ಆತ್ಮವಿಶ್ವಾಸಕ್ಕೆ ಎದುರಾಗುವವರು ಯಾರೂ ಇಲ್ಲ

03 Feb 2018 6:26 PM |
1073 Report

ಕೊರಟಗೆರೆ ಫೆ:-ಸಾಧನೆ ಮಾಡಲು ಹೊರಟವನಿಗೆ ಛಲ ಮತ್ತು ಆತ್ಮವಿಶ್ವಾಸ ಗುರಿಮುಟ್ಟಲು ಸಹಕಾರಿ ಎಂದು ನಡೆದಾಡುವ ಕಂಪ್ಯೂಟರ್ ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಬಸವರಾಜ ಶಂಕರ್ ಉಮರಾಣಿ ತಿಳಿಸಿದರು. ತಾಲೂಕಿನ ಸುಕ್ಷೇತ್ರ ಸಿದ್ಧರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದಲ್ಲಿ 133 ನೇ ಬೆಳದಿಂಗಳ ಕೂಟದ ಅಂಗವಾಗಿ ನೆಡೆದ ಧರ್ಮ ಹಾಗೂ ಜನಜಾಗೃತಿ ಸಮಾರಂಭ ಕಾರ್ಯಕ್ರಮದಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸದ ಮಾರ್ಗಸೂಚಿಗಳ ವಿಚಾರವಾಗಿ ಮಾತನಾಡಿದರು.

ಅರಿವಿನ ಕೊರತೆ ಮತ್ತು ಸೂಕ್ತ ಮಾರ್ಗದರ್ಶನದ ಕೊರತೆಯಿಂದ ಮಕ್ಕಳ ಮನಸ್ಸು ಚಂಚಲಗೊಳ್ಳುತ್ತಿದೆ ಮಕ್ಕಳಿಗೆ ಧ್ಯಾನ ಮತ್ತು ಯೋಗಗಳನ್ನು ಮಾಡಿಸುವ ಮೂಲಕ ಮಕ್ಕಳಲ್ಲಿ ಏಕಾಗ್ರತೆ ಮೂಡಲು ಪ್ರಯತ್ನಿಸಬೇಕು ಎಂದರು. ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ವೀರಭದ್ರ ಶಿವಾಚಾರ್ಯಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ಮಕ್ಕಳನ್ನು ಪೋಷಕರು ದೇಶಕ್ಕೆ ಆಸ್ತಿ ಎನ್ನುವಂತೆ ಬೆಳೆಸಬೇಕು ಅವರಿಂದ ಏನೆಲ್ಲ ದೇಶಕ್ಕೆ ಕೊಡಗೆಳನ್ನು ನೀಡಬೇಕು ಎನ್ನುವ ಕಲ್ಪನೆಯೊಂದಿಗೆ ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಪೂರಕ ವಾತಾವರಣವನ್ನು ಕಲ್ಪಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಅಧಿಕಾರಿ ಟಿ.ಎಸ್.ಸಿದ್ಧಗಂಗಾ ರವರನ್ನು ಶ್ರೀಮಠದಿಂದ ಅಭಿನಂಧಿಸಿ ಸನ್ಮಾನಿಸಲಾಯಿತು.
ತಿಪ್ಪೇರುದ್ರಾರಾಧ್ಯರಿಂದ ರಚಿತವಾದ ಧಮರ್ೋ ರಕ್ಷತಿ ರಕ್ಷಿತಃ ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಸ್ವಾಮೀಜಿ, ಮಲೆ ಮಲ್ಲೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಾನಂದಪ್ಪ, ನಟರಾಜು, ಬಸವರಾಜು, ರುದ್ರೇಶ್, ರುಕ್ಮಿಣಮ್ಮ, ಗೌ.ರಾ.ರಾಮಮೂತರ್ಿ, ಸಿದ್ಧಗಿರಿ ನಂಜುಂಡಸ್ವಾಮಿ ಸೇರಿದಂತೆ ಇತರರು ಇದ್ದರು.
(ಚಿತ್ರ ಇದೆ)
ಕೊರಟಗೆರೆ ಚಿತ್ರ.1:- ಕೊರಟಗೆರೆ ತಾಲೂಕಿನ ಸಿದ್ದರಬೆಟ್ಟ ರಂಭಾಪುರಿ ಖಾಸಾ ಶಾಖಾ ಮಠದಲ್ಲಿ ಏರ್ಪಡಿಸಿದ್ದ ಬೆಳದಿಂಗಳ ಕೂಟದ ಅಂಗವಾಗಿ ನೆಡೆದ ಧರ್ಮ ಹಾಗೂ ಜನ ಜಾಗೃತಿ ಸಮಾರಂಭದಲ್ಲಿ ಶ್ರೀ ವೀರಭದ್ರ ಶಿವಾಚಾರ್ಯಸ್ವಾಮಿ, ಬಸವರಾಜ ಶಂಕರ್ ಉಮರಾಣಿ, ಟಿ.ಎಸ್.ಸಿದ್ಧಗಂಗಾ ಸೇರಿದಂತೆ ಇತರರು.

Edited By

civic news

Reported By

Raghavendra D.M

Comments