ರಿಯಲ್ ಸ್ಟಾರ್ ಉಪ್ಪಿಯ ಈ ವರ್ಷದ ಕಿರು ನೋಟ

19 Dec 2017 3:58 PM |
1684 Report

'ಓಂ' ಚಿತ್ರದ ಮೂಲಕ ಕನ್ನಡ ಚಿತ್ರ ರಂಗದ ಇತಿಹಾಸ ಸೃಷ್ಟಿಸಿದ ನಟ ನಿರ್ದೇಶಕ ಉಪೇಂದ್ರ ನಂತರ ಎ ಚಿತ್ರದ ಮೂಲಕ ಸ್ವತಃ ನಟರಾಗಿ ಹೊರ ಹೊಮ್ಮಿದರು. ಕಳೆದ ಒಂದೂವರೆ ದಶಕಗಳಿಂದ ಕನ್ನಡ ಚಿತ್ರಗಳ ಮೂಲಕ ಮನೆಮಾತಾಗಿರುವ ಉಪೇಂದ್ರ ಇದೀಗ ರಾಜಕೀಯದತ್ತ ಮುಖ ಮಾಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಹೊಸ ಅಲೆಯ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡ ಪ್ರತಿಭಾವಂತ ನಟ ಮತ್ತು ನಿರ್ದೇಶಕ. ರಾಜಕೀಯ ಎಂಬುದು ರಾಜಕಾರಣಿಗಳಿಗೆ ಮಾತ್ರ ಸಂಬಂಧಿಸಿದ ಕ್ಷೇತ್ರವಲ್ಲ ಪ್ರಜೆಗಳನ್ನೊಳಗೊಂಡ ರಾಜಕೀಯ ಎಂಬ ಪರಿಕಲ್ಪನೆ ಹೊರ ತಂದರು. ಈ ಮೂಲಕ ಪ್ರಜಾಕೀಯ ಎಂಬ ಕಲ್ಪನೆ ಮೂಲಕ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ಸ್ಥಾಪಿಸಿ ಕರ್ನಾಟಕದ ಜನರ ಮನೆಮಾತಾಗಿದ್ದಾರೆ.ಇದಕ್ಕೆ ಕಾಲವೇ ಉತ್ತರ ನೀಡಬೇಕಿದೆ. ಈಗಾಗಲೇ ಕಳೆದ ನವೆಂಬರ್ 1 ರಂದು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ ರಾಜಕೀಯ ಪಕ್ಷ ಘೋಷಿಸಿದರು. ಕೆಪಿಜೆಪಿ ಪಕ್ಷದಿಂದ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದಾರೆ. ಕಾರ್ಮಿಕರು, ಬಡವರು ಶ್ರಮಿಕರು, ಹಾಗೂ ಕೆಳ ಮಧ್ಯಮ ವರ್ಗದ ಜನರನ್ನು ಗುರಿಯಾಗಿಟ್ಟುಕೊಂಡು ರಾಜಕೀಯ ಪಕ್ಷವೊಂದನ್ನು ರಚಿಸಬೇಕು ಹಾಗೂ ಅದರ ಮೂಲಕ ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಕೈಗೊಳ್ಳಬೇಕು. ತೆರಿಗೆ ಹಣವನ್ನು ಜನರ ಅಭಿವೃದ್ಧಿಗಾಗಿ ವಿನಿಯೋಗಿಸಬೇಕು. ಎಂಬ ಮಹತ್ವಾಕಾಂಕ್ಷೆಯೊಂದಿಗೆ ಉಪೇಂದ್ರ ರಾಜಕೀಯಕ್ಕೆ ಪ್ರವೇಶಿಸುತ್ತಿದ್ದಾರೆ.

Edited By

Uppendra fans

Reported By

upendra fans

Comments