ಸದ್ಯದಲ್ಲೇ ಕೆಪಿಜೆಪಿ ಪಕ್ಷದ ಪ್ರಣಾಳಿಕೆ ಬಿಡುಗಡೆ : ಉಪೇಂದ್ರ

20 Jan 2018 5:25 PM |
951 Report

"ನಮ್ಮ ಟೀಮ್ ನಿಂದಲೂ ಒಂದು ಸಮೀಕ್ಷೆ ಮಾಡಿಸಿದ್ದೀವಿ. ಅದನ್ನೂ ಬಿಡುಗಡೆ ಮಾಡ್ತೀವಿ. ಆಗ ನೀವೇ ನೋಡಿ. ಅದು ಬರೀ ಸಂಖ್ಯೆಗಳಲ್ಲ, ಕ್ರಮಬದ್ಧವಾಗಿ ಸಮೀಕ್ಷೆ ಮಾಡಿಸಿದ್ದೀವಿ" ಎಂದರು ನಟ ಹಾಗೂ ಕೆಪಿಜೆಪಿ ಪಕ್ಷದ ಮುಖ್ಯಸ್ಥ ಉಪೇಂದ್ರ. ಇದೇ ಹೊತ್ತಿಗೆ ಕೆಪಿಜೆಪಿಯಿಂದ ಸ್ಪರ್ಧಿಸಲು ಬಯಸಿದ ಆಕಾಂಕ್ಷಿಗಳ ಸಂದರ್ಶನ ಕೂಡ ನಡೆಯುತ್ತಲೇ ಇತ್ತು. "ಮೊದಲ ಸುತ್ತಿನ ಸಂದರ್ಶನ ನಡೆದ ಮೇಲೆ, ಫೈನಲ್ ಆಗಿ ನಾನೊಂದು ಸಲ ಮಾತನಾಡಿಸ್ತೀನಿ" ಎಂದರು.

ಬರ್ತಾ ಇದ್ದಾರೆ. ಈಗ ಇಂಟರ್ ವ್ಯೂ ನಡೀತಾ ಇದೆ. ಅದಾದ ಮೇಲೆ ನನ್ನ ಜೊತೆ ಪರ್ಸನಲ್ ಇಂಟರ್ ವ್ಯೂ ಇರುತ್ತೆ. ಅದಾದ ಮೇಲೆ ಅವರು ತಂದಿರುವ ಕ್ಲಿಪ್ಪಿಂಗ್ಸ್, ಮೈಕ್ರೋ ಮ್ಯಾನಿಫೆಸ್ಟೋ ಮತ್ತು ಮ್ಯಾಕ್ರೋ ಮ್ಯಾನಿಫೆಸ್ಟೋ ಇಟ್ಟು ವಿವರಿಸ್ತೀವಿ. ಮೈಕ್ರೋ ಅಂದರೆ ಒಂದು ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಣಾಳಿಕೆ. ಆ ಕ್ಷೇತ್ರದ ಶಾಲೆ, ನೀರು, ಪ್ರವಾಸೋದ್ಯಮ ಇತ್ಯಾದಿ ವಿಚಾರ ಇರುತ್ತದೆ. ಇನ್ನು ಮ್ಯಾಕ್ರೋ ಅಂದರೆ ಕೃಷಿ, ಆರೋಗ್ಯ, ಶಿಕ್ಷಣ ಇತ್ಯಾದಿ ವಿಚಾರಗಳ ಬಗ್ಗೆ ಇರುತ್ತದೆ. ಮೊನ್ನೆ ಕೃಷಿಗೆ ಸಂಬಂಧಿಸಿದ ಪ್ರಣಾಳಿಕೆ ಬಿಡುಗಡೆ ಮಾಡಿದ್ವಿ. ಹೇಗೆ ಹಣ ಬರುತ್ತದೆ ಮತ್ತು ಅದು ಹೇಗೆ ಹಂಚಿಕೆ ಆಗುತ್ತದೆ ಎಂಬ ವಿವರಗಳಿದ್ದವು. ಇನ್ನೂ ಜನ ಬರ್ತಾ ಇದ್ದಾರೆ. ನಾನು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಅಂತ ಅಂತಿಮವಾಗಿಲ್ಲ. ಅಭ್ಯರ್ಥಿಗಳು ಎಲ್ಲ ಬಂದುಬಿಡಲಿ. ಆ ಮೇಲೆ ಯಾವ ಕ್ಷೇತ್ರ ಅಂತ ನಿರ್ಧಾರ ಮಾಡ್ತೀವಿ. ಈಗಿನ್ನೂ ಸ್ಕ್ರೀನಿಂಗ್ ಹಂತದಲ್ಲೇ ಇದೆ. ಪ್ರಣಾಳಿಕೆ ಅಂತಿಮ ಅಂತಲ್ಲ. ಅದನ್ನು ಪ್ರಸ್ತಾವ ಅಂತಲೇ ಮಾಡಿದ್ದೀನಿ. ಇನ್ನೂ ಸಲಹೆಗಳು ಬರ್ತಾ ಇವೆ. ಇನ್ನೇನು ಕೆಲವು ದಿನಕ್ಕೆ ಅಂತಿಮ ಅಂತ ಮಾಡಿ, ಬಿಡುಗಡೆ ಮಾಡ್ತೀವಿ. ಅದನ್ನು ನಾವಿನ್ನೂ ನಿರ್ಧರಿಸಿಲ್ಲ. ಅದ್ಭುತ ಅನಿಸುವ ಅಭ್ಯರ್ಥಿ ಸಿಕ್ಕಿದರೆ ಅವರನ್ನೇ ಘೋಷಣೆ ಮಾಡ್ತೀವಿ. ಸದ್ಯಕ್ಕೆ ನಾನೇ ನೋಡಿಕೊಳ್ತಿದ್ದೀನಿ. ನಮ್ಮ ಪಕ್ಷದಲ್ಲಿ ಹುದ್ದೆಗಳು ಅಂತ ಇರಲ್ಲ. ಒಬ್ಬರು, ಅವರ ಕೆಳಗೆ ಮತ್ತೊಂದು ಹುದ್ದೆ. ಹೀಗೆ ಇರಲ್ಲ. ಅದು ಬೇಡ ಅನ್ನೋದು ನನ್ನ ಉದ್ದೇಶ. ಹಾಗಿದ್ದರೆ ಸಮಸ್ಯೆ ಆಗುತ್ತದೆ. ಇನ್ನು ಅಭ್ಯರ್ಥಿಗಳೇ ವಿಭಾಗ ಮಾಡಿಕೊಳ್ತಾರೆ. ಅವರೇ ಪ್ರಚಾರ ಮಾಡ್ತಾರೆ ಎಂದರು.

 

 

Edited By

Uppendra fans

Reported By

upendra fans

Comments