ಪ್ರಧಾನಿ ಮೋದಿ ಬರುವಿಕೆ ಬಗ್ಗೆ ಎಚ್ ಡಿಕೆ ಏನೆಂದು ಟ್ವೀಟ್‌ ಮಾಡಿದ್ದಾರೆ ಗೊತ್ತಾ?

04 Feb 2018 3:25 PM |
745 Report

ಇಂದು ನಗರದಲ್ಲಿ ನಡೆಯುವ ರಾಜ್ಯ ಬಿಜೆಪಿಯ 'ನವ ಕರ್ನಾಟಕ ನಿರ್ಮಾಣ ಪರಿವರ್ತನಾ ಯಾತ್ರೆ'ಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬರುತ್ತಿದ್ದಾರೆ. ಪ್ರಧಾನಿಗಳ ರಾಜ್ಯ ಭೇಟಿಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸ್ವಾಗತಿಸಿದ್ದಾರೆ.

ದೇಶದ ಪ್ರಧಾನ ಮಂತ್ರಿಗಳಿಗೆ ಕರ್ನಾಟಕಕ್ಕೆ ಎಚ್.ಡಿ ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. ನೀವು ಗುಜರಾತಿನ ಮಗನಾದರೂ ಈ ದೇಶಕ್ಕೆ ಪ್ರಧಾನಿಗಳು. ಈ ಬಾರಿಯಾದರೂ ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾದ ಮಹದಾಯಿ ನದಿ ವಿಚಾರವಾಗಿ ಮಧ್ಯಪ್ರವೇಶಿಸಿ ಕರ್ನಾಟಕದ  ಹೋರಾಟಗಾರರಿಗೆ ಸಿಹಿ ಸುದ್ದಿಯನ್ನುನೀಡುತ್ತೀರೆಂದು ಭಾವಿಸುತ್ತೇನೆ' ಎಂದು ಎಚ್ ಡಿಕೆ ಟ್ವೀಟ್‌ ಮಾಡಿದ್ದಾರೆ. 

Edited By

Shruthi G

Reported By

hdk fans

Comments