ಯುವರಕು ರಾಜಕೀಯಕ್ಕೆ ಬರಬೇಕು: ಬಿಂದುಶೇಖ ಒಡೆಯರ್ ಸ್ವಾಮೀಜಿ

31 Jan 2018 8:55 AM |
1055 Report

ಕೊರಟಗೆರೆ ಜ. :- ಆರ್ಥಿಕವಾಗಿ ಸಮುದಾಯ ಸದೃಡವಾಗಿಗಬೇಕು,  ಯುವಕರು ರಾಜಕೀಯ ಪ್ರವೇಶ ಮಾಡಬೇಡಿ ಎಂದು ತುಮಕೂರಿನ ಶ್ರೀರೇವಣಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಬಿಂದುಶೇಖರ್ಒಡೆಯರ್ ಕರೆ ನೀಡಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಹಾಗೂ ಕಾಳಿದಾಸ ಕುರುಬರ ಸಂಘದವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೆ ಮಾಡಿ ಮಾತನಾಡಿದರು.

 ಕೊರಟಗೆರೆ ಜ. :- ಆರ್ಥಿಕವಾಗಿ ಸಮುದಾಯ ಸದೃಡವಾಗಿಗಬೇಕು,  ಯುವಕರು ರಾಜಕೀಯ ಪ್ರವೇಶ ಮಾಡಬೇಡಿ ಎಂದು ತುಮಕೂರಿನ ಶ್ರೀರೇವಣಸಿದ್ದೇಶ್ವರ ಮಠದ ಪೀಠಾಧ್ಯಕ್ಷರಾದ ಬಿಂದುಶೇಖರ್ಒಡೆಯರ್ ಕರೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ಹಾಗೂ ಕಾಳಿದಾಸ ಕುರುಬರ ಸಂಘದವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೆ ಮಾಡಿ ಮಾತನಾಡಿದರು.
ಸಮುದಾಯದ ಯುವಸಮೂಹ ಸಾಮಾಜಿಕ, ಶೈಕ್ಷಣಿಕ, ಆಥರ್ಿಕವಾಗಿ ಮುಂದುವರೆದು ತದನಂತರ ರಾಜಕೀಯವಾಗಿ ಬೆಳೆಯಬೇಕು. ಸಮುದಾಯದಲ್ಲಿ ಪ್ರತಿಯೊಬ್ಬರು ಸಹ ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತುನೀಡಿ ಸಮಾಜದ ಮುಖ್ಯಭೂಮಿಕೆಗೆ ತರುವಂತ್ತಾಗಬೇಕು. ಎಲ್ಲಾರೂ ಒಂದೇ ಎಂಬ ಮನೋಭವನದಿಂದ ಜೀವನವನ್ನು ನಡೆಸುವಂತಹ ಪರಿಕಲ್ಪನೆಯ ಹಾದಿಯಲ್ಲಿ ಸಾಗಬೇಕು ಎಂದರು.
ಸಂಘಟನೆಗಳು ಯಾವ ರೀತಿಯಾಗಿ ಕೆಲಸಮಾಡಬೇಕೆಂದರೆ ಸಮುದಾಯಗಳಿಗೆ ಉಪಯೋಗವಾಗುವ ರೀತಿಯಲ್ಲಿ ಕೆಲಸಮಾಡಬೇಕು. ಸಮುದಾಯದ ಪರವಾಗಿ ಹೋರಾಟ ಮಾಡುವ ಉದ್ದೇಶದಿಂದ ಸಂಘಟನೆಗಳು ಹುಟ್ಟಿಕೊಳ್ಳಬೇಕು. ಪ್ರತಿಫಲದ ಆಕ್ಷೇಪಣೆಯಿಲ್ಲದೇ ಪ್ರಾಮಾಣಿಕವಾಗಿ ಸೇವೆ ಮಾಡುವಂತಹ ಮನೋಭವವನ್ನು ಬೆಳಸಿಕೊಂಡು ಸಂಘದ ಪ್ರತಿಯೊಬ್ಬ ಪದಾಧಿಕಾರಿಯೂ ನಿಷ್ಠೆಯಿಂದ ಕೆಲಸ ಮಾಡಬೇಕು ಎಂದು ಹೇಳಿದರು.
ಕನರ್ಾಟಕ ಪ್ರದೇಶ ಯುವ ಕುರುಬ ಸಂಘದ ಜಿಲ್ಲಾಧ್ಯಕ್ಷ ಮಹಾಲಿಂಗಯ್ಯ ಮಾತನಾಡಿ ಸಂಘದಲ್ಲಿ ಪ್ರತಿಯೊಬ್ಬರಿಗೂ ಕೂಡ ಅವಕಾಶ ವಿರುತ್ತದೆ. ಅದನ್ನ ನೀವು ಸಮರ್ಪಕವಾಗಿ ಬಳಸಿಕೊಂಡು ಸಮಾಜಕ್ಕೋಸ್ಕರ ಶ್ರಮವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಗುರುಸಿದ್ದಪ್ಪ, ಅಧ್ಯಕ್ಷ ಗಂಗರಂಗಯ್ಯ, ಜಿಲ್ಲಾನಿದರ್ೇಶಕ ಅಶ್ವತ್ಥಯ್ಯ, ಪ್ರಧಾನ ಕಾರ್ಯದರ್ಶಿ ರಂಗರಾಜು, ಖಜಾಂಚಿ ವೇಣುಗೋಪಾಲ್, ಕಾರ್ಯದಶರ್ಿ ಆನಂದ್, ಕುಮಾರಸ್ವಾಮಿ, ಮುಖಂಡರಾದ ಕೆಂಪೇಗೌಡ, ಗೊಡ್ರಹಳ್ಳಿ ವೆಂಕಟೇಶ್, ಶಿಕ್ಷಕ ರಾಜಣ್ಣ, ತೊಗರಿಘಟ್ಟ ಶಂಕರ್, ಬಿ.ಎಂ ಶ್ರೀನಿವಾಸ್, ರಘುನಂದನ್, ನಾಗರಾಜು, ವೀರಭದ್ರಯ್ಯ, ಶ್ರೀನಿವಾಸ್, ಹಳ್ಳಪ್ಪ, ಸಂಘದ ಪದಾಧಿಕಾರಿಗಳು ಸೇರಿದಂತೆ ಕುರುಬ ಸಮುದಾಯದ ಮುಖಂಡರುಗಳು ಭಾಗವಹಿಸಿದರು.
(ಚಿತ್ರ ಇದೆ)

Edited By

Raghavendra D.M

Reported By

Raghavendra D.M

Comments