ಎಚ್ ಡಿಕೆ ಬಗ್ಗೆ ಶರವಣನ ಮನದಾಳದ ಮಾತು

01 Dec 2017 3:10 PM |
412 Report

ಚಿನ್ನದ ವ್ಯಾಪಾರಿಯಾಗಿ, ಸಮಾಜಸೇವಕನಾಗಿ, ಜೆಡಿಎಸ್ ವಕ್ತಾರನಾಗಿ, ದೇವೇಗೌಡರ ಆತ್ಮೀಯನಾಗಿ ಗುರುತಿಸಿಕೊಂಡಿರುವ ಟಿಎ ಶರವಣ ಅವರಲ್ಲಿ ಬೆಟ್ಟದಷ್ಟು ಆಕಾಂಕ್ಷೆಗಳಿವೆ. ಅವುಗಳಲ್ಲಿ ಕುಮಾರಣ್ಣನನ್ನು ಮುಖ್ಯಮಂತ್ರಿ ಪಟ್ಟದ ಮೇಲೆ ಕೂಡಿಸುವುದು ಮತ್ತು ತಾವೇ ಸ್ವತಃ ವಿಧಾನಸೌಧದ ಮೆಟ್ಟಿಲೇರುವುದೂ ಒಂದು.

ದೇವೇಗೌಡರಿಗಾಗಿ ಮತ್ತು ಕುಮಾರಣ್ಣನಿಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ, ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲಿಕ, ಸಮಾಜದ ಧುರೀಣ ಶರವಣ ಅವರು ಮುಂದಿನ ಚುನಾವಣೆ, ಜೆಡಿಎಸ್ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ.ಬಡವರಿಗಾಗಿ ಹಗಲಿರುಳೂ ಶ್ರಮಿಸುತ್ತಿರುವ 'ಟೈಗರ್' ಎಚ್.ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಮುಂದಿನ ಮುಖ್ಯಮಂತ್ರಿ ಆಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಯಾವುದೇ ಪಕ್ಷಗಳ ಹಂಗಿಲ್ಲದೆ ಜಾತ್ಯತೀತ ಜನತಾದಳ ಸ್ವಸಾಮರ್ಥ್ಯದಿಂದ ಸ್ಪಷ್ಟ ಬಹುಮತ ಪಡೆಯಲಿದೆ. ಇದು ನನ್ನ ಮಾತಲ್ಲ, ಇಡೀ ರಾಜ್ಯದ ಜನತೆಯ ಇಚ್ಛೆ ಎಂದು ಟಿ.ಎ ಶರವಣ ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜ ಸೇವೆ ಮಾಡುವಾಗ ರಾಜಕೀಯಕ್ಕೆ ಬಂದರೆ ಅನುಕೂಲ ಎಂದು ಜನರು ಅಭಿಪ್ರಾಯಪಟ್ಟರು. ಕಷ್ಟ ಹೇಳಿಕೊಂಡು ಬಂದ ಜನರಿಗೆ ಅಳಿಲು ಸೇವೆಯನ್ನು ಮಾಡುತ್ತಿದ್ದೇನೆ.ಎರಡು ಬಾರಿ ಬಸವನಗುಡಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಇಚ್ಛಿಸಿದ್ದೆ. ಆದರೆ, ದೇವೇಗೌಡರು ಎಂಎಲ್‌ಸಿ ಮಾಡಿದರು. ವಿಧಾನಸಭೆ ಶಾಸಕರು ಪರಿಷತ್ತಿಗೆ ಆರಿಸಿ ಕಳಿಸಿದರು. 'ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹಿರಿಯೂರು, ಚಿಕ್ಕಪೇಟೆ, ಬಸವನಗುಡಿ ಕ್ಷೇತ್ರದಿಂದ ಆಹ್ವಾನ ಬಂದಿದೆ. ಪಕ್ಷದ ನಾಯಕರ ತೀರ್ಮಾನ, ದೇವೇಗೌಡರ ಸಲಹೆಯಂತೆ ಮುಂದೆ ಹೋಗುವೆ. ನಾನು ಟಿಕೆಟ್ ಆಕಾಂಕ್ಷಿಯಲ್ಲ. ಕಾರ್ಯರ್ತರು ಹಿತೈಷಿಗಳ ಜೊತೆ ಚರ್ಚಿಸಿ ಸ್ಪರ್ಧೆ ಬಗ್ಗೆ ನಿರ್ಧಾರ ಕೈಗೊಳ್ಳುವೆ' ಎಂದು ಶರವಣ ಹೇಳಿದರು.ಚಾಮರಾಜಪೇಟೆ ಸೇರಿದಂತೆ ಬಂಡಾಯ ಶಾಸಕರು ಇರುವ ಕಡೆ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಲಿದೆ. ಯಾವುದೇ ಕ್ಷೇತ್ರವನ್ನು ಪಕ್ಷ ಕಳೆದುಕೊಳ್ಳುವುದಿಲ್ಲ. ಕ್ಷೇತ್ರದ ಜನರೇ ಅವರ ವಿರುದ್ಧ ನಿಂತಿದ್ದಾರೆ. ಪಕ್ಷಕ್ಕೆ ಮೋಸ ಮಾಡಿದ್ದಾರೆ, ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ' ಎಂದು ಜನರೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 'ಚಾಮರಾಜಪೇಟೆ, ಮಾಗಡಿ, ನಾಗಮಂಗಲ, ಪುಲಿಕೇಶಿ ನಗರ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ಬಲಿಷ್ಠ ಅಭ್ಯರ್ಥಿಯನ್ನು ಹಾಕುತ್ತೇವೆ. ಕಾರ್ಯಕರ್ತರ ಪಡೆ ಜೊತೆ ಕುಮಾರಸ್ವಾಮಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಕ್ಷೇತ್ರವನ್ನು ಉಳಿಸಿಕೊಳ್ಳುತ್ತೇವೆ' ಎಂದು ಶರವಣ ಹೇಳಿದರು.

ರಾಜಕಾರಣಿಗಳ ಮಕ್ಕಳು ರಾಜಕಾರಣಿ ಆಗಬಾರದು ಎಂಬ ನಿಯಮವಿಲ್ಲ. ಉತ್ತರ ಪ್ರದೇಶ ಸೇರಿದಂತೆ ಬೇರೆ-ಬೇರೆ ರಾಜ್ಯಗಳಲ್ಲಿಯೂ ಇಂತಹ ಬೆಳವಣಿಗೆ ನಡೆದಿವೆ. ನಾನು ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ಹೋಗುವುದಿಲ್ಲ. ವರಿಷ್ಠರು ಈ ಬಗ್ಗೆ ನಿರ್ಧಾರವನ್ನು ಕೈಗೊಳ್ಳುತ್ತಾರೆ' 'ಪ್ರಜ್ವಲ್ ರೇವಣ್ಣ ಅವರಿಗೆ ದೇವೇಗೌಡರು ಸಲಹೆ ಕೊಟ್ಟು, ಹುದ್ದೆ ನೀಡಿ ಆಶೀರ್ವಾದ ಮಾಡಿದ್ದಾರೆ. ರಾಜ್ಯದಲ್ಲಿ ಸಂಚಾರ ಮಾಡು, ಯುವಕರನ್ನು ಸಂಘಟನೆ ಮಾಡು ಎಂದು ಸೂಚಿಸಿದ್ದಾರೆ. ಪ್ರಜ್ವಲ್ ಅದೇ ಹದಿಯಲ್ಲಿ ಹೋಗುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು ಚುನಾವಣೆಗೆ ನಿಲ್ಲುತ್ತಿಲ್ಲ. ಚನ್ನಪಟ್ಟಣದಲ್ಲಿ ಕಾರ್ಯಕರ್ತರು ಒತ್ತಡ ಹಾಕುತ್ತಿದ್ದಾರೆ. ಕುಮಾರಸ್ವಾಮಿ ಈ ವಿಷಯದಲ್ಲಿ ತೀರ್ಮಾನ ಕೈಗೊಳ್ಳುತ್ತಾರೆ.2018ರ ಚುನಾವಣೆಯಲ್ಲಿಯೂ ಕ್ಷೇತ್ರ ಜೆಡಿಎಸ್ ಪಾಲಾಗಲಿದೆ' ಎಂದು ಶರವಣ ವಿಶ್ವಾ ವ್ಯಕ್ತಪಡಿಸಿದರು.ಮೊದಲು ಎಚ್ ಡಿಕೆ ಕ್ಯಾಬ್ ಸರ್ವೀಸ್ ಎಂದೇ ನಾಮಕರಣ ಮಾಡಲು ಚಿಂತಿಸಿದ್ದೆವು. ಆದರೆ, ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ ಟೈಗರ್ ಎಂದು ಬದಲಾವಣೆ ಮಾಡಿದೆವು. ಕುಮಾರಸ್ವಾಮಿ ಅವರನ್ನು ಕಾರ್ಯಕರ್ತರು ಪ್ರೀತಿಯಿಂದ ಹುಲಿ ಎನ್ನುತ್ತಾರೆ. ಅದಕ್ಕಾಗಿ ಹೆಸರು ಸೂಕ್ತವಾಗಿದೆ'. 'ಚಿರತೆ ಬಂದರೆ ವೇಗ ಇರುತ್ತದೆ. ಸಿಂಹ ಬಂದರೆ ಗರ್ಜನೆ ಇರುತ್ತದೆ. ಹುಲಿ ಬಂದರೆ ಗಾಂಭೀರ್ಯತೆ ಇರುತ್ತದೆ. ಕುಮಾರಸ್ವಾಮಿ ಅವರು ಬಂದರೆ ಎಲ್ಲವೂ ಇರುತ್ತದೆ. ಈಗ ಯೋಜನೆಯನ್ನು ಆರಂಭಿಸಿದ್ದೇವೆ. ಕೆಲವರು ಇದರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಚಿಕ್ಕಪುಟ್ಟ ಅಡೆತಡೆಗಳಿವೆ. ಅದನ್ನು ಬಗೆಹರಿಸಲು ತನ್ವೀರ್ರ್ ಬಾಷಾ ಅವರ ತಂಡ ಕೆಲಸ ಮಾಡುತ್ತಿದೆ.

Edited By

Shruthi G

Reported By

hdk fans

Comments