ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ : ಶಾಸಕ ಪಿ.ಆರ್ ಸುಧಾಕರ್ ಲಾಲ್

18 Dec 2017 8:00 PM |
391 Report

ಕೊರಟಗೆರೆ  :-ಕ್ಷೇತ್ರದ ಮತದಾರರ ಋಣ ನನ್ನ ಮೇಲಿದೆ ಈ ಭಾರಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿದ್ದೇನೆ ಎಂದು ಶಾಸಕ ಪಿ.ಆರ್ ಸುಧಾಕರ್ ಲಾಲ್ ತಿಳಿಸಿದರು. ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ತುಂಬಾಡಿ ಗ್ರಾಪಂ ಕೇಂದ್ರಸ್ಥಾನದಲ್ಲಿ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

2013ನೇ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತಧಾರರಿಗೆ ನೀಡಿದ ಮಾತಿನಂತೆ ನಾನು ಕ್ಷೇತ್ರದಲ್ಲಿನ ಪ್ರತಿಯೊಂದು ಮನೆಯ ಮನೆಮಗನಾಗಿ ಕೆಲಸ ಮಾಡುತ್ತೀದ್ದೇನೆ ನನ್ನ ಕ್ಷೇತ್ರದಲ್ಲಿ ಯಾರ ಮನೆಯಲ್ಲಿ ನಾಮಕರಣವಾಗಲಿ ಅಥವಾ ಮದುವೆ ಸಮಾರಂಭವಾಗಲಿ ಮನೆಮಗನಾಗಿ ನಿಂತು ಕೆಲಸ ಮಾಡುವುದು ನನ್ನ ಕರ್ತವ್ಯ. ಯಾರ ಮನೆಯಲ್ಲಿ ಸಾವು ಸಂಭವಿಸಿದರೂ ಸಹ ಅಲ್ಲಿಗೆ ಬೇಟಿ ನೀಡಿ ಅವರಿಗೆ ಧೈರ್ಯತುಂಬಿ ಅವರ ಜೊತೆ ನಿಲ್ಲುವುದು ನನ್ನ ಕೆಲಸ ಅಂದು ನಾನು ಮತದಾರರಿಗೆ ಕೊಟ್ಟ ಮಾತಿನಂತೆ ಇಂದಿಗೂ ನಡೆದು ಕೊಳ್ಳುತ್ತೀದ್ದೇನೆ ಇದೇ ನನ್ನ ಮತ್ತು ಜೆಡಿಎಸ್ ಗೆಲುವಿನ ಶ್ರೀರಕ್ಷೆ ಎಂದರು.
ಯುವ ಜೆಡಿಎಸ್ ಮುಖಂಡರ ದುಶ್ಯಾಂತ್ಶ್ರೀನಿವಾಸ್ ಮಾತನಾಡಿ ಬಿಜೆಪಿ ಪಕ್ಷದವರು ಕಾಂಗ್ರೇಸ್ ಮುಕ್ತ ಕನರ್ಾಟಕ ಮಾಡುತ್ತೇವೆ ಎನ್ನುತ್ತಿದ್ದಾರೆ ಅದೇ ರೀತಿ ಕಾಂಗ್ರೇಸ್ ಬಿಜೆಪಿಯವನರನ್ನು ಜೈಲಿಗೆ ಕಳೂಹಿಸುವುದಾಗಿ ಹೇಳುತ್ತಿದ್ದಾರೆ ಇನ್ನುಳಿದಿರುವುದು ರಾಜ್ಯದಲ್ಲಿ ಜೆಡಿಎಸ್ ಮಾತ್ರ ಈ ಭಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ ನಾವು ಸದಾ ನಿಮ್ಮೊಂದಿಗಿರುತ್ತೇವೆ ನಿಮ್ಮ ಕೆಲಸ ಮಾಡುತ್ತೇವೆ ರಾಜ್ಯದ ಅಭಿವೃದ್ದಿ ಸಹಕರಿಸಿ ಎಂದು ತಿಳಿಸಿದರು.
ಜಿ.ಪಂ ಸದಸ್ಯ ಪ್ರೇಮಾ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಜೆ.ಎನ್ ನರಸಿಂಹರಾಜು, ಜಿಲ್ಲಾ ಕಾರ್ಯದಶರ್ಿ ಹೆಚ್.ಕೆ ಮಹಾಲಿಂಗಪ್ಪ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಮಹಿಳಾ ಘಟಕದ ಕಾರ್ಯಧ್ಯಕ್ಷೆ ಶಶಿಕಲಾಶ್ರೀಧರ್, ತಾಲೂಕು ಜೆಡಿಎಸ್ ಉಪಾಧ್ಯಕ್ಷರಾದ ಸಿಮೆಂಟ್ ಸಿದ್ದಮಲ್ಲಪ್ಪ ಮತ್ತು ಜಿ.ಎಂ.ಕಾಮರಾಜು , ತಾಲೂಕು ಪ್ರಧಾನ ಸಂಚಾಲಕರಾಗಿ ಟಿ.ವಿ.ದೊಡ್ಡಯ್ಯ, ನಗರದ ಎಸ್ಟಿ ಘಟಕ ಅಧಕ್ಷ ಲಕ್ಷ್ಮೀನಾರಾಯಣ, ಸಂಯೋಜಾಧ್ಯಕ್ಷರಾದ ಲಕ್ಷ್ಮೀಶ್ಪ್ರಸಾದ್ಗೆ ಜೆಡಿಎಸ್ ಪಕ್ಷದ ವತಿಯಿಂದ ಪ್ರಮಾಣ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜೆಡಿಎಸ್ ಅಧ್ಯಕ್ಷ ರಂಗಮುತ್ತಯ್ಯ, ಜಿಪಂ ಸದಸ್ಯರಾದ ಶಿವರಾಮಯ್ಯ, ತಿಮ್ಮಯ್ಯ, ತಾಪಂ ಸದಸ್ಯರಾದ ಯಲ್ಲಮ್ಮರಾಮಯ್ಯ, ಗ್ರಾಪಂ ಉಪಾಧ್ಯಕ್ಷ ಪ್ರಸನ್ನಕುಮಾರ್, ಸದಸ್ಯರಾದ ಕಲಾವತಿ, ಪ್ರಸನ್ನ, ರತ್ನಮ್ಮ, ವರದರಾಜು, ಸೋಮಶೇಖರ, ನಟರಾಜನಾಯ್ಕ, ಶೇಖರ್, ಜೆಡಿಎಸ್ ಮುಖಂಡರಾದ ಟಿ.ಸಿ.ಲಕ್ಷ್ಮೀಶ, ರತ್ನಾಕರ, ರಂಗಯ್ಯ, ಸಾಕರಾಜು, ಮಾರುತಿ, ದೇವರಾಜು, ವಿಜಯಕುಮಾರ್, ಹೇಮಂತ್ಗೌಡ, ನಟರಾಜು ಸೇರಿದಂತೆ ಇತರರು ಇದ್ದರು.(ಚಿತ್ರ ಇದೆ)
17 ಕೊರಟಗೆರೆ ಚಿತ್ರ2:- ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದಲ್ಲಿ ಏರ್ಪಡಿಸಲಾಗಿದ್ದ ಮನೆ ಮನೆಗೆ ಕುಮಾರಣ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕ ಪಿ.ಆರ್.ಸುಧಾಕರಲಾಲ್ ಸೇರಿದಂತೆ ಇತರರು ಇದ್ದರು.

Edited By

Raghavendra D.M

Reported By

Raghavendra D.M

Comments