ಸಾಮೂಹಿಕ ಸೂರ್ಯನಮಸ್ಕಾರ

25 Jan 2018 5:25 PM |
446 Report

ಕೊರಟಗೆರೆ (ಜ. 24):- ತಾಲೂಕು ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥಸಪ್ತಮಿಯ ಪ್ರಾಮುಖ್ಯತೆ ಮತ್ತು ಆಚರಣೆಯನ್ನು ಯೋಗ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು. ರಥಸಪ್ತಮಿಯ ವಿಶೇಷವಾಗಿ ಪಟ್ಟಣದ ಸಕರ್ಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಬೆಳಿಗ್ಗೆ 6 ರಿಂದ 7.30 ರ ವರೆಗೆ 300 ಕ್ಕೂ ಅಧಿಕ ಯೋಗಪಟುಗಳು ಸೂರ್ಯನಮಸ್ಕಾರ ಮಾಡಿದರು.

ಸಾಮೂಹಿಕ ಸೂರ್ಯನಮಸ್ಕಾರ


ಕೊರಟಗೆರೆ (ಜ. 24):- ತಾಲೂಕು ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ರಥಸಪ್ತಮಿಯ ಪ್ರಾಮುಖ್ಯತೆ ಮತ್ತು ಆಚರಣೆಯನ್ನು ಯೋಗ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.
ರಥಸಪ್ತಮಿಯ ವಿಶೇಷವಾಗಿ ಪಟ್ಟಣದ ಸಕರ್ಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಕಾರ್ಯಕ್ರಮವನ್ನು ಬೆಳಿಗ್ಗೆ 6 ರಿಂದ 7.30 ರ ವರೆಗೆ 300 ಕ್ಕೂ ಅಧಿಕ ಯೋಗಪಟುಗಳು ಸೂರ್ಯನಮಸ್ಕಾರ ಮಾಡಿದರು.
ರಸಸಪ್ತಮಿಯ ದಿನ ಯೋಗ ಮಾಡುವುದರಿಂದ ಆಗಬಹುದಾದ ಲಾಭಗಳು ಮತ್ತು ಸೂರ್ಯನಮಸ್ಕಾರದ ಪ್ರಾಮುಖ್ಯತೆಯನ್ನು ತಾಲೂಕು ಪತಂಜಲಿ ಯೋಗ ಶಿಕ್ಷಣ ಸಮಿತಿಯ ತಾಲೂಕು ಸಂಕಾಲಕ ಗೋಪಿನಾಥ್ ತಿಳಿಸಿದರು.
ಜಿಲ್ಲಾ ಸಂಚಾಲಕ ಲೋಕೇಶ್, ಯೋಗ ಶಿಕ್ಷಕರಾದ ಎಸ್. ದಿವಾಕರ್, ಗೋವಿಂದಸ್ವಾಮಿ, ತಿಮ್ಮರಾಜು, ಚೈತ್ರ ಯೋಗಪಟುಗಳಿಗೆ ಸೂರ್ಯ ಸಮಸ್ಕಾರವನ್ನು ಹೇಳಿಕೊಟ್ಟರು.
ಕಾರ್ಯಕ್ರಮದಲ್ಲಿ ತಾ.ಪಂ ಕೆಡಿಪಿ ಸದಸ್ಯ ಮಯೂರ ಗೋವಿಂದರಾಜು, ಜೆ.ಕೆ ಮೆಮೋರಿಯಲ್ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ಸಿ. ಹನುಮಂತರೆಡ್ಡಿ, ವಕೀಲರ ಸಂಘದ ಪದಾಧಿಕಾರಿಗಳು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಸಕರ್ಾರಿ ನೌಕರರ ಸಂಘದ ಪಧಾಧಿಕಾರಿಗಳು ಸೇರಿದಂತೆ ಶಾಲಾ ಮಕ್ಕಳು ಹಾಗೂ ಪಟ್ಟಣ ಸೇರಿದಂತೆ ತಾಲೂಕಿನ ಹಲವು ಕಡೆಯಿಂದ ಯೋಗಪಟುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. (ಚಿತ್ರ ಇದೆ)
 

Edited By

Raghavendra D.M

Reported By

Raghavendra D.M

Comments