ಜನರ ಮಧ್ಯೆ ಕೆಲಸ ಮಾಡುವ 224 ಜನ ಸಿಎಂ ನನಗೆ ಬೇಕು : ಉಪ್ಪಿ ಕರೆ

05 Dec 2017 3:21 PM |
593 Report

ರಾಜ್ಯದಲ್ಲಿ ಜನರ ಮಧ್ಯೆ ಕೆಲಸ ಮಾಡುವ 224 ಜನ ಸಿಎಂ ನನಗೆ ಬೇಕಿದ್ದಾರೆ. ಅವರು ತಮ್ಮ ಕ್ಷೇತ್ರದಲ್ಲಿ ಮುಖ್ಯಮಂತ್ರಿಗಳಂತೆ ಜನರ ಸಮಸ್ಯೆಗಳನ್ನು ಪರಿಹರಿಸಬೇಕು" ಎಂದು ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ (ಕೆಪಿಜೆಪಿ) ಸಂಸ್ಥಾಪಕ ನಟ ಉಪೇಂದ್ರ ತಿಳಿಸಿದರು.

ಎಲ್ಲಿ ಸತ್ಯ ಇರುತ್ತದೋ ಅಲ್ಲಿ ಧರ್ಮ ಇರುತ್ತದೆ. ಸತ್ಯ ಇದ್ದಲ್ಲಿ ಧರ್ಮದ ಅಗತ್ಯ ಇರುವುದಿಲ್ಲ. ಅನ್ಯಾಯವನ್ನು ಪ್ರತಿಭಟಿಸುವ ಮನಸ್ಥಿತಿ ನಮ್ಮಲ್ಲಿ ಇಲ್ಲದಂತಾಗಿದೆ. ಶಿಕ್ಷಣ, ವೈದ್ಯಕೀಯ ವ್ಯವಸ್ಥೆ ಉಚಿತವಾಗಿ ಸಿಕ್ಕಿದರೆ ಯಾರೂ ಭೃಷ್ಟಾಚಾರಿಗಳು ಆಗುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು. ಈ ದೇಶದಲ್ಲಿ ಶೇ 80ರಷ್ಟು ಒಳ್ಳೆಯವರಿದ್ದಾರೆ. ಆ 80ರಷ್ಟು ಜನರ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ. ಕೆಪಿಜೆಪಿಯ ಒಬ್ಬೊಬ್ಬ ಅಭ್ಯರ್ಥಿಯು ಮುಖ್ಯಮಂತ್ರಿಯಂತೆ ಕೆಲಸ ಮಾಡಬೇಕು. ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಯುವ ಮೊದಲು ರಾಜ್ಯಗಳಲ್ಲಿ ವಿಧಾನ ಸಭೆ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಏಕ ಕಾಲಕ್ಕೆ ನಡೆಯಬೇಕು ಎಂದು ಅವರು ಹೇಳಿದರು.

 

Edited By

Uppendra fans

Reported By

upendra fans

Comments