ಪ್ರತಿರೋಧದ ನಡುವೆ ಎತ್ತಿನಹೊಳೆ ಸಭೆ, ರೈತರ ಅಭಿಪ್ರಾಯಕ್ಕೆ ಮನ್ನಣೆ ನೀಡದ ಆರೋಪ, ಅಧಿಕಾರಿಗಳಿಂದ ಪರಿಹಾರದ ಭರವಸೆ.

05 Dec 2017 8:06 AM |
233 Report

ಭೂಮಿ ಕಳೆದುಕೊಳ್ಳುವ ರೈತರ ತೀವ್ರ ವಿರೋಧದ ನಡುವೆ ಎತ್ತಿನಹೊಳೆ ನೀರು ಸಂಗ್ರಹಿಸಲು ಸಾಸಲು ಹೋಬಳಿಯ ಗರುಡಗಲ್ಲು ಸಮೀಪ ನಿರ್ಮಿಸಲು ಉದ್ದೇಶಿಸಿರುವ ಬೈರಗೊಂಡ್ಲು ಜಲಾಶಯ ಕುರಿತು ಅಧಿಕಾರಿಗಳು ಗ್ರಾಮಸಭೆ ಸಡೆಸಿದರು. ಸಭೆ ಪ್ರಾರಂಭವಾಗುತ್ತಿದ್ದಂತೆ ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಜಲಾಶಯ ನಿರ್ಮಾಣಕ್ಕೆ ಜಾಗ ನೀಡುವುದಿಲ್ಲ, ನೀರು ಸಂಗ್ರಹಣೆಗೆ ನಾವು ಸೂಚಿಸಿರುವ ಪರ್ಯಾಯ ಮಾರ್ಗ ಜಾರಿಗೆತನ್ನಿ ಎಂದು ಘೋಷಣೆ ಕೂಗಿ ಹೊರನೆಡೆದರು. ಎತ್ತಿನಹೊಳೆ ಯೋಜನೆ ಬಯಲುಸೀಮೆಯ ಜನರ ಕುಡಿಯುವ ನೀರಿನ ಬವಣೆ ನೀಗಿಸಲು ರೂಪಿಸಲಾಗಿದೆ, ಜಲಾಷಯ ನಿರ್ಮಾಣದಿಂದ ಭೂಮಿ ಕಳೆದುಕೊಳ್ಳುವ ಹಾಗೂ ಸಂಪೂರ್ಣವಾಗಿ ಮುಳುಗಡೆಯಾಗಲಿರುವ ಗ್ರಾಮಗಳ ಜನರ ಸಾಮಾಜಿಕ ಸ್ಥಿತಿಗತಿ, ಜೀವನ ವಿಧಾನ ಸೇರಿ ಎಲ್ಲ ಮಾಹಿತಿ ಸಂಗ್ರಹಿಸಿ ಎಲ್ಲರೀತಿಯ ಪರಿಹಾರ ನೀಡಲಾಗುವುದು, ಗಾಳಿಸುದ್ಧಿ ನಂಬಿ ಆತಂಕಕ್ಕೆ ಒಳಗಾಗಬಾರದು, ರೈತರು ಮಾಹಿತಿ ಪಡೆದು ಅನುಮಾನ ಬಗೆ ಹರಿಸಿಕೊಳ್ಳಬೇಕೆಂದು ವಿಶೇಷ ಭೂಸ್ವಾದೀನ ಅಧಿಕಾರಿ ಆರತಿ ಆನಂದ್ ಹೇಳಿದರು.

ಭೂಮಿಗೆ ಸಂಭಂಧಿಸಿದಂತೆ ಕಂದಾಯ ವಿಭಾಗದಲ್ಲಿ ಇರುವ ಎಲ್ಲ ವಿವಾದ ತ್ವರಿತವಾಗಿ ಇತ್ಯರ್ಥಗೊಳಿಸಲು ಹಾಗೂ ಪೋಡಿ ಮುಕ್ತಗೊಳಿಸಲು ಉಪ ವಿಭಾಗಾಧಿಕಾರಿಗಳಿಗೆ, ತಹಸೀಲ್ದಾರ್ ರವರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡೀದ್ದಾರೆ ಎಂದು ತಿಳಿಸಿದರು.  ಶಾಸಕ ಟಿ. ವೆಂಕಟರಮಣಯ್ಯ, ಜಿ.ಪಂ. ಸದಸ್ಯೆ ಜಯಲಕ್ಷ್ಮಿ, ತಾ.ಪಂ. ಸದಸ್ಯೆ ಅನಿತಾ ರಾಜಗೋಪಾಲ್, ಸಾಸಲು ಗ್ರಾ.ಪಂ. ಅಧ್ಯಕ್ಷೆ ರಾಜಮ್ಮ, ಉಪಾಧ್ಯಕ್ಷ ರಾಜಣ್ಣ, ಉಪವಿಭಾಗಾಧಿಕಾರಿ ಎನ್. ಮಹೇಶ್ ಬಾಬು, ತಹಸೀಲ್ದಾರ್ ಬಿ.ಎ. ಮೋಹನ್ ಉಪಸ್ಥಿತರಿದ್ದರು.

ಗರುಡಗಲ್ಲಿನಲ್ಲಿ ನಡೆದ ಗ್ರಾಮ ಸಭೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರು ಮಾತನಾಡಲು ಪೋಲೀಸರು ಅಡ್ಡಿಪಡಿಸಿದ್ದಾರೆ, ಪೋಲೀಸರಿಂದ ರೈತರ ಬಾಯಿ ಮುಚ್ಚಿಸಿ ಗ್ರಾಮಸಭೆ ನಡೆಸುವ ಅಗತ್ಯ ಏನಿದೆ ಎಂದು ರೈತರು ಪ್ರಶ್ನಿಸಿದರು.

 

Edited By

Ramesh

Reported By

Ramesh

Comments