ಟ್ಯಾಟೂ ವೀರನನ್ನ ಭೇಟಿಯಾದ ರಿಯಲ್ ಸ್ಟಾರ್ ಉಪ್ಪಿ

20 Dec 2017 10:40 AM |
1258 Report

ಉಪೇಂದ್ರ ಅವರನ ನೋಡಬೇಕು ಅಂತ ಬೆನ್ನ ತುಂಬಾ ಉಪ್ಪಿ ಮುಖವನ್ನ ಟ್ಯಾಟೂ ಹಾಕಿಸಿಕೊಂಡಿದ್ದ ಸ್ಟೋರಿಯನ್ನ ಬಿತ್ತರಿ ಬಿತ್ತರಿಸಲಾಗಿದೆ. ಇದನು ನೋಡಿದ ಉಪೇಂದ್ರ ತಮ್ಮ ಅಭಿಮಾನಿಯನ್ನ ಮನೆಗೆ ಕರೆದು ಉಪಚರಿಸಿದ್ದಾರೆ. ರಿಯಲ್ ಸ್ಟಾರನ್ನ ರಿಯಲ್ ಆಗಿ ನೋಡಿದ ಫ್ಯಾನ್ ಫುಲ್ ಖುಷಿಯಾಗಿದ್ದಾರೆ.

ಪ್ರಜಾಕಾರಣದಲ್ಲಿ ಉಪ್ಪಿಗೆ ಯಶಸ್ಸು ಸಿಗಬೇಕು ಅಂತ ಅಭಿಮಾನಿ ಅರ್ಜುನ್, ಬೆನ್ನ ತುಂಬಾ ಉಪೇಂದ್ರ ಮುಖವನ್ನ ಟ್ಯಾಟೂ ಹಾಕಿಸಿಕೊಂಡಿದ್ದರು. ಈ ಬಗ್ಗೆ ಉಪೇಂದ್ರ, ಅರ್ಜುನ್ ಹಾಗೂ ಟ್ಯಾಟೂ ಹಾಕಿದ ಶಂಕರ್‍ರನ್ನು ಭೇಟಿ ಮಾಡಿ ಸುಮಾರು 20 ನಿಮಿಷ ಮಾತನಾಡಿದ್ದಾರೆ.ಟ್ಯಾಟೂ ನೋಡಿ ಅಚ್ಚರಿ ವ್ಯಕ್ತಪಡಿಸಿದ್ದಲ್ಲದೇ ಅಭಿಮಾನಿಗೆ ಸನ್ಮಾನ ಮಾಡಿ ಕಳಿಸಿದ್ದಾರೆ. ಜೊತೆಗೆ ಒಂದು ಪುಸ್ತಕವನ್ನ ಗಿಫ್ಟ್ ಆಗಿ ನೀಡಿದ್ದಾರೆ.ಪ್ರಜಾಕೀಯದ ಬ್ಯುಸಿಯಲ್ಲೂ ಉಪೇಂದ್ರ ತಮ್ಮ ಅಭಿಮಾನಿಗಳನ್ನ ಮೀಟ್ ಮಾಡಿ ಸಮಯ ಕಳೆದಿದ್ದು ಮೆಚ್ಚುವ ವಿಚಾರವೇ ಸರಿ.

 

Edited By

Shruthi G

Reported By

upendra fans

Comments