ಪ್ಲೆಕ್ಸ್-ಬಂಟಿಗ್ಸ್ ಕಟ್ಟಲು ಪರವಾನಗಿ ಖಡ್ಡಾಯ: ಸಿಪಿಐ ಮುನಿರಾಜು

25 Jan 2018 5:35 PM |
600 Report

ಕೊರಟಗೆರೆ ಜ:- ಪಟ್ಟಣದ ಪ್ರಧಾನ ರಸ್ತೆಯಲ್ಲಿ ಪ್ಲೇಕ್ಸ್, ಬಂಟ್ಟಿಂಗ್ಸ್ ಸೇರಿದಂತೆ ಬ್ಯಾನರ್ಗಳನ್ನು ಪ.ಪಂ. ಪರವಾನಗಿ ಇಲ್ಲದೆ ಹಾಕುವುದನ್ನು ನಿಷೇದಿಸಿರುವುದಾಗಿ ಕೊರಟಗೆರೆ ವೃತ್ತನಿರೀಕ್ಷಕ ಮುನಿರಾಜು ತಿಳಿಸಿದ್ದಾರೆ. ಕೊರಟಗೆರೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾದಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.


ಪ್ಲೆಕ್ಸ್-ಬಂಟಿಗ್ಸ್ ಕಟ್ಟಲು ಪರವಾನಗಿ ಖಡ್ಡಾಯ: ಸಿಪಿಐ ಮುನಿರಾಜು


ಕೊರಟಗೆರೆ ಜ:- ಪಟ್ಟಣದ ಪ್ರಧಾನ ರಸ್ತೆಯಲ್ಲಿ ಪ್ಲೇಕ್ಸ್, ಬಂಟ್ಟಿಂಗ್ಸ್ ಸೇರಿದಂತೆ ಬ್ಯಾನರ್ಗಳನ್ನು ಪ.ಪಂ. ಪರವಾನಗಿ ಇಲ್ಲದೆ ಹಾಕುವುದನ್ನು ನಿಷೇದಿಸಿರುವುದಾಗಿ ಕೊರಟಗೆರೆ ವೃತ್ತನಿರೀಕ್ಷಕ ಮುನಿರಾಜು ತಿಳಿಸಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾದಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇತ್ತೀಚೆಗೆ ಪಟ್ಟಣದಲ್ಲಿ ಪ್ಲೇಕ್ಸ್ ಮತ್ತು ಬ್ಯಾನರ್ಸ್ಗಳ ಉಪಟಳ ಹೆಚ್ಚಾಗಿದ್ದು ಇದರಿಂದ ರಾಜಕೀಯ ಪಕ್ಷಗಳ ಮುಖಂಡರುಗಳ ಮತ್ತು ವಿವಿಧ ಸಂಘಟನೆಗಳ ನಡುವೆ ಶಾಂತಿ ನೆಮ್ಮದಿಗೆ ಭಂಗಉಂಟು ಮಾಡುತ್ತಿರುವುದರೊಂದಿಗೆ ಪಟ್ಟಣದ ರಸ್ತೆಗಳಲ್ಲಿ ಅಪಘಾತಗಳಾಗುತ್ತಿದ್ದು ಇದನ್ನು ತಡೆಯಲು ಇನ್ನು ಮುಂದೆ ಪಟ್ಟಣದಲ್ಲಿ ಯಾವುದೇ ಪ್ಲೆಕ್ಸ್ ಮತ್ತು ಬ್ಯಾನರ್ಸ್ ಗಳನ್ನು ಕಟ್ಟ ಬೇಕಾದೆರೆ ಪಟ್ಟಣ ಪಂಚಾಯಿತಿ ನಿಗದಿ ಪಡಿಸಿದ ಸ್ಥಳಗಳಲ್ಲಿ ಪರವಾನಗಿ ಪಡೆದು 3 ದಿನಗಳ ಮಟ್ಟಿಗೆ ಮಾತ್ರ ಕಟ್ಟ ಬೇಕಾಗಿದ್ದು ನಂತರ ದಿನಗಳ ನಂತರ ಅವರೇ ತಮ್ಮ ಸ್ವಂತ ಖಚರ್ಿನಿಂದ ತೆರವುಗೊಳಿಸ ಬೇಕು ನಿಯಮ ಉಲ್ಲಂಗನೆ ಮಾಡಿ ಪ್ಲೆಕ್ಸ್ ಕಟ್ಟಿದ ವ್ಯಕ್ತಿಗಳ ಮೇಲೆ ನಿಧರ್ಾಕ್ಷಣ್ಯ ಕ್ರಮ ಕೈಗೊಂಡು ದೂರು ದಾಖಲಿಸಾಗುವುದು ಎಂದರು.
ಪಿಎಸೈ ಮಂಜುನಾಥ್ ಮಾತನಾಡಿ ಪಟ್ಟಣದ ಎಸ್ಎಸ್ಆರ್ ಮತ್ತು ಊಡರ್ಿಗೆರೆ ಕ್ರಾಸ್ ಬಳಿಯ ಕನಕ ವೃತ್ತದಲ್ಲಿ ಪ್ಲೆಕ್ಸ್ಗಳನ್ನು ಕಟ್ಟುವುದು ನಿಷೇದಿಸಲಾಗಿದ್ದು ಯಾವುದೇ ಕಾರಣಕೂ ಈ ಎರಡು ಸ್ಥಳಗಳಲ್ಲಿ ಯಾವ ರಾಜಕೀಯ ಪಕ್ಷದವರಾಗಲ್ಲಿ ಅಥವಾ ಸಂಘ ಸಂಸ್ಥೆಯವರಾಗಲ್ಲಿ ಬ್ಯಾನರ್ಸ್ಗಳನ್ನು ಕಟ್ಟಿದರೆ ಅವರ ವಿರುದ್ದವು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಅರೊಂದಿಗೆ ಸಮಾಜಿಕ ಜಾಲತಾಣಗಳಲ್ಲಿ ಅಶ್ಲೀಲವಾಗಿ ಚಿತ್ರಗಳನ್ನು ಹಾಕುವುದು ಮತ್ತು ಆವಾಶ್ಚ ಶಬ್ದಗಳಿಂದ ನಿಂದಿಸುವುದು ಮಾಡಿದಲ್ಲಿ ಅವರ ವಿರುದ್ದವು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾವುದು ಎಂದು ಎಚ್ಚರಿಸಿದರು.
ಪ.ಪಂ. ಮುಖ್ಯಾದಿಕಾರಿ ಶ್ರೀನಿವಾಸ್ ಮಾತನಾಡಿ ಸಾರ್ವಜನಿಕರು ಹಿತ ದೃಷ್ಠಿಯಿಂದ ಪಟ್ಟಣದ ರಸ್ತೆಗಳಲ್ಲಿ ಪ್ಲ್ಲಕ್ಸ್ಗಳನ್ನು ಕಟ್ಟಲು ಸ್ಥಳ ನಿಗದಿ ಪಡಿಸಿದ್ದ ಪ್ಲಕ್ಸ್ ಕಟ್ಟುವವರು ಪಟ್ಟಣ ಪಂಚಾಯಿತಿ ಯಿಂದ ಕಾನೂನಿನ ರೀತಿಯಲ್ಲಿ ಸಕರ್ಾರ ನಿಗದಿ ಪಡಿಸಿದ ಶುಲ್ಕ ನೀಡಿ ಪರವಾನಗಿ ಪಡೆದು ನಂತರ ಕಟ್ಟಬೇಕಾಗಿದ್ದು ತಪ್ಪಿದಲ್ಲಿ ಅನಧೀಕೃತವಾಗಿ ಕಟ್ಟಿದ ವ್ಯಕ್ತಿಗಳ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದರು.
ಸಭೆಯಲ್ಲಿ ಪ.ಪಂ.ಉಪಾಧ್ಯಕ್ಷ ಕೆ.ವಿ.ಮಂಜುನಾಥ್, ಸದಸ್ಯರಾದ ಸೈಯದ್ಸೈಪುಲ್ಲಾ, ಲಾರಿಸಿದ್ದಪ್ಪ, ಕೆ.ಆರ್ ಒಬಳರಾಜು, ಕೆ.ವಿ.ಪುರುಷೋತ್ತಮ್, ಕೆ,ಬಿ.ಲೋಕೇಶ್, ಬಿಜೆಪಿ ಜಿಲ್ಲಾ ಬಿಜೆಪಿ ಜಿಲ್ಲಾ ಕಾರ್ಯದಶರ್ಿ ಎಸ್. ಪವನ್ಕುಮಾರ್, ಜೆಡಿಎಸ್ ಪಕ್ಷದ ಕಾರ್ಯಧ್ಯಕ್ಷ ನರಸಿಂಹರಾಜು, ಮುಖಂಡರುಗಳಾದ ಮೈಲಾರಪ್ಪ, ಮಕ್ತಿಯಾರ್, ಆಟೋಕುಮಾರ್, ಕಣಿವೆಹನುಮಂತರಾಯಪ್ಪ, ಗಣೇಶ್, ಅನ್ಸರ್ಭಾಷಾ, ಪ.ಪಂ.ಅರೋಗ್ಯಾಧಿಕಾರಿ ರೈಸ್ಅಹಮದ್, ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು. (ಚಿತ್ರ ಇದೆ)
 

Edited By

Raghavendra D.M

Reported By

Raghavendra D.M

Comments