2022ರ ವೇಳೆಗೆ ಕೇಂದ್ರ ಸರಕಾರದಿಂದ ರೈತ ಸ್ವಾವಲಂಬಿ ದೇಶ ಮಾಡುವ ಭರವಸೆ: ವೈ.ಹೆಚ್.ಹುಚ್ಚಯ್ಯ

31 Jan 2018 8:45 AM |
445 Report

ಕೊರಟಗೆರೆ ಜ. :- 2022 ವೇಳೆಗೆ ದೇಶದಲ್ಲಿ ರೈತ ಸ್ವಾವಲಂಭಿಯಾಗುತ್ತಾನೆ ದೇಶದ ಪ್ರಧಾನಿಮಂತ್ರಿ ನರೇಂದ್ರಮೋದಿ ಸಂಕಲ್ಪ ಈಡೇರುತ್ತದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು. ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ರಾತ್ರಿ ಏರ್ಪಡಿಸಿದ್ದ ಗ್ರಾಮ ವಾಸ್ಥವ್ಯದಲ್ಲಿ ಭಾಗವಹಿಸಿ ಮಾತನಾಡಿದರು.

ಬಿಜೆಪಿ ಪಕ್ಷದ ವತಿಯಿಂದ ಸಂಕೇನಹಳ್ಳಿ ಗ್ರಾಮದಲ್ಲಿ ಗ್ರಾಮ ವಾಸ್ಥವ್ಯ
2022ರ ವೇಳೆಗೆ ಕೇಂದ್ರ ಸರಕಾರದಿಂದ ರೈತ ಸ್ವಾವಲಂಬಿ ದೇಶ ಮಾಡುವ ಭರವಸೆ: ವೈ.ಹೆಚ್.ಹುಚ್ಚಯ್ಯ

ಕೊರಟಗೆರೆ ಜ.29:- 2022 ವೇಳೆಗೆ ದೇಶದಲ್ಲಿ ರೈತ ಸ್ವಾವಲಂಭಿಯಾಗುತ್ತಾನೆ ದೇಶದ ಪ್ರಧಾನಿಮಂತ್ರಿ ನರೇಂದ್ರಮೋದಿ ಸಂಕಲ್ಪ ಈಡೇರುತ್ತದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ಹೇಳಿದರು.

ತಾಲೂಕಿನ ಕೋಳಾಲ ಹೋಬಳಿ ವ್ಯಾಪ್ತಿಯ ಸಂಕೇನಹಳ್ಳಿ ಗ್ರಾಮದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಭಾನುವಾರ ರಾತ್ರಿ ಏರ್ಪಡಿಸಿದ್ದ ಗ್ರಾಮ ವಾಸ್ಥವ್ಯದಲ್ಲಿ ಭಾಗವಹಿಸಿ ಮಾತನಾಡಿದರು.

ರಾಷ್ಟ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕರ್ಾರ ರೈತರ ಪರವಾಗಿ ಹಲವು ಯೋಜನೆ ರೂಪಿಸಿದೆ ಆದರೆ ರಾಜ್ಯದ ಕಾಂಗ್ರೇಸ್ ನೇತೃತ್ವದ ರಾಜ್ಯ ಸರಕಾರ ಇವನ್ನು ಕಾರ್ಯರೂಪಕ್ಕೆ ತರುವಲ್ಲಿ ಎಡವಿದ್ದಾರೆ. ಮೋಧಿಯನ್ನು ಇಡೀ ವಿಶ್ವವೇ ಅಭಿವೃದ್ಧಿಯ ಹರಿಕಾರ ಎನ್ನುತ್ತಿದ್ದಾರೆ ಪ್ರತೀ ರಾಜ್ಯದಲ್ಲೂ ಬಿಜೆಪಿ ಅಧಿಕಾರ ಇಡಿಯುತ್ತಿರುವಂತೆ ರಾಜ್ಯದಲ್ಲಿಯೂ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ಎಲ್ಲರೂ ಕೈಜೋಡಿಸಬೇಕು ಎಂದರು.

ಕೋಳಾಲ ವ್ಯಾಪ್ತಿಯ ಬೈರಗೊಂಡ್ಲು ಸಮೀಪ ಎತ್ತಿನಹೊಳೆ ಬಫರ್ ಡ್ಯಾಂ ನಿಮರ್ಾಣಕ್ಕಾಗಿ ಸುಮಾರು 16 ಗ್ರಾಮದ ನೂರಾರು ರೈತರು ಸಾವಿರಾರು ಎಕರೇ ಜಮೀನು ಕಳೆದುಕೊಳ್ಳುತ್ತಿದ್ದಾರೆ ರೈತರ ಜಮೀನಿಗೆ ಬೆಲೆ ನಿಗಧಿ ಮಾಡುವ ಸಂದರ್ಭದಲ್ಲಿ ರಾಜ್ಯ ಸಕರ್ಾರ ತಾರತಮ್ಯ ಮಾಡಿದ್ದು ದೊಡ್ಡಬಳ್ಳಾಪುರ ತಾಲೂಕಿನ ರೈತರ ಜಮೀನಿಗೆ ನೀಡುವ ಬೆಲೆಯನ್ನು ಕೊರಟಗೆರೆಯ ರೈತರ ಜಮೀನಿಗೆ ನೀಡದೇ ಕಡಿಮೆ ಬೆಲೆ ನಿಗದಿ ಮಾಡಿದ್ದು ರೈತರಿಗೆ ಸೂಕ್ತ ಬೆಲೆಯನ್ನು ನಿಗದಿ ಮಾಡಬೇಕು ಇಲ್ಲವಾದಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ನನಗೆ ಪ್ರಚಾರ ಅವಶ್ಯಕತೆಯಿಲ್ಲ:-

ಕ್ಷೇತ್ರದಲ್ಲಿ ನಾನು ರಾಜಕೀಯ ಪ್ರಚಾರಕ್ಕಾಗಿ ಗ್ರಾಮ ವಾಸ್ಥವ್ಯ ಮಾಡುತ್ತೀಲ್ಲ. ಮೀಸಲು ಕ್ಷೇತ್ರವಾಗಿ 10ವರ್ಷವಾದರೂ ಗ್ರಾಮೀಣ ಪ್ರದೇಶ ಅಭಿವೃದ್ದಿ ಆಗಿಲ್ಲ. 10ವರ್ಷದ ಹಿಂದೆ ಮನೆಗೆ ಹೋದ ನಾಯಕರು ಮತ್ತೇ ಕ್ಷೇತ್ರದಲ್ಲಿ ಮತಕ್ಕಾಗಿ ಬರುತ್ತೀದ್ದಾರೆ. ನಾನು ಚುನಾವಣೆ ಮುಗಿದ ನಂತರವೂ ಸಹ ನಾನು ಕ್ಷೇತ್ರಕ್ಕೆ ಬರುತ್ತೇನೆ. ನಿಮ್ಮ ಮನೆಯ ಮಗನಾಗಿ ನಿಮ್ಮೆಲ್ಲರ ಕೆಲಸ ಮಾಡುತ್ತೇನೆ. ಕೊರಟಗೆರೆಯಲ್ಲಿ ಬಿಜೆಪಿ ಪಕ್ಷಕ್ಕೆ ಆಶರ್ಿವಾದ ಮಾಡಿ ಅಧಿಕಾರಿಗಳನ್ನು ನಿಮ್ಮ ಮನೆ ಬಾಗಿಲಿಗೆ ಕರೆಯಿಸಿ ಅಭಿವೃದ್ದಿ ಮಾಡಿ ತೋರಿಸುತ್ತೇನೆ ಭಾವುಕರಾಗಿ ನುಡಿದರು.
ಆರೋಪ:-ಸಂಕೇನಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ಗ್ರಾಮಕ್ಕೆ ಬರಲು ಸೂಕ್ತ ರಸ್ತೆ ನಿಮರ್ಾಣವಾಗಿಲ್ಲ. ಗ್ಯಾಸ್ ವಿತರಣೆ ಮಾಡುವ ಸಂದರ್ಭದಲ್ಲಿ ರೈತರಿಂದ ಹಣ ಪಡೆದು ನೀಡುತ್ತೀದ್ದಾರೆ. ಪ್ರಧಾನ ಮಂತ್ರಿಯವರ ಯೋಜನೆ ಗ್ರಾಮೀಣ ಪ್ರದೇಶದ ರೈತರಿಗೆ ತಲುಪುತ್ತೀಲ್ಲ. ಶೌಚಾಲಯ ನಿಮರ್ಾಣ ಮಾಡಲು ಒಂದು ಇಡಿ ಮರಳು ಪಡೆಯಲು ಸಾಧ್ಯವಾಗುತ್ತೀಲ್ಲ ಎಂದು ಸಂಕೇನಹಳ್ಳಿ ಗ್ರಾಮದ ಮಹಿಳೆಯರು ಆರೋಪಿಸಿದ್ದಾರೆ.
ಗ್ರಾಮ ವಾಸ್ಥವ್ಯದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದಶರ್ಿ ರುದ್ರೇಶ್, ಮೋಹನ್, ತಾಲೂಕು ಯುವಧ್ಯಕ್ಷ ಗುರುದತ್, ಬಿಜೆಪಿ ಮುಖಂಡರಾದ ಉಮೇಶ್ಚಂದ್ರ, ವೇಣುಗೋಪಾಲ್, ಜಯರಾಂ, ರಾಮನುಂಜನಯ್ಯ, ಪುಟ್ಟಶಾಮಯ್ಯ, ಜಗದೀಶ್, ದೇವರಾಜು, ಮೆಡಿಕಲ್ಕುಮಾರ್, ಮಲ್ಲಿಕಾಜರ್ುನ್, ಆಟೋಗೋಪಿ, ಗುರುಸಿದ್ದಯ್ಯ, ಮಹೇಶ್, ನಂಜುಂಡಯ್ಯ, ಚಂದು, ಮಾರುತಿ, ಗಂಗಣ್ಣ ಸೇರಿದಂತೆ ನೂರಾರು ಗ್ರಾಮಸ್ಥರು ಇದ್ದರು.
(ಚಿತ್ರ ಇದೆ) 

Edited By

Raghavendra D.M

Reported By

Raghavendra D.M

Comments