ಉಪ್ಪಿ ಪಕ್ಷದ ಟಿಕೆಟ್ ಬೇಕಾದ್ರೆ ಒನ್ ಫೋನ್ ಕಾಲ್ ಮಾಡಿ...!

09 Feb 2018 12:33 PM |
1585 Report

ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಟಿಕೆಟ್ ಪಡೆಯುವುದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಾರೆ, ಅಲ್ಲದೆ ಟಿಕೆಟ್ ವಿಷಯವಾಗಿ ಪಕ್ಷದಲ್ಲಿ ಕೋಲಾಹಲಗಳು ಕೂಡ ಸಂಭವಿಸುತ್ತವೆ. ಈ ಜಂಜಾಟಗಳಿಲ್ಲದ ರಾಜಕೀಯ ಪಕ್ಷಗಳೇ ಇಲ್ಲವೆಂದು ಹೇಳಬಹುದು. ಆದರೆ ಇದಾವುದೇ ಜಂಜಾಟಗಳಿಲ್ಲದಂತೆ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ)ಒಂದು ಸುವರ್ಣಾವಕಾಶ ಕಲ್ಪಿಸಿ ಕೊಟ್ಟಿದೆ.

ಏನಪ್ಪಾ ಅದು ಅಂತೀರಾ ಕೆಪಿಜೆಪಿದ ಸಂಸ್ಥಾಪಕರಾದ ಉಪೇಂದ್ರ ತಮ್ಮ ಪಕ್ಷದ ಅಭ್ಯರ್ಥಿಯನ್ನು ವಿಭಿನ್ನ ಶೈಲಿಯಲ್ಲಿ ಆಯ್ಕೆ ಮಾಡುತ್ತಿದ್ದಾರೆ.ಪಕ್ಷದ ಸದಸ್ಯರಾಗಬೇಕಿಲ್ಲ, ನೇರವಾಗಿ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಿ!’ ಚುನಾವಣೆ ಟಿಕೆಟ್‌ಗಾಗಿ ವಿವಿಧ ಪಕ್ಷಗಳಲ್ಲಿ ಮೇಲಾಟ ನಡೆಯುತ್ತಿರುವ ಈ ದಿನಗಳಲ್ಲಿ ಹೀಗೊಂದು ಅಚ್ಚರಿಯ ಆಹ್ವಾನವನ್ನು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ನೀಡಿದೆ. ಅದಕ್ಕಾಗಿ ಅಂಚೆ, ಇ-ಮೇಲ್, ದೂರವಾಣಿ ಕರೆ ಅಥವಾ ನೇರವಾಗಿ ಅರ್ಜಿಯನ್ನೂ ಆಹ್ವಾನಿಸಿದೆ! ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಸಾರ್ವಜನಿಕ ಸಂಪರ್ಕಾಧಿಕಾರಿ ತುಟ್ಟೀಕೆರೆ ಮಲ್ಲೇಶ್, ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಪಕ್ಷದ ವತಿಯಿಂದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ದಕ್ಷಿಣ ಕನ್ನಡದ ಎಲ್ಲ ಕ್ಷೇತ್ರಗಳಲ್ಲೂ ಕಣಕ್ಕಿಳಿಯಲಿದ್ದಾರೆ. ಅಭ್ಯರ್ಥಿ ಸ್ಥಾನಕ್ಕೆ ನಿಲ್ಲಲು ಈಗಾಗಲೇ ಸಾವಿರಾರು ಅರ್ಜಿಗಳು ಬಂದಿವೆ. ಇನ್ನೂ ಅರ್ಜಿ ಸಲ್ಲಿಸಲು ಬಯಸು ವವರು ದೂ.ಸಂಖ್ಯೆ 9845 114705 ಅಥವಾ 9986603226 ಸಂಪರ್ಕಿಸಬಹುದು ಎಂದರು. ಎಲ್ಲ ಅರ್ಜಿಗಳನ್ನು ಕ್ರೋಢೀಕರಿಸಿ ಮುಂದಿನ 2,3 ವಾರದೊಳಗೆ ಪರಿಶೀಲಿಸಿ ಫೆಬ್ರವರಿ 3 ಅಥವಾ 4ನೇ ವಾರದೊಳಗೆ ಎಲ್ಲ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

 

Edited By

Uppendra fans

Reported By

upendra fans

Comments