ಕರ್ನಾಟಕದ ಬಗ್ಗೆ ಅವಹೇಳನ ಮಾಡಿರುವ ಪಾಲೇಕರ್​ ರಾಜೀನಾಮೆಗೆ ಹೆಚ್​ಡಿಕೆ ಒತ್ತಾಯ

17 Jan 2018 11:00 AM |
510 Report

ಮಹದಾಯಿ ವಿಚಾರವಾಗಿ ಬೀದರ್​ನಲ್ಲಿ ಮಾತನಾಡಿದ ಜೆಡಿಎಸ್​ ನಾಯಕ ಹೆಚ್​. ಡಿ. ಕುಮಾರಸ್ವಾಮಿ 'ಮಹಾದಾಯಿ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕರ್ನಾಟಕದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಗೋವಾ ಸಚಿವ ವಿನೋದ ಪಾಲೇಕರ್ ರಾಜೀನಾಮೆ ಪಡೆದುಕೊಳ್ಳಬೇಕು' ಎಂದು ಒತ್ತಾಯಿಸಿದ್ದಾರೆ.

ಮಹದಾಯಿ ವಿಚಾರ ದಿನೇ ದಿನೇ ಮತ್ತಷ್ಟು ಜಟಿಲಗೊಳ್ಳುತ್ತಿದೆ. ರೈತರು ನೀರಿಗಾಗಿ ಹೋರಾಟ ನಡೆಸುತ್ತಿದ್ದರೆ ಇತ್ತ ರಾಜಕಾರಣಿಗಳು ರಾಜಕೀಯ ಕೆಸರೆರಚಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ನಡುವೆ ಗೋವಾ ಸಚಿವರ ಉದ್ಧಟತನವೂ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಬಳಿಕ ಮಾತನಾಡಿದ ಹೆಚ್​ಡಿಕೆ 'ಮಹಾದಾಯಿ ನೀರು ಹಂಚಿಕೆ ವಿಚಾರವಾಗಿ ಹುಡುಗಾಟಿಕೆಯಾಗಿ ತಗೆದುಕೊಳ್ಳುವ ಮೂಲಕ ನಗೆಪಾಟಿಗೆ ಈಡಾಗಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ನರೇಂದ್ರ ಮೊದಿ‌ ಪ್ರಧಾನಿಯಾಗಿದ್ದಾರೆ. ಅವರ ಅಧಿಕಾರವನ್ನ ಬಳಸಿಕೊಂಡು ಮಹಾದಾಯಿ ವಿಚಾರವನ್ನು ಬಗೆಹರಿಸಬೇಕಿತ್ತು' ಬಿಜೆಪಿ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ.  

Edited By

hdk fans

Reported By

hdk fans

Comments