ಉಪ್ಪಿ 'ಎ' ಸಿನಿಮಾ ಮತ್ತೆ ಮಾಡಿದ್ರೆ ಹೇಗಿರುತ್ತೆ?

23 Jan 2018 6:24 PM |
1798 Report

ಉಪ್ಪಿ ಎಷ್ಟೇ ಸೂಪರ್ ಸ್ಟಾರ್ ಆದ್ರು, 'ಎ' ಚಿತ್ರವನ್ನ ಮಾತ್ರ ಯಾರೂ ಮರೆಯಲ್ಲ. ಉಪ್ಪಿ ಮತ್ತೆ 'ಎ' ರೀತಿಯ ಸಿನಿಮಾಗಳನ್ನ ಮಾಡಲಿ ಎನ್ನುವುದು ಅಭಿಮಾನಿಗಳ ಬೇಡಿಕೆ. ಅಂದ್ಹಾಗೆ, 'ಎ' ಸಿನಿಮಾ ತೆರೆಕಂಡ 20 ವರ್ಷ ಆಗಿದೆ. ಜನವರಿ 16, 1998 ರಂದು 'ಎ' ಸಿನಿಮಾ ರಿಲೀಸ್ ಆಗಿತ್ತು. ಒಂದು ವೇಳೆ 'ಎ' ಸಿನಿಮಾ ಮತ್ತೆ ಮಾಡಿದ್ರೆ ಹೇಗಿರುತ್ತೆ?.

20 ವರ್ಷಗಳ ಹಿಂದಿನ 'ಎ' ಚಿತ್ರವನ್ನ ಈಗಿನ ಕಾಲದಲ್ಲಿ ಮತ್ತೆ ಮಾಡಿದ್ರೆ ಹೇಗಿರುತ್ತೆ ಅಲ್ವಾ. ಅದೇ ಉಪೇಂದ್ರ ಡೈರೆಕ್ಷನ್ ಮಾಡಿ, ಜೊತಗೆ ತಾವೇ ನಾಯಕನಾಗಿ ಅಭಿನಯಿಸಿದ್ರೆ ಅಭಿಮಾನಿಗಳಿಗೆ ಅದಕ್ಕಿಂತ ಸಂಭ್ರಮ ಮತ್ತೊಂದಿಲ್ಲ. 'ಎ' ಚಿತ್ರದಲ್ಲಿ ನಟಿಸಿದ ಚಾಂದಿನಿ ಸುಮಾರು ವರ್ಷದ ನಂತರ ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡಿದ್ರು. ಕಳೆದ ವರ್ಷ 'ಖೈದಿ' ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಮತ್ತೆ ರೀ ಎಂಟ್ರಿ ಪಡೆದುಕೊಂಡಿದ್ದರು. ಒಂದು ವೇಳೆ ಉಪ್ಪಿ 'ಎ' ಸಿನಿಮಾ ಕೈಗೆತ್ತಿಕೊಂಡ್ರೆ, ಚಾಂದಿನಿ ಅಭಿನಯಿಸೋದು ಪಕ್ಕಾ ಅನ್ಸುತ್ತೆ. 'ಎ' ಸಿನಿಮಾ ಹಲವು ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಜೀವನ ಕೊಟ್ಟ ಚಿತ್ರ. ಈ ಚಿತ್ರದ ಮೂಲಕ ಉಪೇಂದ್ರ ನಾಯಕನಾದರು. ಚಾಂದಿನಿ ನಾಯಕಿಯಾದ್ರು. ಗುರುಕಿರಣ್ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯವಾದರು. ಖ್ಯಾತ ಛಾಯಾಗ್ರಾಹಕ ಎಚ್.ಸಿ ವೇಣು ಅವರೂ ಈ ಚಿತ್ರದಲ್ಲಿ ಬೆಳಕಿಗೆ ಬಂದರು. 'ಉಪೇಂದ್ರ ಮತ್ತೆ ಬಾ' ಚಿತ್ರದ ನಂತರ ಸಿನಿಮಾಗೆ ವಿಶ್ರಾಂತಿ ನೀಡಿರುವ ಉಪೇಂದ್ರ, 'ಕೆಪಿಜೆಪಿ' ಪಕ್ಷದ ಮೂಲಕ ರಾಜಕೀಯಕ್ಕೆ ಧುಮುಕಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಫರ್ಧಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉಪ್ಪಿ ಸಿನಿಮಾ ಮಾಡುವುದು ಅನುಮಾನವೆನ್ನಲಾಗಿದೆ. ಹಾಗಿದ್ದರೂ, ಉಪ್ಪಿ ಅಭಿಮಾನಿಗಳಿಗೆ ಇಂತಹದೊಂದು ಕುತೂಹಲ, ಬೇಡಿಕೆ, ಮಾತ್ರ ಇದ್ದೇ ಇದೆ.

Edited By

Uppendra fans

Reported By

upendra fans

Comments