ಲಿ ವಾಸಿಸುವ ಬಡಜನರನ್ನು ಗುರುತಿಸುವ ಕೆಲಸ ಮಾಡಬೇಕು. ವಡ್ಡಗೆರೆ ಗ್ರಾಪಂಯಲ್ಲಿನ ಅಭಿವೃದ್ದಿ ಕೆಲಸಗಳು ತಾಲೂಕಿನ ಇತರೇ ಗ್ರಾಪಂಗೆ ಆದರ್ಶವಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರಿಗೆ ಬೇಡಿಕೆಗೆ ಅನುಗುಣವಾಗಿ ನೇರವಾಗಿ ಮನೆ ನೀಡಲು ಸರಕಾರ ಸೂಚಿಸಿದೆ ಬಡಜನರು ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಗ್ರಾಮಸಭೆಯಲ್ಲಿ ಜಿಪಂ ಸದಸ್ಯೆ ಪ್ರೇಮಾಮಹಾಲಿಂಗಪ್ಪ, ತಾಪಂ ಅಧ್ಯಕ್ಷ ಕೆಂಪರಾಮಯ್ಯ, ಉಪಾದ್ಯಕ್ಷೆ ನರಸಮ್ಮ, ಸದಸ್ಯೆ ಯಲ್ಲಮ್ಮ, ಕೆಂಪಣ್ಣ, ವಡ್ಡಗೆರೆ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಮುಖಂಡರಾದ ಮಹಾಲಿಂಗಪ್ಪ, ಬಲರಾಮಯ್ಯ, ಅಶ್ವತ್ಥನಾರಾಯಣ, ಮಯೂರಗೋವಿಂದರಾಜು, ರಾಮಚಂದ್ರಪ್ಪ, ಜಯರಾಂ, ಕವಿತಾನರಸಪ್ಪ, ಇಓ ಮೋಹನಕುಮಾರ್, ಪಿಡಿಓ ಹನುಮಂತರಾಜು, ಸೇರಿದಂತೆ ಇತರರಿದ್ದರು.

Edited By

Raghavendra D.M

Reported By

Raghavendra D.M

Comments