ಮಹದಾಯಿ ನೀರಿನ ಸಮಸ್ಯೆಗೆ ಉಪ್ಪಿ ಅಡ್ವೈಸ್..!!

27 Dec 2017 2:48 PM |
1550 Report

ಒಂದು ಸಣ್ಣ ಉದಾಹರಣೆ ಮೂಲಕ ಮಹದಾಯಿ ಮಾತ್ರವಲ್ಲ ರಾಜ್ಯದ ನೀರಿನ ಸಮಸ್ಯೆಯನ್ನು ಯಾವ ರೀತಿ ಬಗೆ ಹರಿಸಿಕೊಳ್ಳಬಹುದು ಎಂಬ ಸಲಹೆ ನೀಡಿದ್ದಾರೆ. ಮಹದಾಯಿ ಹೋರಾಟ ತನ್ನ ತೀವ್ರತೆಯನ್ನು ಹೆಚ್ಚಿಸಿಕೊಂಡಿದೆ. ಹೋರಾಟದಲ್ಲಿ ಭಾಗಿಯಾಗಿರುವ ರೈತರು ಸಿನಿಮಾ ನಟರು ಕೂಡ ನಮ್ಮ ಹೋರಾಟಕ್ಕೆ ಸಾಥ್ ನೀಡಬೇಕು ಎಂದು ಉಪೇಂದ್ರ ರವರು ಸಲಹೆ ನೀಡಿದ್ದಾರೆ.

ಆಂಧ್ರದ ಅನಂತಪುರ ಜಿಲ್ಲೆಯ ರಾಯಲಸೀಮದಲ್ಲಿ ಇದೇ ರೀತಿ ನೀರಿನ ಹಾಹಾಕಾರ ಇತ್ತು. ಆ ವೇಳೆ ಅಂದರೆ 1995ರಲ್ಲಿ ಪುಟ್ಟಪರ್ತಿಯ ಭಗವಾನ್ ಸಾಯಿಬಾಬಾ ರವರು ಸರ್ಕಾರವೇ ಮಾಡದ ಒಂದು ದೊಡ್ಡ ಕೆಲಸವನ್ನು ಪ್ರಾರಂಭ ಮಾಡಿದರು. ರಾಯಲಸೀಮದ ನೀರಿನ ಸಮಸ್ಯೆ ನಿವಾರಣೆಗೆ ಮುಂದಾದ ಭಗವಾನ್ ಸಾಯಿಬಾಬಾ ಅವರು 18 ತಿಂಗಳಿನಲ್ಲಿ 2000 ಕಿಲೋ ಮೀಟರ್ ಪೈಪ್ ಲೈನ್ ಜೊತೆಗೆ 43 ನೀರಿನ ದೊಡ್ಡ ತೊಟ್ಟಿಗಳನ್ನು ನಿರ್ಮಿಸಿದರು. ಒಂದು ನೀರಿನ ತೊಟ್ಟಿ 1.5 ಲಕ್ಷ ಲೀಟರ್ ನಿಂದ 25 ಲಕ್ಷ ಲೀಟರ್ ಸಾಮರ್ಥ್ಯ ಇತ್ತು. ಇದರ ಮೂಲಕ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು.

ಇದೇ ರೀತಿಯ ಘಟನೆ ಚೆನೈ ನಲ್ಲಿ ಕೂಡ ನಡೆದಿದೆ. ಚೆನೈನಲ್ಲಿ ಇದ್ದ ನೀರಿನ ಸಮಸ್ಯೆಗೆ ಸಾಯಿಬಾಬಾ ಅವರು ಕೃಷ್ಣ ನದಿಯ ನೀರನ್ನು ಚೆನೈಗೆ ಹರಿಸುವಂತೆ ಕೆಲಸ ಶುರು ಮಾಡಿದರು. ಅದೇ ರೀತಿ ನಿಗದಿತ ಅವಧಿಯಲ್ಲಿ ಅದು ಪೂರ್ಣವಾಯಿತು. ಜನರಿಗೆ ಕುಡಿಯುವ ನೀರು ಜೊತೆಗೆ ನೀರು ಬರುವ ಮಾರ್ಗದಲ್ಲಿ 3 ಲಕ್ಷ ಹೆಕ್ಟೇರ್ ವ್ಯವಸಾಯ ಭೂಮಿಗೆ ನೀರನ್ನು ಹರಿಸಲಾಯ್ತು. ''ಪ್ರಯತ್ನ ಇದ್ದರೇ ಏನು ಬೇಕಾದರೂ ಮಾಡಬಹುದು ಎನ್ನುವುದಕ್ಕೆ ಈ ಘಟನೆ ಸಾಕ್ಷಿ'' ಎಂದು ಹೇಳಿರುವ ಉಪೇಂದ್ರ 'ಮಹದಾಯಿಗೆ ಈ ರೀತಿಯ ಪ್ರಯತ್ನಗಳು ಪರಿಹಾರವಾಗಬಹುದೇ ??'' ಎಂದು ಟ್ವಿಟ್ಟರ್ ಖಾತೆಯಲ್ಲಿ ಜನರಿಗೆ ಒಂದು ಸಲಹೆ ಮುಂದಿಟ್ಟಿದ್ದಾರೆ.

Edited By

Uppendra fans

Reported By

upendra fans

Comments