ಯಡ್ಡಿಯ ಭ್ರಷ್ಟಾಚಾರಕ್ಕೆ ಬೇಸತ್ತು ,ಕರ್ನಾಟಕದ ಅಭಿವೃದ್ಧಿ ವಿಕಾಸಕ್ಕೆ ಕುಮಾರಣ್ಣ ನಿಗೆ ಕೈ ಜೊಡಿಸಿದ ಪ್ರತಾಪ್  ಸಿಂಹ

19 Jan 2018 1:19 PM |
104682 Report

ಯಡಿಯೂರಪ್ಪನವರ ಪಕ್ಷಪಾತ ಹಾಗೂ ಇತ್ತೀಚಿಗೆ ಪಕ್ಷದಲ್ಲಿ ಆಗುತ್ತಿರುವ ಬೆಳೆವಣಿಗೆ ಕನ್ನಡಿಗರ ವಿರೋಧಿ ಹೇಳಿಕೆ ನೀಡುತ್ತಿರುವ ಗೋವಾ ಬಿಜೆಪಿ ನಾಯಕರು ಇದರಿಂದ ಮನ ನೊಂದಿರುವ ಪ್ರತಾಪ್ ಸಿಂಹ ಜೆಡಿಎಸ್ ನಾಯಕರನ್ನು ಭೇಟಿ ಮಾಡಿರುವುದು ರಾಜಕೀಯ ಪಕ್ಷಗಳಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಕೆಲ ದಿನಗಳ ಹಿಂದೆ ಗೋವಾ ಸಚಿವರ ವಿರುದ್ಧ ಪ್ರತಾಪ್ ಸಿಂಹರವರು ಆಕ್ರೋಶ ವ್ಯಕ್ತಪಡಿಸಿದ್ದನ್ನು ನಾವು ಇಲ್ಲಿ ಸ್ಮರಿಸಬಹುದು.

ಹುಣಸೂರು ಕ್ಷೇತ್ರ ಇದುವರೆಗಿನ ಚುನಾವಣೆಗಳಲ್ಲಿ ಬಿಜೆಪಿಗೆ ಗಮನ ಕೊಡಬೇಕಾದಂತಹ ಫಲಿತಂಶವನ್ನು ನೀಡಿಲ್ಲ. ಈ ಬಾರಿ ಚಿತ್ರಣ ಬದಲಾಗಿದೆ. ಮೈಸೂರು - ಕೊಡಗು ಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ನಾಯಕರಿಂದ ರಾಜ್ಯಕ್ಕೆ ಯಾವುದೇ ರೀತಿಯ ಉಪಯೋಗವಾಗುತಿಲ್ಲ. ತಮಿಳುನಾಡಿನಲ್ಲಿ ಪ್ರಾಕೃತಿಕ ವಿಕೋಪ ಎದುರಾದಾಗ ಬಿಜೆಪಿ ನಾಯಕರು, ಚೆನ್ನೈಗೆ ಹೋಗಿ ಪರಿಸ್ಥಿತಿಯನ್ನು ಅವಲೋಕಿಸಿ ಪರಿಹಾರ ಬಿಡುಗಡೆ ಮಾಡಿದ್ದಾರೆ. ಅದಕ್ಕಿಂತ ಹೆಚ್ಚು ವಿಕೋಪಗಳು ಕರ್ನಾಟಕದಲ್ಲಿ ಆಗಿದೆ. ಮಹದಾಯಿ ವಿಚಾರದಲ್ಲಿ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರಕಾರವಿದೆ ಆದರೂ ಸಹ ಸಮಸ್ಯೆಯನ್ನು ಬಗೆಹರಿಸುವಲ್ಲಿ ಇಂಜರಿಯುತ್ತಿದ್ದಾರೆ. ಕರ್ನಾಟಕದ ಜನತೆಗೆ ಭರವಸೆ ನೀಡುತ್ತಿದ್ದಾರೆಯೇ ವಿನಃ ಯಾವುದೇ ರೀತಿಯಲ್ಲಿ ಸಮಸ್ಯೆಯನ್ನು ಬಗೆ ಹರಿಸಲು ಮುಂದಾಗುತ್ತಿಲ್ಲ. ಅಮಿತ್ ಶಾ ಅವರು ಕರ್ನಾಟಕಕ್ಕೆ ರಾಜಕೀಯ ವ್ಯಾಪಾರಿಕರಣಕ್ಕೆ ಬರುತ್ತಿದ್ದಾರೆ ಆದರೆ ರಾಜ್ಯದ ಸಮಸ್ಯೆಗಳ ಬಗ್ಗೆ ಇದುವರೆಗೆ ತುಟಿ ಬಿಚ್ಚಿಲ್ಲ, ರಾಜ್ಯದ ಜನತೆಯ ಸಮಸ್ಯೆಗಳನ್ನು ಮರೆತು ಚುನಾವಣೆ ಮೂಡಿನಲ್ಲಿವೆ. ಇವೆಲ್ಲದರಿಂದ ಬೇಸತ್ತ ಪ್ರತಾಪ್ ಸಿಂಹ ರವರು ಜೆಡಿಎಸ್ ನತ್ತ ಒಲವು ಬೆಳೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲದೆ ಕುಮಾರಸ್ವಾಮಿ ಯವರು 20 ತಿಂಗಳ ಆಡಳಿತದ ವೈಖರಿ ಹಾಗೂ ರಾಜ್ಯದ ಜನತೆಯ ಸಂಕಷ್ಟಗಳಿಗೆ  ಜೆಡಿಎಸ್ ಸ್ಪಂದಿಸುವ ರೀತಿ ಇವೆಲ್ಲಾ ಕಾರಣಗಳಿಂದ ಪ್ರತಾಪ್ ಸಿಂಹರವರು ತೆನೆ ಹೊರಲು ಸಿದ್ಧರಿದ್ದಾರೆ ಎನ್ನಲಾಗಿದೆ.

Edited By

hdk fans

Reported By

hdk fans

Comments