ಈ ಬಾರಿ ಸುಧಾಕರ್ ಲಾಲ್ ಗೆ ಕ್ಷೇತ್ರದಲ್ಲಿ ಅದೃಷ್ಟದ ಲಾಟರಿ ಸಿಗೋಲ್ಲ...!!

09 Feb 2018 6:55 PM |
469 Report

ಕೊರಟಗೆರೆ ಫೆ :- ಹಿಂದುಳಿದ ಶೋಷಿತ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು ಇದಕ್ಕೆ ಕಾಂಗ್ರೆಸ್ ಸಕರ್ಾರವೇ ಪೂರಕ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಿಳಿಸಿದರು. ಪಟ್ಟಣದ ಕಾಳಿದಾಸ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕುರುಬರ ಸಂಘ, ಕನಕ ಕುರಿ ಸಾಕಾಣಿಕೆ ಮತ್ತು ಉಣೆ ನೇಕಾರರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ , ತಾಲೂಕು ಕುರುನ ನೌಕರರ ಸಂಘ ಮತ್ತು ಕೊರಟಗೆರೆ ಕ್ಷೇತ್ರದ ಕುರುಬ ಜಾಗೃತಿ ವೇದಿಕೆ ನೇತೃತ್ವದಲ್ಲಿ ನಡೆದ ಸಮುದಾಯದ ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

 
ನಾನೂ ಸಿದ್ದರಾಮಯ್ಯ ಚೆನ್ನಾಗಿದ್ದೇವೆ ನಮ್ಮಿಬ್ಬರಲ್ಲಿ ಭಿನ್ನಾಭಿಪ್ರಾಯವಿಲ್ಲ: ಡಾ. ಜಿ ಪರಮೇಶ್ವರ್


ಹಿಂದುಳಿದ ವರ್ಗಗಳ ಅಭಿವೃಧ್ದಿ ಶ್ರಮಿಸುತ್ತಿದ್ದ ಸಿದ್ದರಾಮಯರನ್ನು ಜೆಡಿಎಸ್ ಪಕ್ಷ ಅವಮಾನಿಸಿತ್ತು ಅಹಿಂದಾ ಸಮಿತಿ ಒಗ್ಗೂಡಿಸಿ ಅವರ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷ ಸೇರಿ ಈ ಸಮುದಾಯಗಳ ಸಹಕಾರ ದಿಂದ 2013 ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಭ್ರಷ್ಟಾಚಾರವಿಲ್ಲದ ಬಡವರಿಗಾಗಿ ಶ್ರಮಿಸಿದ್ದಾರೆ ಎಂದು ಪ್ರಶಂಸಿಸಿದರು.
ಪ್ರಧಾನ ಮಂತ್ರಿ ಮೋದಿರವರು ಇತ್ತೀಚೆಗೆ ಸಮಾರಂಭದಲ್ಲಿ ರಾಜ್ಯ ಸಕರ್ಾರದ ವಿರುದ್ದ ಬರಿ ಸುಳ್ಳುಗಳನ್ನೇ ಹೇಳಿದ ಕೇವಲ ಅರ್ಧಗಂಟೆಗಳಲ್ಲಿ ಅವರ ಅರೋಪಗಳಿಗೆ ಉತ್ತರ ನೀಡಿದ್ದೇನೆ, ಪ್ರಧಾನಿಯಾದವರು ಸಾರ್ವಜನಿಕರಿಗೆ ಸುಳ್ಳು ಹೇಳುವುದು ಸರಿಯಲ್ಲ ಅವರು ಸರಿಯಾದ ಮಾಹಿತಿ ಪಡೆದು ಮಾತನಾಡಬೇಕು, ತಮ್ಮ ಹದ್ದೆಗೆ ತಕ್ಕಂತೆ ಗೌರವವಾಗಿ ಮಾತನಾಡಬೇಕು, ಇಲ್ಲದಿದ್ದರೆ ಪ್ರಧಾನಿಯವರ ಮಾತಿಗೆ ಅರ್ಥ ಬರುವುದಿಲ್ಲ ರಾಜ್ಯದ ಜನತೆಗೆ ತಿಳಿದಿದೆ ಅವರು ಸುಳ್ಳುಗಳ ಆರೋಪವನ್ನು ನಂಬುವುದಿಲ್ಲ ರಾಜ್ಯದಲ್ಲಿ ಬಡವರ ಶೋಷಿತ ಸಮುದಾಯಗಳ ಅಭಿವೃದ್ದಿಯ ಯುಗ ಪ್ರಾರಂಭವಾಗಿದೆ, ಸಮುದಾಯದವರು ಎಲ್ಲಾ ಒಗ್ಗಟ್ಟಿನಿಂದ ಬೆಂಬಲ ನೀಡಬೇಕು ಒಗ್ಗಟ್ಟಿನಲ್ಲಿ ಬಲವಿದೆ ಎಂದು ಉಚ್ಚರಿಸಿದರು.


ಕನಕನ ಮೇಲಾಣೆ ನಾವಿಬ್ಬರಲ್ಲಿ ಒಡಕಿಲ್ಲ:-

ರಾಜ್ಯದಲ್ಲಿ ನಮ್ಮ ವಿರೋಧಿಗಳು ನನ್ನ ಮೇಲೆ ಇಲ್ಲ-ಸಲ್ಲದ ಅರೋಪ ಮಾಡುತ್ತಿದ್ದಾರೆ ಇದಕ್ಕೆ ಕಿವಿಗೊಡುವ ಅವಶ್ಯಕತೆಯಿಲ್ಲ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷ ಅಡಿಕಾರಕ್ಕೆ ತರಲು ನಾನು ಮತ್ತು ಸಿದ್ದರಾಮಯ್ಯ ಶ್ರಮಿಸುತ್ತಿದ್ದೇವೆ ಕನಕನ ಮೇಲಾಣೆ ನಮ್ಮಿಬ್ಬರ ನಡುವೆ ಯಾವುದೇ ಭಿನ್ನಾ ಭಿಪ್ರಾಯವಿಲ್ಲ ಹಿಂದೆ ಇಬ್ಬರೂ ಕಾಲು ನಡಿಗೆಯಲ್ಲಿ ಪ್ರಾವಾಸ ಮಾಡಿ ಪಕ್ಷದ ಸಂಘಟನೆ ಮಾಡುತ್ತೇವೆ ಎಂದರು.

ಸುಧಾಕರ್ ಲಾಲ್ ಗೆ ಈ ಬಾರಿ ಅದೃಷ್ಟದ ಲಾಟರಿ ಇಲ್ಲ:-

ಕಳೆದ ಬಾರಿ ಚುನಾವಣೆಯಲ್ಲಿ ರಾಜ್ಯದ ಪ್ರವಾಸ ಕೈಗೊಂಡು ಕ್ಷೇತ್ರದಲ್ಲಿ ಹೆಚ್ಚು ಪ್ರಚಾರ ಮಾಡಲಾಗಲಿಲ್ಲ ಆದ್ದರಿಂದಲೇ ಇದಲ್ಲದೇ ಕೆಲ ವ್ಯಕ್ತಿಗಳ ಕುತಂತ್ರದಿಂದ ಜೆಡಿಎಸ್ ಪಕ್ಷದ ಅಭ್ಯಥರ್ಿ ಸುಧಾಕರಲಾಲ್ಗೆ ಅದೃಷ್ಟದ ಲಾಟರಿ ಹೊಡದಿದ್ದು ಈ ಬಾರಿ ಆಗಾಗಲು ಬಿಡುವುದಿಲ್ಲ ಚುನಾವಣೆಯಲ್ಲಿ ನನ್ನ ವಿಜಯ ಖಾತ್ರಿ ಎಂದರು.
ಕಾರ್ಯಕ್ರಮದಲ್ಲಿ ಕೊರಟಗೆರೆ ಕ್ಷೇತ್ರದ ಈಚನೂರು ಗ್ರಾಮದ ಪ್ರೀಯಾಂಕ ಐಎಎಸ್ ಪರೀಕ್ಷೇಯಲ್ಲಿ 84 ನೇ ರ್ಯಾಂಕ್ ಪಡೆದು ಕ್ಷೇತ್ರಕ್ಕೆ ಕೀತರ್ಿ ತಂದ ಹಿನ್ನೆಲೆಯಲ್ಲಿ ಪ್ರಿಯಾಂಕ ರವರನ್ನು ಗೌರವಿಸಿ ತಮ್ಮ ಸೇವಾವದಿಯಲ್ಲಿ ಬಡ ಜನತೆಗೆ ಕಾನೂನಿನ ಅಡಿಯಲ್ಲಿ ಉತ್ತಮ ಸೇವೆ ನೀಡುವಂತೆ ಸೂಚಿಸಿದರು.
ಕೊರಟಗೆರೆಯಲ್ಲಿ ಕುರುಬ ಸಮುದಾಯದ ವಿದ್ಯಾಥರ್ಿನಿಯ ನಿಮರ್ಾಣಕ್ಕೆ 2 ಎಕರೆ ಜಮೀನು ಮೂಂಜೂರು ಮಾಡಿದ್ದು, ಈಗ ಸುಸಜರ್ಿತ ವಿದ್ಯಾಥರ್ಿನಿಲಯ ನಿಮರ್ಾಣಕ್ಕೆ 50 ಲಕ್ಷ ರೂ ಮತ್ತು ಅಕ್ಕಿರಾಂಪುರ ಬಳಿಯಿರುವ ಮೈಲಾರಲಿಂಗೇಶ್ವರ ಸ್ವಾಮಿ ದೇವಾಲಯದ ಅಭಿವೃದ್ದಿಗಾಗಿ 15 ಲಕ್ಷ ರೂಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದರು.
ಕಾರ್ಯಕ್ರದ ಅದ್ಯಕ್ಷತೆಯನ್ನು ಜಿಲ್ಲಾ ಕಾಳಿದಾಸ ವಿದ್ಯಾವರ್ಧಕ ಸಂಘದ ಜಂಟಿ ಕಾರ್ಯದಶರ್ಿ ಜಿ.ಡಿ.ನಾಗಭೂಷಣ್ ವಹಿಸಿದ್ದು, ಸಭೆಯಲ್ಲಿ ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮ ಯ್ಯ, ಸಂಘದ ಪದಾಧಿಕಾರಿಗಳಾದ ಕೆಂಪರಾಜು, ಲಕ್ಷ್ಮೀಕಾಂತ್, ರಂಗಶ್ಯಾಮಯ್ಯ, ಡಾ.ನಾಗಭೂಷಣ್, ನಿವೃತ್ತ ಶಿಕ್ಷಕರಾದ ಹುನಮಂತರಾಯಪ್ಪ, ಕೆ.ಎಂ.ನಾಗಪ್ಪ, ಚಿಕ್ಕನಾಗಪ್ಪ, ದೊಡ್ಡನಾಗಪ್ಪ, ರಂಗರಾಜು, ರಂಗಧಾಮಯ್ಯ, ವೀರಮಲ್ಲಪ್ಪ, ಬಸವರಾಜು, ಹಳ್ಳಪ್ಪ, ಕೆಂಗಣ್ಣ, ಮಲಿಯಪ್ಪ, ಪುಟ್ಟಲಿಂಗಪ್ಪ, ಡಿ.ಎ.ರಂಗಶ್ಯಾಮಯ್ಯ, ಟಿ.ಆರ್, ರಂಗನಾಥ್ ಸೇರಿದಂತೆ ಇನ್ನಿತರರು  ಇದ್ದರು.  

Edited By

Raghavendra D.M

Reported By

Raghavendra D.M

Comments