ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿದ್ದಾರೆ..... ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.....

31 Jan 2018 8:41 AM |
467 Report

ಕೊರಟಗೆರೆ ಜ.6:- ನಮ್ಮ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ ಬಿಜೆಪಿ ಅವರ ಭೇಟಿಗೆ ತಡೆಯೊಡ್ಡಲು ಸಾಧ್ಯವಿಲ್ಲ ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಗುಡುಗಿದರು.        ಕೊರಟಗೆರೆ ತಾಲ್ಲೂಕಿನ ಕೋಲಾಲ ಹೋಬಳಿಯ ಎಂ. ಬೇವನಹಳ್ಳಿ  ಗ್ರಾಮದ ನರಸಿಂಹಯ್ಯ ಎಂಬುವವರ  ಮನೆಯಲ್ಲಿ ಗ್ರಾಮ ವಾಸ್ತವ್ಯ ಹೂಡಿ  ಸುದ್ದಿಗಾರರೊಂದಿಗೆ ಮಾತನಾಡಿದರು.         ಬಿಜೆಪಿಯವರು ಯಾವುದೇ ರೀತಿಯ ತಡೆಯೊಡ್ಡಲು ಸಾಧ್ಯವಿಲ್ಲ  ಇಷ್ಟಾಗಿಯೂ ಪ್ರಯತ್ನಿಸಿದರೆ ಕಾನೂನು ಇದೆ ಅದಕ್ಕೆ ಎಲ್ಲರೂ ತಲೆಬಾಗಲೇ ಬೇಕು. ಚುನಾವಣೆಯಲ್ಲಿ ರಾಜ್ಯಕ್ಕೆ ರಾಹುಲ್ 4 ಬಾರಿ ಬಂದು ಪ್ರಚಾರ ಮಾಡಲಿದ್ದಾರೆ ಎಂದರು.

 

ರಾಹುಲ್ ಗಾಂಧಿ ರಾಜ್ಯಕ್ಕೆ ಬರಲಿದ್ದಾರೆ..... ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ.....

ನನ್ನ ಗ್ರಾಮವಾಸ್ಥವ್ಯದಂತೆ ಇತರೆ ಸಚಿವರ, ಶಾಸಕರು ಜನರ ಸಮಸ್ಯೆ ಹರಿಯಲು ಗ್ರಾಮವಾಸ್ಥವ್ಯ ಮಾಡಲಿದ್ದಾರೆ...

ಬಿಜೆಪಿಯವರು ಎದರಿದ್ದಾರೆ... ಅದಕ್ಕೆ ಕೇಂದ್ರದ ಸಚಿವರ ತಂಡ ರಾಜ್ಯದ ಪ್ರಚಾರಕ್ಕೆ ಬರುತ್ತಿದ್ದಾರೆ... ಮತ್ತೆ ರಾಜ್ಯದಲ್ಲಿ ಕಾಂಗ್ರೇಸ್ ಅಧಿಕಾರಕ್ಕೆ : ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್

ಬಿಜೆಪಿಗೆ ತಳಮಳವಾಗಿದೆ:-

ರಾಜ್ಯದಲ್ಲಿ ಕಾಂಗ್ರೇಸ್ ಪಕ್ಷ ಸದೃಡವಾಗಿದೆ ಅದೇ ಹಿನ್ನೆಲೆಯಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರೂ ಮತ್ತು ಪ್ರಧಾನ ಮಂತ್ರಿಯೂ ಸೇರಿದಂತೆ ದೊಡ್ಡ ನಾಯಕರು ಭೇಟಿ ನೀಡುತ್ತಿದ್ದಾರೆ ಇದಕ್ಕೆ ಸಾಕ್ಷಿ ರಾಜ್ಯದಲ್ಲಿ ಜನರು ಕಾಂಗ್ರೇಸ್ ಪಕ್ಷಕ್ಕಿಟ್ಟಿರುವ ವಿಶ್ವಾಸ.

ಓಓಎಸ್ಇ-ಬಿಜೆಪಿ ಮೈತಿ:-

ಚುನಾವಣೆಯಲ್ಲಿ ಯಾವುದೇ ಪ್ರಯತ್ನವನ್ನಾದರೂ ಬಿಜೆಪಿ ಮಾಡುತ್ತದೆ ಈಗ ಓಓಎಸ್ಇ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಮುಂದೆ ಏನೇನು ಮಾಡುತ್ತಾರೋ ಕಾದು ನೋಡಬೇಕು.

ನನಗೆ ಗ್ರಾಮವಾಸ್ಥವ್ಯ ಹೊಸ ಅನುಭವ:-

ನಾನು ಇನ್ನೂ ಗ್ರಾಮೀಣ ಬದುಕನ್ನು ಹೆಚ್ಚು ಅರ್ಥಮಾಡಿಕೊಳ್ಳಲು ಗ್ರಾಮವಾಸ್ಥವ್ಯ ಸಹಕಾರಿಯಾಗಿದೆ ಇದಲ್ಲದೇ ಗ್ರಾಮದಲ್ಲಿನ ಸಮಸ್ಯೆಗಳು ನನಗೆ ಅರಿವಿಗೆ ಬರಲಿದೆ ಇಲ್ಲಿನ ಭೇಟಿಯಿಂದ ಗ್ರಾಮದಲ್ಲಿ ರಸ್ತೆ ಇಲ್ಲದಿರುವುದು,ಕುಡಿಯುವ ನೀರಿನ ವ್ಯವಸ್ಥೆ, ದೇವಾಲಯ, ಸಮುದಾಯ ಭವನ, ಬಹುತೇಕ  ಶಿಥಿಲಾವಸ್ಥೆಯಲ್ಲಿರುವ  ಹೆಚ್ಚು ಮನೆಗಳಿರುವುದು  ಜನರ ಸಮಸ್ಯೆಗಳನ್ನು ತಿಳಿಯಲು ವೈಯಕ್ತಿಕವಾಗಿ ಸಹಕಾರಿಯಾಗಿದ್ದ  ಎಲ್ಲರಿಂದಲೂ ಮನ್ನಣೆ ಸಿಗುತ್ತಿದೆ ಎಂದರು.

ಪಕ್ಷದ ಅಧ್ಯಕ್ಷನಾಗಿ ಸೂಚಿಸುತ್ತೇನೆ:-

ನನ್ನ ಗ್ರಾಮವಾಸ್ಥವ್ಯ ಉತ್ತಮ ಅನುಭಗಳನ್ನು ನೀಡಿದೆ ಇದೇ ರೀತಿ ಎಲ್ಲಾ ಹಾಲಿ, ಮಾಜಿ ಶಾಸಕರೂ , ಸಚಿವರು ಈ ಪದ್ದತಿಯನ್ನು ಅಳವಡಿಸಿಕೊಳ್ಳುವಂತೆ ಸೂಚಿಸುತ್ತೇನೆ ಇದು ಪಕ್ಷಕ್ಕೆ ಮತ್ತು ವೈಯಕ್ತಿಕವಾಗಿ ಸಹಕಾರಿಯಾಗಲಿದೆ ಎಂದು ಹೇಳುತ್ತೇನೆ.

ಮೂರನೇ ಗ್ರಾಮವಾಸ್ತವ್ಯ:

ಹೊಸ ವರ್ಷಕ್ಕೆ ಹೊಸ ಪರಮೇಶ್ವರ್ ಎನ್ನುವ ಕಲ್ಪನೆಯಡಿಯಲ್ಲಿ ಜನವರಿ ಮಾಹೆಯಲ್ಲಿಯೇ ಒಂದು ವಾರದ ಹಂತರದಲ್ಲಿ 3 ಗ್ರಾಮವಾಸ್ಥವ್ಯವನ್ನು ಪರಂ ಮುಗಿಸಿದ್ದಾರೆ.  ಕ್ಷೇತರದಲ್ಲಿನ ಪ್ರತೀ ಹೋಬಳಿಗಳಲ್ಲಿಯೂ ವಾಸ್ತವ್ಯ ಹೂಡುವ ಯೋಜನೆಯೊಂದಿಗೆ ಈಗಾಗಲೇ ಕಸಬಾ, ಸಿ.ಎನ್ ದುರ್ಗ, ಕೋಳಾಲ ಹೋಬಳಿಗಳನ್ನು ಮುಗಿಸಿದ್ದಾರೆ.

ಪರಂ ಎಲ್ಲರ ಮನೆಗೆ ಹೋಗ್ ತಾರೆ:-

ಇತ್ತೀಚೆಗೆ  ರಾಜ್ಯದಲ್ಲಿ ತೀವ್ರ ಚರ್ಚೆಗೊಳಗಾತ್ತಿರುವ ಸದಾಶಿವ ಆಯೋಗಕ್ಕೆ ಪರಂ ವಿರೋಧ ಎನ್ನುವವರ ಬಾಯಿ ಮುಚ್ಚಿಸಲು ಮೊದಲು ಎಡಗೈ ದಲಿತರ ಮನೆ, ಎರಡನೇ ವಾಸ್ತವಯ್ಯಕ್ಕೆ ಒಕ್ಕಲಿಗರು, ಈಗ ಗೊಲ್ಲ ಸಮುದಾಯವನ್ನು ಸೆಳೆಯುವ ಯತ್ನ ಮಾಡಿದ್ದಾರೆ.

ಭವ್ಯಸ್ವಾಗತ:-

ಗ್ರಾಮದ ಮಹಿಳೆಯರು  ಹಾರತಿ ಎತ್ತಿ ಪೂರ್ಣ ಕುಂಭ,ಕಳಶಗಳೊಂದಿಗೆ ಸ್ವಾಗತಿಸುತ್ತಿಸಿ ಗ್ರಾಮದೆಲ್ಲಿ ಸಂಭ್ರಮದಿಂದ ಗ್ರಾಮಸ್ಥರು ಜಮಾಯಿಸಿಯಿಸಿ ಗ್ರಾಮದಲ್ಲೇನೋ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು.  ಗೊಲ್ಲರ ಹಟ್ಟಿಗೆ ಭೇಟಿ ನೀಡುವ ಸಂದರ್ಭದಲ್ಲಿ ಗೊಲ್ಲ ಸಮುದಾಯದ ರೀತಿ-ನೀತಿಯಂತೆ ಅತಿಥಿಗಳನ್ನು ಗೋವು ಪೂಜೆ ಮಾಡುವ ಮೂಲಕ, ಕಂಬಳಿ, ಕೈಗೆ ಕೋಲು ಕಟ್ಟು ಸ್ವಾಗತಿಸಲಾಯಿತು ಪರಂ ಗ್ರಾಮಸ್ಥರ ಸ್ವಾಗತಕ್ಕೆ ಹರ್ಷವ್ಯಕ್ತಪಡಿಸಿದರು.   
ಏಕಾಏಕಿ ನಿರ್ಧಾರ :-  ಯಾರೊಬ್ಬರಿಗೂ ಗ್ರಾಮವಾಸ್ತವ್ಯದ  ಗುಟ್ಟನ್ನು ಬಿಟ್ಟುಕೊಡದೇ ದಿಡೀರ್ ನಿರ್ಧಾರಗಳನ್ನು ತೆಗೆದುಕಳ್ಳುವ ಮೂಲಕ ಸ್ಥಳೀಯರಿಗೆ ಪರಂ ಶಾಕ್ ನೀಡುತ್ತಾದ್ದಾರೆ. 

ನರಸಿಂಹಯ್ಯ ಹಿನ್ನೆಲೆ :-

ಕಾಗ್ರೇಸ್ ನ ನಿಷ್ಠಾವಂತ ಕಾರ್ಯಕರ್ತನಾದ ದಿವಗಂತ ನರಸಿಂಹಯ್ಯನವರ ಮನೆಯನ್ನು ಆಯ್ಕೆ ಮಾಡಿಕೊಂಡು ಮಗ ರಂಗಧಾಮಯ್ಯ, ಮತ್ತು ಸೊಸೆ ವರಲಕ್ಷ್ಮಿಯೊಂದಿಗೆ  ತಮ್ಮ ಇಚ್ಚೇ ಯಂತೆಯೇ ರಾಗಿ ಮುದ್ದೆ, ಸೊಪ್ಪಿನ ಸಾರು, ಸೊಪ್ಪಿನ ಪಲ್ಯ ಅಡುಗೆ ಮಾಡಿಸಿಕೊಂಡು ಕುಟುಂಬದ ಸದಸ್ಯರೊಂದಿಗೆ  ಕುಟುಂವನ್ನು ಹೇಗೆ ನಿರ್ವಣೆ ಮಾಡುತ್ತೀರಿ…  ಎಷ್ಟು ಹಸು ಇದೆ… ಎಷ್ಟು ಹಾಲಕನ್ನು ಡೇರಿ ಹಾಕುತ್ತೀರ ಎಂದು ಕುಟುಂಬದ ಸದಸ್ಯರೊಂದಿಗೆ ಮಾತನಾಡಿದರು. ಊಟದ ನಂತರ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿ ಗ್ರಾಮದ ಕುರಿತಾಗಿ ಸಮಸ್ಯೆಗಳು ,ಮಳೆ ಬೆಳೆಯ ಬಗ್ಗೆ ಕೆಲ ಹೊತ್ತು ಮಾತನಾಡಿ,   ಗ್ರಾಮಸ್ಥರೊಂದಿಗೆ ಕಳೆದು ನಂತರ ನರಸಿಂಹಯ್ಯನವರ  ಮನೆಯ ಕೋಣೆಯಲ್ಲಿ ಹಾಸಿದ್ದ  ಚಾಪೆಯ ಮೇಲೆಯೇ ನಿದ್ದೆ  ಮಾಡಿದರು..

ವಾಸ್ತವ್ಯದ ಹೈಲೈಟ್ಸ್ :-

ರಾತ್ರಿ 9.30  ರಿಂದ 12.30 ರ ವರೆಗೆ ಊಟ, ಗ್ರಾಮಸ್ಥರೊಂದಿಗೆ ಸಂವಾದ ನಡೆಸಿದ ಮದ್ಯರಾತ್ರಿ ನಿದ್ದೆಗೆ ಜಾರಿ ಬೆಳಗ

Edited By

Raghavendra D.M

Reported By

Raghavendra D.M

Comments