ನಮ್ಮ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ-ಧರ್ಮಗಳಿಗೂ ಸಮಾನತೆ : ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್

23 Dec 2017 7:47 PM |
526 Report

ಕೊರಟಗೆರೆ :- ನಮ್ಮ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ-ಧರ್ಮಗಳಿಗೂ ಸಮಾನತೆಯನ್ನು ನೀಡುವ ರೀತಿಯಲ್ಲಿದ್ದು ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸಮಾನತೆ ಹಕ್ಕಿದ್ದು ಇದರ ಶ್ರೇಯ ಡಾ. ಬಾಬಸಾಹೇಬ ಅಂಬೇಡ್ಕರ್ ಸಲ್ಲುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು. ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಕನರ್ಾಟಕ ರಾಜ್ಯ ಸಕರ್ಾರಿ ಎಸ್.ಸಿ/ಎಸ್.ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಶಾಖೆಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

 

 

ಕೊರಟಗೆರೆ :- ನಮ್ಮ ಸಂವಿಧಾನದಲ್ಲಿ ಪ್ರತಿಯೊಂದು ಜಾತಿ-ಧರ್ಮಗಳಿಗೂ ಸಮಾನತೆಯನ್ನು ನೀಡುವ ರೀತಿಯಲ್ಲಿದ್ದು ದೇಶದ ಪ್ರತಿಯೊಬ್ಬ ನಾಗರೀಕನಿಗೂ ಸಮಾನತೆ ಹಕ್ಕಿದ್ದು ಇದರ ಶ್ರೇಯ ಡಾ. ಬಾಬಸಾಹೇಬ ಅಂಬೇಡ್ಕರ್ ಸಲ್ಲುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ತಿಳಿಸಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ನಡೆದ ಕನರ್ಾಟಕ ರಾಜ್ಯ ಸಕರ್ಾರಿ ಎಸ್.ಸಿ/ಎಸ್.ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಶಾಖೆಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ ಪೂರ್ವದಲ್ಲಿ ಹಾಗೂ ಸ್ವಾತಂತ್ರಯ ನಂತರ 25ವರ್ಷಗಳ ಕಾಲ ಎಸ್ಸಿ/ಎಸ್ಟಿ ಸಮುದಾಯವನ್ನು ವಿದ್ಯಾಭ್ಯಾಸ ಸೇರಿದಂತೆ ಇತರೆ ಸೌಲಭ್ಯಗಳಿಂದ ದೂರ ಇಡಲಾಗಿತು ನಂತರ ಬಂದ ಸಕರ್ಾರಗಳು ಎಸ್ಸಿ/ಎಸ್ಟಿ ವಿದ್ಯಾಥರ್ಿಗಳಿಗೆ ಬಹಳಷ್ಟು ಯೋಜನೆಗಳನ್ನು ನೀಡಿದ್ದು ವಿದ್ಯಾಥರ್ಿಗಳು ಸಮರ್ಪಕವಾಗಿ ಬಳಸಿಕೊಂಡು ಉತ್ತಮ ಸಾಧನೆ ಮಾಡುವ ನಿಟ್ಟಿನಲ್ಲಿ ಶ್ರಮವಹಿಸಬೇಕು ಎಂದರು.
ದೇಶದಲ್ಲಿ ಶೇ.78 ರಷ್ಟು ಸಾಕ್ಷರತೆ ಇದೆ ಆದರೆ ಎಸ್ಸಿ/ಎಸ್ಟಿ ಸಾಕ್ಷರತೆ ಶೇ.50 ಕ್ಕಿಂತಲ್ಲೂ ಕಡಿಮೆ ಇದೆ ಕನರ್ಾಟಕ ರಾಜ್ಯದಲ್ಲಿ ಶೇ.72ರಷ್ಟು ಸಾಕ್ಷರತೆಯಿದ್ದು ಇದರಲ್ಲಿ ಎಸ್ಸಿ/ಎಸ್ಟಿ ಶೇ.67ರಷ್ಟು ಸಾಕ್ಷರರಾಗಿದ್ದಾರೆ ಈ ಅಂಕಿ ಅಂಶ ನೋಡಿದರೆ ರಾಜ್ಯದಲ್ಲಿ ಸರಕಾರಗಳ ಸೌಲಭ್ಯಗಳು ಸಮರ್ಪಕವಾಗಿ ಬಳಕೆಯಾಗುತ್ತಿವೆ. ಶೇ.24.1ರಷ್ಟು ಅನುದಾನವನ್ನು ಜನಸಂಖ್ಯೆ ಆಧಾರದ ಮೇಲೆ ಮಂಜೂರು ಮಾಡಿರುವ ದೇಶದಲ್ಲಿಯೇ ಪ್ರಥಮವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸಕರ್ಾರದಾಗಿದೆ ಎಂದರು.
ಶಾಸಕ ಪಿ.ಆರ್ ಸುಧಾಕರ್ ಲಾಲ್ ಮಾತನಾಡಿ ಪ್ರತಿಭೆಯನ್ನುವುದು ಜಾತಿ ಧರ್ಮವನ್ನು ಮೀರುವ ಶಕ್ತಿಯಾಗಿದೆ. ಪ್ರತಿಯೊಂದು ಮಗುವಿನಲ್ಲೂ ವಿಶೇಷವಾದ ಪ್ರತಿಭೆ ಇದ್ದು, ಅದನ್ನು ಗುರುತಿಸಿ ಹೊರ ತೆಗೆಯುವ ಪ್ರಯತ್ನ ನಡೆಯಬೇಕು ವಿದ್ಯೆಯು ನಮ್ಮ ಜೀವನದಲ್ಲಿ ಮಹತ್ತರ ಬದಲಾವಣೆ ತರುವ ಶಕ್ತಿಯಿದ್ದು ಇದಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದರು.
ಈ ಸಂಧರ್ಭದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರ ಪ್ರತಿಭಾನ್ವಿತ ವಿದ್ಯಾಥರ್ಿಗಳನ್ನು ಮತ್ತು ಜನಪ್ರತಿನಿಧಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ವಿ.ಎಸ್ ಉಗ್ರಪ್ಪ, ಜಿ.ಪಂ ಸದಸ್ಯರಾದ ವೈ.ಎಸ್ ಹುಚ್ಚಯ್ಯ, ಪ್ರೇಮಾ, ಶಿವರಾಮಯ್ಯ, ತಾ.ಪಂ ಅಧ್ಯಕ್ಷ ಕೆಂಪರಾಮಯ್ಯ, ಉಪಾಧ್ಯಕ್ಷೆ ನರಸಮ್ಮ, ಸದಸ್ಯರಾದ ಬೋರಣ್ಣ, ಪ.ಪಂ ಉಪಾಧ್ಯಕ್ಷ ಕೆ.ವಿ ಮಂಜುನಾಥ್, ಸದಸ್ಯರಾದ ಲಾರಿಸಿದ್ದಪ್ಪ, ಕೆ.ಆರ್ ಓಬಳರಾಜು, ಸಕರ್ಾರಿ ನೌಕರರ ಸಂಘದ ಗೌರವಾಧ್ಯಕ್ಷ ಎಲ್. ಕಾಮಯ್ಯ, ಎಸ್.ಸಿ/ಎಸ್.ಟಿ ನೌಕರರ ಸಂಘದ ಚಿಕ್ಕಣ್ಣ, ಗೌರವಾಧ್ಯಕ್ಷ ರಾಮಹನುಮಯ್ಯ, ತಿಪ್ಪೇಸ್ವಾಮಿ, ಲಕ್ಷ್ಮೀಪುತ್ರ, ಶಿವಕುಮಾರ್, ಮಲ್ಲೇಶ್ ಸೇರಿದಂತೆ ಇತರರು ಹಾಜರಿದ್ದರು.
(ಚಿತ್ರ ಇದೆ)
ಕೊರಟಗೆರ ಚಿತ್ರ1:- ಎಸ್.ಸಿ/ಎಸ್.ಟಿ ನೌಕರರ ಸಮನ್ವಯ ಸಮಿತಿ ತಾಲ್ಲೂಕು ಶಾಖೆಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಕ್ಕಳನ್ನು ಸನ್ಮಾನಿಸಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ, ಶಾಸಕ ಪಿ.ಆರ್ ಸುಧಾಕರ್ಲಾಲ್, ಎಂಎಲ್ಸಿ ಉಗ್ರಪ್ಪ ಸೇರಿದಂತೆ ಇತರರು ಇದ್ದರು. 

Edited By

Raghavendra D.M

Reported By

Raghavendra D.M

Comments