ನಮಗೆ ಕಡಿಮೆ ಸ್ಥಾನ ಬಂದಿದೆ, ಆದರೆ ಆತ್ಮವಿಶ್ವಾಸ ಕಳೆದುಕೊಳ್ಳುವಷ್ಟಲ್ಲ: ಡಿಕೆಶಿ

18 Dec 2017 5:59 PM |
1981 Report

ಬಿಜೆಪಿಯವರು 150 ದಾಟುತ್ತೇವೆ ಎಂದು ಹೇಳುತ್ತಿದ್ದರು. ನಮಗೆ ಕಡಿಮೆ ಸ್ಥಾನ ಬಂದಿರಬಹುದು. ಆದರೆ ಆತ್ಮವಿಶ್ವಾಸ ಕಳೆದುಕೊಳ್ಳುವಷ್ಟು ಆಗಲಿಲ್ಲ. ನಮ್ಮ ಪಕ್ಷವನ್ನ ಹೋಳು ಮಾಡಿದ್ರು. ಗುಜರಾತ್ ಮತದಾರರು ನಮ್ಮ ಪರವಾಗಿ ನಿಂತಿದ್ದಾರೆ. ಆದ್ದರಿಂದ ಅವರೆಲ್ಲರಿಗೂ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಡಿಕೆಶಿ ಹೇಳಿದರು.

ರಾಜ್ಯದಲ್ಲೂ 2008 ರಿಂದ 2013 ರವರೆಗೆ ಬಿಜೆಪಿ ಆಡಳಿತ ನಡೆಸಿದೆ. ಆದ್ದರಿಂದ ಜನರು ಅವರ ಆಡಳಿತವನ್ನು ನೋಡಿದ್ದಾರೆ. ಅಲ್ಲಿನ ಗಾಳಿ ಇಲ್ಲಿ ಬೀಸುತ್ತೆ ಅನ್ನೋದು ಸುಳ್ಳು. ಪಕ್ಕದಲ್ಲಿ ಬಿಹಾರ, ಪಂಜಾಬ್, ತೆಲಂಗಾಣ ಇದ್ರೂ ಗಾಳಿ ಬೀಸಲಿಲ್ಲ. ಆದ್ದರಿಂದ ಇಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. ನಾವೆಲ್ಲ ಕರ್ನಾಟಕದ ಚರಿತ್ರೆಯನ್ನು ನೋಡಿದ್ದೇವೆ. ಹಿಂದೆ ಜನತಾ ಸರ್ಕಾರ, ವಾಜಪೇಯಿ ಸರ್ಕಾರ ಕೇಂದ್ರದಲ್ಲಿದ್ದಾಗಲೂ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿತ್ತು. ಬಿಜೆಪಿಯವರು ಆಸೆ ಪಡುವುದರಲ್ಲಿ ತಪ್ಪೇನಿಲ್ಲ.

ಆದರೆ ರಾಜ್ಯದಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುತ್ತೆ. ಸೂರತ್ ಮತ್ತು ಅಹಮದಾಬಾದ್‍ನಲ್ಲಿನ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಎಷ್ಟು ಬೆದರಿಕೆ ಒಡ್ಡಬೇಕಿತ್ತೋ ಅಷ್ಟೆಲ್ಲವನ್ನೂ ಬಿಜೆಪಿ ಮಾಡಿದೆ. ನಾವು ಹಿಂದುಗಳಲ್ಲವೇ ಬಿಜೆಪಿಯವರು ಮಾತ್ರ ಹಿಂದುಗಳೇ..? ನಾವು ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿಕೊಂಡು ಪಕ್ಷ ನಡೆಸುತ್ತೇವೆ ಎಂದರು. ರಾಜ್ಯಸಭಾ ಚುನಾವಣೆಯ ವೇಳೆ ಕಾಂಗ್ರೆಸ್ ನಿಂದ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹ್ಮದ್ ಪಟೇಲ್ ಕಣಕ್ಕೆ ಇಳಿದಿದ್ದರು. ಈ ವೇಳೆ ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದರು. ಡಿಕೆ ಶಿವಕುಮಾರ್ ರೆಸಾರ್ಟ್ ನಲ್ಲಿ ಕೈ ಶಾಸಕರನ್ನು ನೋಡಿಕೊಳ್ಳುವ ಉಸ್ತುವಾರಿ ವಹಿಸಿಕೊಂಡಿದ್ದರು.

 

Edited By

dks fans

Reported By

dks fans

Comments