ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ನಮ್ಮ ದೇಶದ ತಾಯಿ ಮಾಡುತ್ತಾಳೆ : ವೀರಭದ್ರಶಿವಾಚಾರ್ಯಸ್ವಾಮೀಜಿ

28 Dec 2017 6:34 PM |
591 Report

ಕೊರಟಗೆರೆ :- ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ನಮ್ಮ ದೇಶದ ತಾಯಿ ಮಾಡುತ್ತಾಳೆ ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿಸಿದರು.        ಪಟ್ಟಣ ದಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಪರಿವರ್ತನ ಸ್ವ-ಸಹಾಯ ಸಂಘಗಳ ಒಕ್ಕೂಟ ವತಿಯಿಂದ 560 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ, ಪರಿವರ್ತನ ಉಚಿತ ಅನ್ನಪೂರ್ಣ ದಾಸೋಹ ಕೇಂದ್ರದ ಉದ್ಘಾಟನೆ, ಸಚಾರಿ ವಾಹನ ಮತ್ತು ಸಾರ್ವಜನಿಕ ಹಿತರಕ್ಷಣಾ ಸೇವಾ ಸಮಿತಿ ವತಿಯಿಂದ ಕೈಲಾಸ ರಥ ಬಿಡುಗಡೆ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು. ಭಾರತ ದೇಶ ಪುರುಷ ಪ್ರಧಾನ ದೇಶವಾದರೂ ಸಹ ಪ್ರತಿಯೊಂದು ಮನೆಯಲ್ಲಿಯೂ ಮಾತೃ ಪ್ರಧಾನವಾಗಿಯೇ ಇರುತ್ತದೆ ಇದು ನಮ್ಮ ಸಂಸ್ಕೃತಿ ದೇಶದ ಮಹಿಳೆಯರು ತಾಳ್ಮೆ ಮತ್ತು ಸಂಯಮದಿಂದ ವತರ್ಿಸುತ್ತಿರುವುದರಿಂದಲೇ ದೇಶ ಸುಭದ್ರವಾಗಿದೆ ಎಂದರು.  

 ಕೊರಟಗೆರೆ :- ಒಂದು ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ನಮ್ಮ ದೇಶದ ತಾಯಿ ಮಾಡುತ್ತಾಳೆ ಎಂದು ಸಿದ್ದರಬೆಟ್ಟದ ಬಾಳೇಹೊನ್ನೂರು ಖಾಸಾ ಶಾಖಾ ಮಠದ ಪೀಠಾದ್ಯಕ್ಷ ವೀರಭದ್ರಶಿವಾಚಾರ್ಯಸ್ವಾಮೀಜಿ ತಿಳಿಸಿದರು.

       ಪಟ್ಟಣ ದಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಪರಿವರ್ತನ ಸ್ವ-ಸಹಾಯ ಸಂಘಗಳ ಒಕ್ಕೂಟ ವತಿಯಿಂದ 560 ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆ, ಪರಿವರ್ತನ ಉಚಿತ ಅನ್ನಪೂರ್ಣ ದಾಸೋಹ ಕೇಂದ್ರದ ಉದ್ಘಾಟನೆ, ಸಚಾರಿ ವಾಹನ ಮತ್ತು ಸಾರ್ವಜನಿಕ ಹಿತರಕ್ಷಣಾ ಸೇವಾ ಸಮಿತಿ ವತಿಯಿಂದ ಕೈಲಾಸ ರಥ ಬಿಡುಗಡೆ ಕಾರ್ಯಕ್ರಮ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಭಾರತ ದೇಶ ಪುರುಷ ಪ್ರಧಾನ ದೇಶವಾದರೂ ಸಹ ಪ್ರತಿಯೊಂದು ಮನೆಯಲ್ಲಿಯೂ ಮಾತೃ ಪ್ರಧಾನವಾಗಿಯೇ ಇರುತ್ತದೆ ಇದು ನಮ್ಮ ಸಂಸ್ಕೃತಿ ದೇಶದ ಮಹಿಳೆಯರು ತಾಳ್ಮೆ ಮತ್ತು ಸಂಯಮದಿಂದ ವತರ್ಿಸುತ್ತಿರುವುದರಿಂದಲೇ ದೇಶ ಸುಭದ್ರವಾಗಿದೆ ಎಂದರು.

       ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಮಾತನಾಡಿ ದೇಶದಲ್ಲಿ ಬ್ಯಾಂಕ್ಗಳ ಬರುವುದಕ್ಕಿಂತಲೂ ಮೊದಲೇ ತಮ್ಮ ದೇಶದಲ್ಲಿ ಬ್ಯಾಂಕ್ಗಳು ನಮ್ಮ ಅಡುಗೆ ಮನೆಯಲ್ಲಿ ತಮ್ಮ ತಾಯಂದಿರು ಸೃಷ್ಟಿಸಿದ್ದರು ಆಪತ್ತಿನ ಮತ್ತು ತುತರ್ುಬಳಕೆಗಾಗಿ ಹಣವನ್ನು ಸಾವಿವೆ, ಜೀರಿಗೆ ಡಬ್ಬದಲ್ಲಿ ಇಡುವ ಮೂಲಕ ಉಳಿತಾಯ ಮಾಡುತ್ತಿದ್ದರು ಇದರ ಪ್ರೇರಣೆಯಿಂದಲೇ ಬ್ಯಾಂಕ್ಗಳಾಗಿವೆ ಎಂದು ಹೇಳಿದರು.

      ಸ್ವಸಾಯ ಸಂಘಗಳು ಮಹಿಳೆಯರು ಆಥರ್ಿಕವಾಗಿ ಸದೃಡವಾಗಲು ಸಹಕಾರಿಯಾಗಿದ್ದು ಹೆಚ್ಚು ಇವುಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಬದುಕನ್ನು ಕಟ್ಟಿಕೊಳ್ಳುವಂತೆ ಕರೆ ನೀಡಿದರು.
ಬ್ಯಾಂಕ್ಗಳು ಸ್ತ್ರೀ ಶಕ್ತಿ ಸಂಘಗಳಿಗೆ ಹೆಚ್ಚಿನ ಶಕ್ತಿಯನ್ನು ನೀಡಬೇಕು ಹೆಣ್ಣು ಮಕ್ಕಳು ಪುರುಷರಿಗಿಂತ ಹಣದ ವ್ಯವಹಾರದಲ್ಲಿ ಹೆಚ್ಚು ಪ್ರಾಮಾಣಿಕರಾಗಿರುತ್ತಾರೆ ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ಹೇಳಿದರು.
      ಜಿ.ಪಂ ಸದಸ್ಯ ವೈ.ಹೆಚ್ ಹುಚ್ಚಯ್ಯ ಮಾತನಾಡಿ ತುಮಕೂರು ಜಿಲ್ಲೆಗೆ 23 ಕೋಟಿ ಕೇಂದ್ರ ಸಕರ್ಾರದ ಧೀನ ದಯಾಳ್ ಮತ್ತು ಉದ್ಯೋಗಿನಿ ಯೋಜನೆಗಳಿಗೆ ಹಣವನ್ನು ಮಂಜೂರು ಮಾಡಿದ್ದು ಎಲ್ಲಾ ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂದರು ಮಾಹಿತಿ ನೀಡಿದರು.


ಪ್ರಸ್ತಾವಿಕ ನುಡಿ:- ಪರಿವರ್ತನ ಸ್ವ-ಸಹಾಯ ಸಂಘಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಹೆಚ್.ಪಿ ಶಿವಕುಮಾರ್ ಮಾತನಾಡಿ 2014 ರಂದು ಪ್ರಾರಂಭವಾಗಿ 560 ಸ್ವ-ಸಹಾಯ ಸಂಘಳನ್ನು ಹೊಂದಿದ್ದು 36 ಲಕ್ಷ ಉಳಿತಾಯ ಮಾಡಿದೆ 110 ಪುರಷರ ಸಂಘಗಳನ್ನು ಸಹ ರಚನೆ ಮಾಡಿದ್ದು, 400 ಬೀದಿ ವ್ಯಾಪಾರಿಗಳಿಗೆ 2 ಕೋಟಿ, 1300 ಗುಂಪಿನ ಸದಸ್ಯರಿಗೆ ತರಬೇತಿ, 6 ಸಾವಿರ ಸದಸ್ಯರಿಗೆ ಜೀವ ವಿಮೆ, 350 ಕುಟುಂಬಗಳಿಗೆ ಸೋಲಾರ್ ವಾಟರ್ ಈಟರ್, ಸೇರಿದಂತೆ ಸಾಮಾಜಿ ಕಾರ್ಯಕ್ರಮದ ಅಡಿಯಲ್ಲಿ ಅಕ್ಕಿರಾಂಪುರ ಗ್ರಾಮವನ್ನು 10 ಲಕ್ಷ ರೂ ಬಡ್ಡಿ ರಹಿತ ಸಾಲ ನೀಡಿ ಬಯಲು ಶೌಚ ಮುಕ್ತ ಗ್ರಾಮವಾಗಿಸಿದ್ದು ಸಂಸ್ಥೆಯಲ್ಲಿ 23 ಸ್ವಯಂ ಸೇವಕ ಸದಸ್ಯರು ಕರ್ತವ್ಯ ನಿರ್ವಹಿಸುತ್ತಿದ್ದು ನಿಮ್ಮೂರಿನ, ನಿಮ್ಮ ಸಂಸ್ಥೆಯನ್ನು ನೀವೇ ಬೆಳೆಸಿ ಅರಿದ್ದೀರಿ ಇದಕ್ಕೆ ಚಿರಋಣಿ ಎಂದರು.
        ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎಲ್. ಮೋಹನ್ ಕುಮಾರ್, ತಾಲೂಕು ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಜಯಮ್ಮ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ನಾಗರಾಜು, ನಾಗರೀಕ ಹಿತರಕ್ಷಣಾ ವೇಧಿಕೆಯ ಅಧ್ಯಕ್ಷ ಕೆ.ಕೆ ನವೀನ್ ಕುಮಾರ್, ಮಾಜಿ ತಾ.ಪಂ ಅಧ್ಯಕ್ಷ ಕೆ.ಬಿ ಲೋಕೇಶ್, ಎಸ್ಬಿಎಂ ಪ್ರಾದೇಶಿಕ ವ್ಯವಸ್ಥಾಪಕ ಎಂ. ಚಂದ್ರಕಾಂತ್, ಮಾರ್ಗದಶರ್ಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ವಿ.ಎಸ್ ಜ್ಯೋತಿಗಣೇಶ್, ಕೊರಟಗೆರೆ ಬ್ಯಾಂಕ್ ಎಸ್ಬಿಎಂ -ಸಿದ್ದಲಿಂಗಯ್ಯ, ಕೆನರಾ-ಧನಂಜಯ, ಮುಖಂಡರಾದ ಚಿಕ್ಕರಂಗಯ್ಯ, ಮಯೂರ ಗೋವಿಂದರಾಜು, ಚಿನ್ನವೆಂಕಟಶೆಟ್ಟಿ, ನಂಜುಂಡ ಶೆಟ್ಟಿ, ತಾ.ಪಂ ಉಪಾಧ್ಯಕ್ಷೆ ನರಸಮ್ಮ ಪ.ಪಂ ಗ್ರಾ.ಪಂ ಸದಸ್ಯರು   & others

Edited By

Raghavendra D.M

Reported By

Raghavendra D.M

Comments