ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ಕಿಡಿಕಾರಿದ ಡಿ.ಕೆ‌ ಶಿವಕುಮಾರ್

15 Dec 2017 3:53 PM |
1771 Report

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ‌ ಹಾಕಿಕೊಂಡಿರುವ ಸ್ಟೇಟಸ್ ಕೇವಲ ಅವರ ಸ್ಟೇಟಸ್ ಮಾತ್ರವಲ್ಲ, ಅದು ಬಿಜೆಪಿ ಪಕ್ಷದ ಸ್ಟೇಟಸ್ ಆಗಿದೆ ಎಂದು ಇಂಧನ ಸಚಿವ ಡಿ.ಕೆ‌ ಶಿವಕುಮಾರ್ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ತಾವು ಬಹಳ ಸುಸಂಸ್ಕೃತರು ಎಂದು ಹೇಳಿಕೊಳ್ಳುತ್ತಾರೆ. ಅವರ ಭಾಷೆಯೇ ಅವರ ಸಂಸ್ಕೃತಿ ಎಂತದ್ದು ಎಂದು ತೋರಿಸುತ್ತದೆ. ಕೆ.ಎಸ್. ಈಶ್ವರಪ್ಪ ಅವರ ಮಾಸ್ಟರ್. ಆ ಮಾಸ್ಟರ್ ಪಾಠ ಮಾಡಿದ್ದಾರೆ, ನಾವೆಲ್ಲ ಅದನ್ನ ನೋಡಿದ್ದೇವೆ. ಈಶ್ವರಪ್ಪ ಪಾಠದಂತೆ ಅವರೆಲ್ಲಾ ನಡೆದುಕೊಳ್ಳುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ ಕೆಲ ದಿನಗಳ ಹಿಂದೆ ಸತ್ಯವನ್ನ ತಾವೇ ಒಪ್ಪಿಕೊಂಡಿದ್ದಾರೆ. ಅವರ ಪಕ್ಷದ ಸಂಸ್ಕೃತಿಯೇ ಅಂತದ್ದು ಎಂದು ಅನಂತ್ ಕುಮಾರ್ ಹೆಗಡೆ ಜೊತೆಗೆ ಪ್ರತಾಪ್ ಸಿಂಹ ಹಾಗೂ ಕೆ.ಎಸ್. ಈಶ್ವರಪ್ಪಗೂ ಡಿಕೆಶಿ ಚಾಟಿ ಬೀಸಿದರು.

Edited By

dks fans

Reported By

dks fans

Comments