ಬೆಂ.ಗ್ರಾ.ಜಿಲ್ಲಾ ಭಗೀರಥ ಉಪ್ಪಾರ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ನಿವೇಶನ ಕೋರಿ ಶಾಸಕ ಟಿ ವೆಂಕಟರಮಣಯ್ಯ ನವರಿಗೆ ಮನವಿ

21 Jan 2018 2:57 AM |
468 Report

ಬೆಂ.ಗ್ರಾ. ತಾಲ್ಲೂಕುಗಳಲ್ಲಿ ಭಗೀರಥ ಉಪ್ಪಾರ ಸಮುದಾಯದ ಸುಮಾರು ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು ಅಲ್ಪಸಂಖ್ಯಾತರಲ್ಲಿ ಅಲ್ಪಸಂಖ್ಯಾತರಾಗಿ ಕೂಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಾ ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದೇವೆ, ಇತ್ತೀಚೆಗಷ್ಟೇ ಸಮುದಾಯದ ಒಂದಿಷ್ಟು ಯುವಕರು ಜಾಗೃತರಾಗಿ ಸಂಘಟಿತವಾಗಿ ಸಮುದಾಯದ ಏಳಿಗೆಗೆ ದುಡಿಯಲು ಮುಂದಾಗಿದ್ದು ಅವರಿಗೆ ಸಂಘಟನಾ ಕಛೇರಿ, ಸಮುದಾಯ ಭವನದ ಅವಶ್ಯಕತೆ ಇದೆ ಎಂದು ಬೆಂ.ಗ್ರಾ,ಜಿಲ್ಲಾಧ್ಯಕ್ಷ ಚಂದ್ರಶೇಖರ ಡಿ.ಉಪ್ಪಾರ್ ಮನವಿ ಸಲ್ಲಿಸುತ್ತಾ ತಿಳಿಸಿದರು. ಬೆಂ.ಗ್ರಾ.ಜಿಲ್ಲಾ ಭಗೀರಥ ಉಪ್ಪಾರ ಸಂಘದ ಗೌರವ ಅಧ್ಯಕ್ಷ ವಿಜಯ ಕುಮಾರ್, ಉಪಾಧ್ಯಕ್ಷ ಎನ್. ಪ್ರಕಾಶ್, ನರಸಿಂಹಮೂರ್ತಿ, ಸಂಘಟನಾ ಕಾರ್ಯದರ್ಶಿ ನಾಗೇಂದ್ರ, ಸದಸ್ಯರಾದ ಶಿವಕುಮಾರ್, ಮರಿಸ್ವಾಮಿ, ಮುನಿರಾಜು, ಜಗದೀಶ, ಬಾಲಸುಬ್ರಮಣ್ಯ ಮುಂತಾದವರು ಹಾಜರಿದ್ದರು

Edited By

Ramesh

Reported By

Ramesh

Comments