ಅಹಿಂದ ಜನರ ಅಭಿವೃದ್ಧಿಗೆ ಕಾಂಗ್ರೇಸ್ ಸಕರ್ಾರ ಬದ್ದ ತಿಗಳ ಸಮಾಜಕ್ಕೆ 50 ಲಕ್ಷ ರೂ ಅನುಧಾನ: ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್

24 Dec 2017 7:04 PM |
501 Report

ಕೊರಟಗೆರೆ :- ಕೊರಟಗೆರೆ ಕ್ಷೇತ್ರದಲ್ಲಿ ವಸತಿ ರಹಿತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಶ್ರಮವಹಿಸಿ ವಸತಿ ಸಚಿವರಿಂದ ಆಶ್ರಯ ಯೋಜನೆಯಲ್ಲಿ ಬಡವರಿಗೆ ಹಂಚಲು 4 ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು. ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಹನುಮಂತಗಿರಿ(ಅಯ್ಯನಗುಡಿ ಗೊಲ್ಲಹಳ್ಳಿ) ಯಲ್ಲಿ ಏರ್ಪಡಿಸಿದ್ದ ಕ್ಷತ್ರಿಯ ತಿಗಳ ಸಮುದಾಯದ ಅಭಿವೃದ್ದಿಗಾಗಿ ಸಕರ್ಾರದಿಂದ 50 ಲಕ್ಷ ರೂಗಳ ವಿಶೇಷ ಅನುದಾನ ಮಂಜೂರು ಮಾಡಿದ್ದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭದಲ್ಲಿ ಮಾತನಾಡಿದರು.

 

ಅಹಿಂದ ಜನರ ಅಭಿವೃದ್ಧಿಗೆ ಕಾಂಗ್ರೇಸ್ ಸಕರ್ಾರ ಬದ್ದ
ತಿಗಳ ಸಮಾಜಕ್ಕೆ 50 ಲಕ್ಷ ರೂ ಅನುಧಾನ: ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ್


ಕೊರಟಗೆರೆ :- ಕೊರಟಗೆರೆ ಕ್ಷೇತ್ರದಲ್ಲಿ ವಸತಿ ರಹಿತ ಕುಟುಂಬಗಳಿಗೆ ಶಾಶ್ವತ ಸೂರು ಕಲ್ಪಿಸಲು ಶ್ರಮವಹಿಸಿ ವಸತಿ ಸಚಿವರಿಂದ ಆಶ್ರಯ ಯೋಜನೆಯಲ್ಲಿ ಬಡವರಿಗೆ ಹಂಚಲು 4 ಸಾವಿರ ಮನೆಗಳನ್ನು ಮಂಜೂರು ಮಾಡಿಸಲಾಗಿದೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ಹನುಮಂತಗಿರಿ(ಅಯ್ಯನಗುಡಿ ಗೊಲ್ಲಹಳ್ಳಿ) ಯಲ್ಲಿ ಏರ್ಪಡಿಸಿದ್ದ ಕ್ಷತ್ರಿಯ ತಿಗಳ ಸಮುದಾಯದ ಅಭಿವೃದ್ದಿಗಾಗಿ ಸಕರ್ಾರದಿಂದ 50 ಲಕ್ಷ ರೂಗಳ ವಿಶೇಷ ಅನುದಾನ ಮಂಜೂರು ಮಾಡಿದ್ದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಅಭಿನಂಧನಾ ಸಮಾರಂಭದಲ್ಲಿ ಮಾತನಾಡಿದರು.
ಕೊರಟಗೆರೆ ಕ್ಷೇತ್ರದ ಸಾಮಾನ್ಯ ವರ್ಗದ ಬಡ ವರ್ಗದವರಿಗೆ ಸೂರು ಕಲ್ಪಿಸುವ ಉದ್ಧೇಶದಿಂದ ವಸತಿ ಸಚಿವರಾದ ಕೃಷ್ಣಪ್ಪನವರಿಗೆ ಬೇಡಿಕೆ ನೀಡಿ ಅವರಿಂದ ವಿಶೇಷ ಅನುದಾನದಲ್ಲಿ ಸಾಮಾನ್ಯ ವರ್ಗಕ್ಕೆ 4 ಸಾವಿರ ಮನೆಗಳನ್ನು ಆಶ್ರಯಯೋಜನೆಯಡಿ ಮಂಜೂರು ಮಾಡಿಸಿದ್ದು ಮಂಜೂರಾಗಿರುವ ಮನೆಗಳನ್ನು ಕ್ಷೇತ್ರದ 36 ಗ್ರಾ.ಪಂಗೆ ತಲಾ 10 ರಂತೆ ಹಂಚಿಕೆ ಮಾಡಲಾಗಿದ್ದು ಸದರಿ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಗ್ರಾಮ ಸಭೆಗಳನ್ನು ನಡೆಸಿ ಪಾರದರ್ಶಕವಾಗಿ ಪಕ್ಷಾತೀತವಾಗಿ ಬಡವರಿಗೆ ಹಂಚುವ ಕಾರ್ಯವನ್ನು ಖುದ್ದಾಗಿ ಜನಪ್ರತಿನಿಧಿಗಳೊಂದಿಗೆ ಮಾಡುತ್ತಿದ್ದು ಈಗಾಗಲೇ ಎಸ್ಸಿ/ಎಸ್ಟಿ ಮಿತಿ ಇಲ್ಲದೆ ಮನೆಗಳನ್ನು ಮಂಜೂರುಮಾಡಲಾಗುತಿದ್ದು ಸಮಾನ್ಯ ವರ್ಗಕ್ಕೆ ಈ ವಿಶೇಷ ಮನೆಗಳನ್ನು ನೀಡುವ ಯೋಜನೆಯಾಗಿದೆ ಎಂದರು.
ಕೊರಟಗೆರೆ ಕ್ಷೇತ್ರದ ಹನುಮಂತಗಿರಿ ಗ್ರಾಮದ ಕ್ಷೆತ್ರಿಯ ತಿಗಳ ಸಮುದಾಯಕ್ಕೆ ವಿಧಾನ ಪರಿಷತ್ ಸದಸ್ಯರ ಅನುಧಾನ ನೀಡಿದ್ದು ಕಟ್ಟಡವು ಹಲವು ವರ್ಷಗಳಿಂದ ಅಪೂರ್ಣವಾಗಿದ್ದು ಸಮಾಜದ ಬೇಡಿಕೆಯಂದತೆ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿ ಹಿಂದುಳಿದ ವರ್ಗಗಳ ಇಲಾಖೆಯಿಂದ ವಿಶೇಷ ಮಂಜುರಾತಿಯಲ್ಲಿ 50 ಲಕ್ಷ ರೂಗಳ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಿರುವುದಾಗಿ ತಿಳಿಸಿ ಸಕರ್ಾರ ಅಹಿಂದಾ ಅಭಿವೃದ್ದಿಗೆ ಬದ್ದವಿದೆ ಎಂದರು.
ಈ ಸಂದರ್ಭದಲ್ಲಿ ತಿಗಳ ಸಮುದಾಯದ ಕುಂಭಯ್ಯ, ರಾಮಕೃಷ್ಣಯ್ಯ, ನರಸಿಂಹಯ್ಯ, ವೆಂಕಟಪ್ಪ, ಲಕ್ಷ್ಮೀಕಾಂತಯ್ಯ, ಯದುನಂದನ್, ರಾಮಣ್ಣ, ಕೆಪಿಸಿಸಿ ಕಾರ್ಯದಶರ್ಿ ದಿನೇಶ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಕೃಷ್ಣಯ್ಯ, ಅರಕೆರೆ ಶಂಕರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
(ಚಿತ್ರ ಇದೆ)
ಕೊರಟಗೆರೆ ಚಿತ್ರ.:- ಕೊರಟಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಹನುಮಂತಗಿರಿ ಗ್ರಾಮದಲ್ಲಿ ತಿಗಳ ಸಮುದಾಯ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ಗೆ ಅಭಿನಂಧಿಸಲಾಯಿತು.

 

EDITED/REPORTED: RAGHAVENDRA D.M 

 

Edited By

Raghavendra D.M

Reported By

Raghavendra D.M

Comments