ನೇಯ್ಗೆಯ [ಪವರ್ ಲೂಂ] ಇತಿಹಾಸ

02 Dec 2017 3:47 PM |
1208 Report

ಸುಮಾರು ೩೦೦ ವರ್ಷಗಳ ಹಿಂದೆಯೆ ಮಗ್ಗಗಳು [ಪವರ್ ಲೂಂ] ತಯಾರಾದವು, ಇಂಗ್ಲೆಂಡಿನ ಎಡ್ಮಂಡ್ ಕಾರ್ಟ್ರೈಟ್ ೧೭೦೦ರಲ್ಲಿ ಮಗ್ಗ (looms) ಗಳನ್ನು ಆವಿಷ್ಕಾರ ಗೊಳಿಸಿದ, ೧೭೦೪ರಲ್ಲಿ ಸ್ಯಾಮುಯೆಲ್ ಕ್ರಾಂಪ್ಟನ್ ಎಂಬಾತ ಉಣ್ಣೆಯ ಹುರಿ ಸುತ್ತುವ ಯಂತ್ರ ತಯಾರಿಸಿ ೧೯೨೦ರಲ್ಲಿ ಕೋನ್ಸ್ ಮಿಲ್ಲ್ ಸ್ಥಾಪಿಸಿದ. 1808ರಲ್ಲಿ ಇಂಗ್ಲೆಂಡ್ನ ಜೋಸೆಫ್ ಜಕ್ವರ್ಡ ಎಂಬ ವಿಜ್ಞಾನಿ ತಯಾರಿಸಿದ ತಂತ್ರಜ್ಞಾನವನ್ನು (ಜಕಾರ್ಡ ಗಾಡಾ) ನಾವೆಲ್ಲರೂ ಇತ್ತೀಚಿಗೆ ಉಪಯೋಗಿಸುತ್ತಿರುವುದು. ನೇಕಾರಿಕೆ ನಮ್ಮ ಕುಲಕಸಬು ಆಗಿರುವುದರಿಂದ ನಾವು ಈ ಎಲ್ಲಾ ಸಾಧಕರ ಕನಸಿನೊಂದಿಗೆ ಬೆರೆತು ನೇಕಾರ ಕಲೆ ಒಂದು ವಾಣಿಜ್ಯಿಕವಾಗಿ ಮತ್ತು ಕಲಾತ್ಮಕ ಕರಕುಶಲ ಕ್ಷೇತ್ರವಾಗಿ ಬೆಳೆಯಬೇಕು, ನೇಕಾರರು ಆರ್ಥಿಕವಾಗಿ, ಸಾಮಾಜಿಕವಾಗಿ ನೆಲೆ ಕಂಡುಕೊಳ್ಳಲು ವಿವಿದ ತಂತ್ರಜ್ಞಾನ ಬಳಸಿ ನೂತನ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಬೇಕು, ಆಗಷ್ಟೇ ನೇಕಾರ ಉಳಿಯುತ್ತಾನೆ.

ನೇಕಾರರ ಬದುಕು ತುಂಬಾ ಕಷ್ಟಮಯವಾಗಿದೆ, ನಾವು ನೂಲಿನ ಹಾಗೆ ನಮ್ಮ ಜೀವನ ಸವೆಸುತ್ತಿದ್ದೇವೆ, ಎಂದೆಲ್ಲಾ ಪರಿತಪಿಸುತ್ತಾ ಸದ್ಯದ ಮಾರುಕಟ್ಟೆಗೆ ಬೇಕಿರುವ ಉತ್ಪನ್ನಗಳನ್ನು ಪೂರೈಸುತ್ತಿದ್ದೇವೆ ಹೊರತು ಮಗ್ಗಗಳಿಂದ ಹೊಸ ಹೊಸ ಉತ್ಪನ್ನಗಳನ್ನು ಕಂಡುಕೊಂಡು ಮಾರುಕಟ್ಟೆ ರೂಪಿಸುವ ಯೋಜನೆಗೆ ನಾವು ತಯಾರಾಗುತ್ತಿಲ್ಲ.  ಇನ್ನು ಇತಿಹಾಸ ಕೆಣಕಿದರೆ ಅಂದಿನ ಶ್ರಮ ಜೀವಿಗಳ ಪ್ರಯತ್ನವನ್ನು ಅವರ ಆಶಯವನ್ನು ವ್ಯರ್ಥಮಾಡುತ್ತಿದ್ದೇವೆ ಎನಿಸುತ್ತಿದೆ.

ಕೃಪೆ: ಅಶೋಕ ಗೊನಬಾಳ, ರಾಮದುರ್ಗ.

Edited By

Ramesh

Reported By

Ramesh

Comments