"ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ" : ಡಿಕೆ ಶಿವಕುಮಾರ್

22 Dec 2017 10:49 AM |
1905 Report

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ "ಕಾಂಗ್ರೆಸ್‌ ನಡಿಗೆ ವಿಜಯದ ಕಡೆಗೆ' ಎಂಬ ಘೋಷಣೆಯೊಂದಿಗೆ ಕೋಲಾರ ಜಿಲ್ಲೆ ಮುಳಬಾಗಿಲಿನಲ್ಲಿ ಏರ್ಪಡಿಸಲಾಗಿದ್ದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ಬಿಜೆಪಿಯವರು ನಾವೆಲ್ಲಾ ಹಿಂದೂ, ನಾವೆಲ್ಲಾ ಮುಂದು ಎಂದು ಡಿಕೆ ಶಿವಕುಮಾರ್ ಹೇಳಿದರು.

ಆದರೆ, ಕಾಂಗ್ರೆಸ್‌ನವರು ಎಲ್ಲಾ ಸಮುದಾಯದ ಜನರನ್ನೂ ಒಂದಾಗಿ ಕಾಣುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದರು. ಉತ್ತರ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬಹುದು. ಆದರೆ, ದಕ್ಷಿಣ ಭಾರತದಲ್ಲಿ ಅದು ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿಪಾದಿಸಿದರು.

ನಿರಂತರ ವಿದ್ಯುತ್‌: ಸಿದ್ದರಾಮಯ್ಯ ಮತ್ತು ತಾವು ಪ್ರತಿ ತಾಲೂಕಿಗೂ 20 ಸಾವಿರ ಮೆ.ವ್ಯಾ.ವಿದ್ಯುತ್‌ ಸರಬರಾಜು ಮಾಡಲು ಪ್ರಯತ್ನಿಸಿದ್ದೇವೆ. ರಾಜ್ಯದಲ್ಲಿ ಸತತ ಬರಗಾಲವಿದ್ದರೂ 20 ಲಕ್ಷ ಕುಟುಂಬಗಳ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್‌ ನೀಡುತ್ತಿದ್ದೇವೆ ಎಂದರು.

 

Edited By

dks fans

Reported By

dks fans

Comments